ಹಾವು

ಆಗ ಸಂಜೆ, ತಾನು ಜಗಲಿಯ ಮೇಲೆ ವಿರಾಮ ಕುರ್ಚಿಯಲ್ಲಿ ಒರಗಿದಾಗ, ಅಂಗಳದಲ್ಲಿ ಅಕ್ಕಿ ಆರಿಸುತ್ತಿದ್ದ ದೇವಿ ಚದುರಿ ಬಿದ್ದ ಅಕ್ಕಿಯ ಕಾಳುಗಳನ್ನು ಒಂದುಗೂಡಿಸುವ ನೆವದಲ್ಲಿ ಮೈಯನ್ನು ಬಗ್ಗಿಸಿ ಕೈಗಳನ್ನು ಮುಂದೆ ಚಾಚಿದಾಗ, ಬದಿಗೆ ಸರಿದ […]

ಮತ್ತೆ ಬರೆದ ಕವನಗಳು

ದಿನಾಂಕ ೧, ಜೂನ್ ೧೯೮೯ ಏರ್‌ಬ್ಯಾಗ್ ಹೆಗಲಿಗೇರಿಸಿ ರೈಲಿನಿಂದ ಕೆಳಗಿಳಿದೆ. ಬೆಳಗಿನ ಏಳುಗಂಟೆಯ ಸಡಗರದಲ್ಲಿ ಜಮ್ಮು ತವಿ ನಿಧಾನವಾಗಿ ಕಣ್ಣು ಬಿಡುತ್ತಿತ್ತು. ಚಾಯ್‌ವಾಲಾಗಳು ಗಂಟಲು ಹರಿಯುವಂತೆ ‘ಚಾಯಾ…ಚಾಯಾ…’ ಕೂಗುತ್ತ ಫ್ಲಾಟ್‌ಫಾರಂ ತುಂಬಾ ಓಡಾಡುತ್ತಿದ್ದರು. ಇಲ್ಲಿಂದ […]

ದೊರೆಸಾನಿ ಜಾಲಿಬೆಂಚಿ

ನನಗೆ ವಿಕಾಸ ವಾದದಲ್ಲಿ ನಂಬಿಕೆಯಿಲ್ಲವೆಂದು ಯಾರು ಹೇಳಿದ್ದು? ಆದರೆ ನನ್ನ ನಂಬಿಕೆಯನ್ನು ಮತ್ತೆ ಮತ್ತೆ ಸುಳ್ಳು ಮಾಡುವಂತೆ ಮಿಸುಕದ ಬಂಡೆಗಲ್ಲಿನಂತೆ ಬಿದ್ದುಕೊಂಡಿತ್ತು ಈ ಊರು. ಭೂಮಿಯ ಗುರುತ್ವಾಕರ್ಷಣೆಯ ಸೆಳೆತದಿಂದ ಜಾರಿ ವಥ ಭ್ರಾಂತವಾಗಿ ಬಿದ್ದಿದೆಯೇನೊ […]

ಹೊರ ಬಂದು ಕಲಿ ಗೆಳತಿ

ಸುದ್ದಿ ಕೇಳಿದ್ದು ನಿಜವೇ? ಸ್ನೇಹ ಸತ್ತಿದ್ದು ಹೌದೇ? ತಾನೇ ತಪ್ಪಾಗಿ ಕೇಳಿಸಿಕೊಂಡೆನೆ? ಅವಳು ಹೇಳಿದ್ದೇನು? “ಆಂಟೀ ಬೆಳಿಗ್ಗೆ ಅಮ್ಮ ಹೋಗಿಬಿಟ್ಟರು. ನಿನ್ನೆಯಿಂದ ಚೆಸ್ಟ್ ಪೇನ್ ಅನ್ನುತ್ತಿದ್ದರು. ಮನೆಗೆ ಬನ್ನಿ ಆಂಟಿ” ಎಂದು. ಅಷ್ಟೆ ಅವಳ […]

ತೂಫಾನ್ ಮೇಲ್

“ಮಾ ನನ್ನನ್ನು ನಸುಕಿಗೇ ಎಬ್ಬಿಸುತ್ತಿದ್ದಳು. ಸದ್ದು ಮಾಡದೆ ಮುಖ ತೊಳೆಸುತ್ತಿದ್ದಳು. ನಂತರ ಖೋಲಿಯ ಬಾಗಿಲು ಮುಚ್ಚಿ ಕತ್ತಲಲ್ಲೆ ಬೀಗ ಹಾಕಿ, ನನ್ನ ಮತ್ತು ಅವಳ ಪ್ಲಾಸ್ಟಿಕ್ ಚಪ್ಪಲಿಗಳನ್ನು ಕೈಲಿ ಹಿಡಿದುಕೊಂಡು ತೇಲಿಗಲ್ಲಿಯ ಕೊನೆತನಕ ಸದ್ದಾಗದಂತೆ […]

ಪಡೆದ ಮಗ

ಮಲ್ಲವ್ವ ಮುಂಜಾಲೆದ್ದು ಮಕ ತೊಳಕೊಂಡು ಹಣೆಗೆ ವಿಭೂತಿ ಹಚ್ಚಿಕೊಂಡು, ಒಲೆ ಸಾರಿಸಿ ಅದಕ್ಕೂ ವಿಭೂತಿ ಹಚ್ಚಿ, ಹತ್ತಿಕಟಿಗಿ ಪುಳ್ಳೀ ಒಲೆಯೊಳಗಿಟ್ಟು ಕಡ್ಡಿ ಗೀರಿ ಒಲಿಹಚ್ಚಿ ಆಲೀಮನಿ ಡಬರ್ಯಾಗ ಚಾ ಕಾಸಾಕ ಹತ್ತಿದಳು. ಬೆಲ್ಲ ಚಾಪುಡಿ […]

ಮಣ್ಣಾಂಗಟ್ಟಿ

ತಾಯಿ ನೆಬೀಸಾ ಮತ್ತು ಮಗಳು ಕೈರು ಬೇರೇನೂ ಕೆಲಸವಿಲ್ಲದೆ ಎರಡು ದಿನಗಳಿಂದ ಉಟ್ಟಿದ್ದ ಅದೇ ಬಟ್ಟೆಯಲ್ಲಿ ನದಿಯಕಲ್ಲಲ್ಲಿ ಕೂತುಕೊಂಡು ನೀರಲ್ಲಿ ಕಾಲಾಡಿಸುತ್ತ ಸುಮ್ಮನೆ ನಗುತ್ತ ನೋಡುತ್ತಿದರು.ಈ ತಾಯಿಯೂ ಮಗಳೂ ಇಂತಹ ಅನಾಹುತದ ನಡುವೆಯೂ ಹೀಗೆ […]

ವಿಚ್ಛಿನ್ನ

ತಾನು ಮತ್ತೆ ಒಂಟಿಯಾಗಿರಬಾರದೇಕೆ ಎನ್ನುವ ಯೋಚನೆ ರವಿಗೆ ಬಂದದ್ದು ಇದು ಮೊದಲನೆಯ ಬಾರಿಯೇನಾಗಿರಲಿಲ್ಲ. ಇತ್ತೀಚೆಗೆ ಗೀತ ಹತ್ತಿರವಿಲ್ಲದಿದ್ದಾಗ ಪ್ರತಿಬಾರಿ ಹಾಗೆಯೇ ಆಲೋಚಿಸುವಂತಾಗುತ್ತಿತ್ತು. ಇರಬಹುದು ಎನ್ನುವ ಧೈರ್ಯಕ್ಕಿಂತ ಏಕೆ ಇರಬೇಕು ಎನ್ನುವುದಕ್ಕೆ ತರ್ಕಕ್ಕೆ ನಿಲ್ಲುವ ಕಾರಣಗಳೇನಾದರೂ […]

ಗುಂಡಾಭಟ್ಟರ ಮಡಿ

ಗುಂಡಾಭಟ್ಟರ ಮಡಿಯೆಂದರೆ ನಮ್ಮ ಹಳ್ಳಿಯಲ್ಲೆಲ್ಲ ಒಂದು ಗಾದೆಯ ಮಾತಾಗಿದೆ. ಅದು ಅವರು ಮಾತ್ರಾರ್ಜಿತವಾಗಿ ಪಡೆದುಕೊಂಡದ್ದು. ಮಡಿ-ಮೈಲಿಗೆಗಳಲ್ಲಿದ್ದ ಅವರ ಶ್ರದ್ಧೆ ಅವರ ತಾಯಿಯವರ ಶ್ರದ್ಧೆಯಷ್ಟು ಉಜ್ವಲವಾಗಿರದಿದ್ದರೂ ಸಾಕಷ್ಟು ಪ್ರಖರವಾಗಿತ್ತು. ಮೈಲಿಗೆ ನಿವಾರಣೆಯ ಮೊದಲನೇ ಹೆಜ್ಜೆಯೆಂದರೆ ಸ್ನಾನ. […]

ಮರೆಯಾದವರು

“ಹಾಂ ನಿನ್ನನ್ನು ಕಂಡೆ. ಅವಳನ್ನು ಕರೆದುಕೊಂಡು ನೀನುಳಿದುಕೊಂಡಿದ್ದ ಕಡೆ ಹೋದದ್ದನ್ನು; ಮತ್ತೆ ಅಲ್ಲಿಂದ ಅವಳ ಮನೆಗೆ….” ಆತ ನಿರ್ಲಿಪ್ತನಾಗಿ ಕೇಳುತ್ತಿದ್ದವ ಮೆಲ್ಲನುಡಿದ “ಅಂಥ ಸಂಶಯಗಳೇ ಇರಕೂಡದು. ಸತ್ಯ ಹೇಳು. ಇದುವರೆಗೂ ಬೇರೆ ಯಾರ ಜೊತೆಯೂ […]