ಶಾರದಾ ಮೇಡಂ ಆಬ್ಸೆಂಟು

‘ಶಾರದಾ ಮೇಡಂ ಆಬ್ಸೆಂಟು, ಬರ್ತಾನೇ ಇಲ್ಲ’ ಎಂದು ಪುಟ್ಟ ಅಕ್ಷಯ ಮೊದಲ ಬಾರಿಗೆ ಹೇಳಿದಾಗ ಗುಪ್ತಾ ಸಂಸಾರ ಅದನ್ನ ಮನಸ್ಸಿಗೆ ತೆಗೆದುಕೊಳ್ಳಲಿಲ್ಲ. ಆಗಷ್ಟೇ ಸ್ಕೂಲು ಸೇರಿ ಎಲ್.ಕೇ.ಜಿ.ಯಲ್ಲಿದ್ದ ಮಗ ಸತತವಾಗಿ ಒಂದು ವಾರ ಈ […]

ಕ್ಷಮಿಸುತ್ತೀಯ ಒಂದಿಷ್ಟು

ಇದ್ದಕ್ಕಿದ್ದಂತೆ ಯಾಕೆ ಹೀಗಾಯಿತು? ದುಃಖ ಒತ್ತರಿಸಿ ಬಂತು ನನಗೆ. ನಿನ್ನೆ ರಾತ್ರಿ ಫೋನ್ ಮಾಡಿದ್ದೆ ಆಸ್ಪತ್ರೆಗೆ. ಲಲಿತಾನ ಅಮ್ಮನೇ ಫೋನ್ ತೆಗೆದುಕೊಂಡಿದ್ದರು. ಸುಭಾಷಿಣಿ, ನಾಳೆ ಖಂಡಿತಾ ಬಾ. ಲಲಿತಾ ಹೇಳಿದ್ದಾಳೆ ನಾಳೆ ಮಾತಾಡೊ ದಿನ […]

ಮಾತೃ ದೇವೋಭವ

ಪ್ರತಿದಿನದ ಸೂರ್ಯೋದಯದ ಬಿಳಿರಂಗು, ರುದ್ರಿಯ ಮನಸ್ಸಿನಲ್ಲಿ ನಿರೀಕ್ಷೆಯ ರಂಗವಲ್ಲಿ ಮೂಡಿಸುತ್ತದೆ. ಇನ್ನೇನು ಇಹದ ಎಲ್ಲ ವ್ಯಾಪರವೂ ಮುಗಿದೇ ಹೋಯಿತೇನೋ ಎಂಬಂತೆ ರಾತ್ರಿಯ ಸಮಯದಲ್ಲಿ ತಣ್ಣಗಿದ್ದ ಆ ದೇಹದ ಸಮಸ್ತ ಅಂಗಾಂಗಗಳೂ ಬಿಸಿಯಾಗುತ್ತವೆ. ಯಾರದ್ದಾದರೊಬ್ಬರ ನೆರವಿನಲ್ಲಿ […]

ಕಣ್ಮರೆಯ ಕಾಡು

ಸಿಗ್ನಲ್ ಬಳಿ ಬಸ್ಸು ನಿಂತಾಗ, ಡ್ರೈವರನಿಂದ ಬೈಸಿಕೊಳ್ಳುತ್ತ ಅವಸರದಿಂದ ಇಳಿದು, ಸನಿಹದ ಗೂಡಂಗಡಿಯಲ್ಲಿ ಬಿಸ್ಕತ್ತಿನ ಪೊಟ್ಟಣ ತಗೊಂಡು, ಗ್ಯಾರೇಜಿನ ಪಕ್ಕದ ಒಳದಾರಿಯಿಂದ ತವರಿನ ಕಡೆ ನಡೆಯತೊಡಗಿದ ಕುಸುಮಳ ಮನಸ್ಸು ಈಗ ಹೊಸದೇನನ್ನೂ ಗ್ರಹಿಸುವ ಸ್ಥಿತಿಯಲ್ಲಿ […]

ದ್ವೀಪ ಸಿನಿಮಾ ಕುರಿತಂತೆ

“ನವ ಮನುವು ಬಂದು ಹೊಸ ದ್ವೀಪಗಳಿಗೆ ಹೊರಟಾನ ,ಬನ್ನಿ” -ಬೇಂದ್ರೆ ಕಳೆದ ತಿಂಗಳು ಪ್ರಕಟಿಸಿದ ದ್ವೀಪ ಚಿತ್ರಕ್ಕೆ ಶಿವಕುಮಾರ್ ಜಿ ವಿ ಬರೆದ ವಿಮರ್ಶೆಗೆ ಯಶಸ್ವಿನಿ ಹೆಗಡೆಯವರ ಪ್ರತಿಕ್ರಿಯೆ… ‘ಮರದ ಎಲೆ ದಿನಾ ಬಿದ್ದು, […]

ದೇವನೂರ ಮಹಾದೇವರ ‘ಒಡಲಾಳ’

ದಲಿತ ಜೀವನದ ಸ್ಥಿತಿ ಮತ್ತು ಸಾಧ್ಯತೆ – ಇವುಗಳನ್ನು ಒಟ್ಟಾಗಿ ಹಿಡಿದು. ಹೀಗೆ ಒಟ್ಟಾಗಿ ಹಿಡಿಯುವ ಕ್ರಮದಿಂದಾಗಿ ಚಿತ್ರಣವನ್ನು ಚೈತನ್ಯಪೂರ್ಣವಾಗಿಸುವ ಸಾಹಿತ್ಯದ ಈವರೆಗಿನ ಪ್ರಯತ್ನಗಳನ್ನು ಅವಲೋಕಿಸಿದಾಗ ಮೂರು ಮುಖ್ಯ ಬಗೆಗಳನ್ನಾದರೂ ನಾವು ಕಾಣುತ್ತೇವೆ. ಮೊದಲು […]

ದುಗುಡ ಆತಂಕಗಳ ನಡುವೆ ನಮ್ಮ ಕಾಳಜಿಗಳು

– ನೊಮ್ ಚಾಮ್ಸ್‌ಕಿ (ಕನ್ನಡಕ್ಕೆ ಪ್ರೀತಿ ನಾಗರಾಜ್) ಈ ದುಗುಡ ತುಂಬಿದ ಕ್ಷಣಗಳಲ್ಲಿ ಇರಾಕ್ ಮೇಲೆ ನಡೆಯುತ್ತಿರುವ ದಾಳಿಯನ್ನು ನಿಲ್ಲಿಸುವುದು ನಮ್ಮಿಂದ ಸಾಧ್ಯವಿಲ್ಲ. ಆದರೆ, ಇರಾಕ್ ಯುದ್ಧವನ್ನು ಖಂಡಿಸಿ, ತಡೆಗಟ್ಟಲು ಪ್ರಯತ್ನಿಸುವ ಜವಾಬ್ದಾರಿ ಬರೀ […]

‘ಸಮಾನತೆಯ ಕನಸು ಹೊತ್ತು…’

ಸಾಗರ, ಎಲ್ಲ ರೀತಿಯ ಜಾತಿ, ಮತ, ವರ್ಗ, ಬೇಧಗಳನ್ನು ಒಳಗೊಂಡಂಥ ಊರು. ಮಂಜಿ ಎಂಬ ಮುದುಕಿಯಬ್ಬಳು ಊರ ತುಂಬ ಅಡ್ಡಾಡಿಕೊಂಡಿರುತ್ತಿದ್ದಳು. ಅವಳ ನಿಜವಾದ ಹೆಸರು ನನಗೆ ಗೊತ್ತಿಲ್ಲ. ಯಾರಿಗೂ ಗೊತ್ತಿದ್ದಹಾಗೆ ಕಾಣೆ. ಅವಳನ್ನು ಎಲ್ಲರೂ […]

ವೇದ: ಅಪ್ತವಾಗದೇ ಹೋದ ಮತ್ಸ್ಯಕನ್ಯೆಯ ವಿಷಾದಗೀತ

-೧- ವೇದಗಳು ಒಟ್ಟು ಭಾರತೀಯ ಚರಿತ್ರೆಯಲ್ಲಿ ವಹಿಸಿರುವ ನಿರ್ಣಾಯಕ ಪಾತ್ರದ ಬಗೆಗೆ ಹೆಚ್ಚು ಸೂಕ್ಷ್ಮವಾದ ಚರ್ಚೆ ಆಗಬೇಕಿದೆ. ‘ವೇದ ಪ್ರಾಮಾಣ್ಯ’ ಎನ್ನುವುದೊಂದು ಆತ್ಯಂತಿಕ ಮಾನದಂಡ ಎಂಬಂತೆ ಬೆಳೆಯುತ್ತ ಬಂದದ್ದು ನಿಜವಾದರೂ, ಅದು ಪ್ರಶ್ನಾತೀತ ಎಂಬಂಥ […]

ಉಲೂಪಿ

ಉಲೂಪಿ ನೀ ಕೊಟ್ಟ ಗುಲಾಬಿ ಬತ್ತಿ ಎಷ್ಟೋ ದಿವಸ- ಕೈಗಿನ್ನೂ ಹತ್ತಿದಂತಿರುವ ನಿನ್ನ ಮೈ ಬಿಸಿ ಮೃದುತ್ವ ರೇಶಿಮೆಯ ನುಣುಪನ್ನು ಉಲೂಪಿ, ನಿನ್ನ ತರಿತರಿ ಮೈಯ ಸದಾಪು ವಾಸನೆಯನ್ನು ಮರೆಯಲಾರೆ. ಮಲಗಿದ್ದಾರೆ ಸುಭದ್ರೆ ಅಭಿಮನ್ಯು. […]