ಕಾಡ ಮಲ್ಲಿಗೆ

ಮಾಮರದ ಆಸರದಿ ಮೇಲೇರಿ ಕುಡಿಚಾಚಿ ಬೆಳ್ಳಿ ಹೂಗಳ ಹರವಿ ಅತ್ತಿತ್ತಲಿಣಿಕಿ, ಮಾಂದಳಿರ ಮುದ್ದಾಡಿ ರಂಬೆಯಲಿ ನೇತಾಡಿ ಸುಳಿಗಾಳಿ ಸುಳುವಿನಲಿ ಜೀಕಿ ಜೀಕಿ- ನೀಲಗಗನದ ಆಚೆ ನೀಲಿಮೆಯ ಬಳಿ ಸಾರಿ ಬೆಣ್ಣೆ-ಬೆಟ್ಟದ ಮೋಡಗರ್ಭಗುಡಿ ಸೀಳಿ, ಗರಿಗೆದರಿ […]

ಪಕ್ಷಿಗಾಗಿ ಕಾದು

ಮೊದಲೊಂದು ಪಂಜರ ಬರಿ ಅದು ಖಾಲಿಯಾಗಿದ್ದು, ತೆರೆದೂ ಇರಬೇಕು-ಹಾಗೆ. ಆಮೇಲೆ ಏನೋ ಸರಳವಾದ, ಬರುವ ಪಕ್ಷಿಗೆ ಅಗತ್ಯವೆನ್ನಿಸುವ ಏನನ್ನೋ ಪಂಜರದಲ್ಲಿ ಬಿಡಿಸು ಆಮೇಲೆ ಈ ನಿನ್ನ ಚಿತ್ರವನ್ನು ನಿನಗೆ ಇಷ್ಟವಾದ ಮರಕ್ಕೆ ಆನಿಸಿ ಇಡು. […]

ಗವೀಮಠದ ಪವಾಡ

(ಸ್ಪಾನಿಶ್) ಮೂಲ ಲೇಖಕರು: ಹೊರ್ಹೆ ಲೂಯಿ ಬೊರ್ಹೆಸ್ ಅರ್ಚಕ ಗೋವಿಂದನೇನೊ ಒಳ್ಳೆಯವನೇ. ಉತ್ತಮ ಮನೆತನ, ಬ೦ಧುಗಳು, ತಕ್ಕಷ್ಟು ವಿದ್ಯೆ ಬೇರೆ. ಆದರೆ, ಮನೆತನದಿ೦ದ ಬ೦ದ ವೈದಿಕ ವೃತ್ತಿಯಿ೦ದಷ್ಟೇ ಅವನಿಗೆ ತೃಪ್ತಿಯಿಲ್ಲ. ಮಂತ್ರ-ತಂತ್ರ ವಿದ್ಯೆ, ಪವಾಡಗಳನ್ನು […]

………. – ೧

ಸುರಗಿ ಹೂವಿನ ಕಂಪು ಮಳೆ ಮಣ್ಣಿನ ಕಂಪು ಒಲೆಯೊಳಗೆ ಸುಟ್ಟ ಗೇರು ಬೀಜದ ಕಂಪು ಎಲ್ಲಿಂದ ಸುಳಿದಿತ್ತು ಈ ಕೆಂಪು, ಒಂದೇ ಕ್ಷಣ ಧಿಗ್ಗನೆದ್ದು ಮುಳುಗಿತ್ತು. ಘಳಿಗೆಗೊಂದೊಂದು ವಾಸನೆ ಎಂದೋ ಎಲ್ಲೋ ಆಗಿದ್ದು ತಟ್ಟನೆ […]

ಬಿನ್ನಹ

ಅಲ್ಲಸಲ್ಲದ ವಿಷಮ ವಿಪರೀತ ಭಾವನೆಯ ವಿಷಗಾಳಿ ಎನ್ನ ಬಳಿ ಸುಳಿಯದಿರಲಿ; ಸೊಲ್ಲು ಸೊಲ್ಲಿಗೆ ಪರರನಣಕಿಸುವ ಕೆಣಕಿಸುವ ಅಶಿವ ನುಡಿ ಎನ್ನ ಕಿವಿ ಸೇರದಿರಲಿ. ಹಿಮಶೈಲದೆತ್ತರಕು ಕತ್ತೆತ್ತಿ ನಿಂತಿರುವ ಕರ್ತವ್ಯಪಾಲನೆಯ ಬುದ್ಧಿ ಬರಲಿ; ಕಾರ್ಮೋಡ ಬಾನನಂಡಲೆವಂತೆ […]

ಎಲ್ಲ ‘ಯಥಾಪ್ರಕಾರ’ಗಳಿರುವುದು ಸಿನಿಮಾದಲ್ಲೇ

ಮಾನ್ಯ ಎಂಕಣ್ಣನವರೆ, ‘ಈ ಬಾರಿ ಯುಗಾದಿ ವಿಶೇಷಕ್ಕೊಂದು ವಿಡಂಬನಾತ್ಮಕ ಬರಹ ನೀಡಬೇಕೆಂದು ವಿನಂತಿಸುತ್ತಿರುವೆ’ ಎಂದು ಸಂಪಾದಕರಿಂದ ಬಂದ ಪತ್ರ ಓದಿದ ‘ಎಂಕ’ ಯಥಾಪ್ರಕಾರದ ಮಾಮೂಲಿ ಪತ್ರ ಎಂದುಕೊಳ್ಳುತ್ತ ಏನು ಬರೆಯಲೆಂದು ಚಿತ್ರಿಸುತ್ತಿದ್ದಾಗ ಶುಕ್ರವಾರದ ಸಿನಿಮಾ […]