ಚೆಂಗುಲಾಬಿ

ಚೆಂಗುಲಾಬಿಯ ಮೊಗ್ಗೆ ಅರುಣನೆಡೆ ಮೊಗವಿರಿಸಿ ಚೆಂದುಟಿಯನರೆತೆರೆದು ನೋಂಪಿಯಲ್ಲಿ- ಸಕ್ಕರೆಯ ನಿದ್ದೆಯಲಿ ಸವಿಗನಸ ಕಾಣುತಿದೆ ಚದುರನೈತಹನೆಂಬ ಹಂಬಲದಲಿ! ನವುರಾದ ಪಕಳೆಯಲಿ ಕುಂಕುಮ ಪರಾಗವಿದೆ ಎದೆಯಲ್ಲಿ ಸೌರಭದ ಸೂಸುಗಿಂಡಿ, ಮೈತುಂಬ ಒಳುಗುಂದದಮಲ ಸುರುಚಿರ ಕಾಂತಿ ಚೆನ್ನೆಯರ ಕೆನ್ನೆಗಳ […]

ಗಳಿಗೆ ಅರೆಗಳಿಗೆ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಒಂದು ಗಳಿಗೆಯಲ್ಲಿ ನಾನು ಧಗ ಧಗಿಸುವ ಬೆಂಕಿ ಮತ್ತೊಂದು ಗಳಿಗೆಯಲ್ಲಿ ಭೋರ್ಗರೆವ ಪ್ರವಾಹ ನನ್ನ ಮೂಲವೆಲ್ಲಿ? ಕುಲವೆಲ್ಲಿ? ಯಾವ ಸಂತೆಯ ಸರಕು ನಾನು? ಒಂದು ಗಳಿಗೆಯಲ್ಲಿ ನಾನು […]

ಮಧುಚಂದ್ರ

ಬಾ ಮಲ್ಲಿಗೆ ಬಾ ಮೆಲ್ಲಗೆ ನನ್ನೆದೆ ಮೆಲ್ವಾಸಿಗೆ ಇಳೆಗಿಳಿದಿದೆ ಬೆಳುದಿಂಗಳು ನಮ್ಮೊಲುಮೆಯ ಕರೆಗೆ! ಚೆಲುವಾಗಿದೆ ಬನವೆಲ್ಲವು ಗೆಲುವಾಗಿದೆ ಮನವು; ಉಸಿರುಸಿರಿಗು ತಂಪೆರಚಿದೆ ನಿನ್ನದೆ ಪರಿಮಳವು. ತಿಂಗಳ ತನಿ- ವೆಳಕಲಿ ಮೈ- ದೊಳೆದಿಹ ಮನದನ್ನೆ! ಮಂಗಳವೀ […]

ಸಾಮರಸ್ಯ

ಹೃದಯದರವಿಂದವೇ ಮನದ ಮಂದಾರವೇ ಒಳುಗುಂದದಮಲ ಸೌರಭಸಾರವೆ! ಅರಳಿರುವ ದಲದಲದಿ ನಿನ್ನ ಪದತಲವಿರಿಸಿ ಚಿತ್ತೈಸು ನನ್ನೊಲವೆ ನನ್ನ ಬಲವೆ! ತೆಳ್ಳತೆಳ್ಳನೆ ತೀಡಿ ಮೆಲ್ಲಮಲ್ಲನೆ ಹಾಡಿ ಒಯ್ಯನೊಯ್ಯನೆ ಒಲಿವ ತಂಗಾಳಿಯು ನಿನ್ನುಸಿರ ನರುಗಂಪು ನಿಚ್ಚಪ್ರಸಾದವದು ಪ್ರಣವನಾದವಗೈವ ಶೃಂಗಾಳಿಯು! […]

ಕೋಳಿ ಕೂಗುವ ಮುನ್ನ

ರಕ್ತ ಕುಡಿಯುವ ಪಾತರಗಿತ್ತಿಗಳು ಹಣ್ಣಾಗಿ ತೊಳೆ ತೊಳೆ ಚಿಗುರಿ ಬೆವರುತ್ತಲೇ ಧಗೆಯುಂಡು ಧಾವಿಸುವ ಬಣ್ಣಗಳು ಕಣ್ಣು ತುಂಬ. ಒಂದರ ಮೇಲೊಂದು ಧಬ ಧಬ ಬಿದ್ದ ಹಾಡಿಸುವ ತಂತು-ಮೋಹಿಸುವ ವೈವಾಟು ಕಾಲು ಕೈ ಹಿಂಡಿ ನೂಲೆಳೆವ […]

ಬೆಳಕು

ಬೆಳಕೆ! ಓ ನನ್ನ ಬೆಳಕೆ! ಜಗವನೆಲ್ಲವ ತುಂಬಿ ತುಳುಕುತಿಹ ಬೆಳಕೆ! ಕಂಗಳಾಲಯ ತುಂಬಿ ಚುಂಬಿಸುವ ಬೆಳಕೆ! ಎದೆಯ ಇನಿದಾಗಿಸುವ ಚೆನ್ನ ಬೆಳಕೆ! ಓ! ಬೆಳಕು ಕುಣಿಯುತಿದೆ ನನ್ನ ಬಾಳಿನ ಮಧ್ಯ ರಂಗದಲಿ; ಮುದ್ದಿನ ಕಣಿ, […]

ನೀನು ಕರ್ತಾರನ ಕಮ್ಮಟದ ಗುಟ್ಟು

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪ್ರೇಮಜ್ಞಾನದಲ್ಲಿಲ್ಲ, ವಿಜ್ಞಾನದಲ್ಲಿಲ್ಲ ಪಂಡಿತರ ತಾಳೆಗರಿ ಹಾಳೆಗಳಲ್ಲಿಲ್ಲ ಕಾಡು ಹರಟೆಯಲ್ಲಂತೂ ಖಂಡಿತಾ ಇಲ್ಲ ಇವೆಲ್ಲ ನಲ್ಮೆಯ ನಿವಾಸವಲ್ಲ ಕಾಲ ಪೂರ್ವದ ಕಾಂಡದಾಚೆಗೆ ಪ್ರೇಮದ ಕೊಂಬೆ ರೆಂಬೆ ಬೇರುಗಳೆಲ್ಲ ಕಾಲೋತ್ತರದಂಚಿನಾಚೆ […]

ಚರಮಗೀತೆ

ಇರುಳು ಹೊರಳಿತು ಜೀವ ನರಳಿತು ಕತ್ತಲೆಯೆ ಚೀರಿಟ್ಟಿತು. ಏನ ಬಯಸಿದರೇನಿದಾಯಿತು – ಆಗಬಾರದುದಾಯಿತು; ವಿಷಮ ಬಾಳಿಗೆ ವಿಷಮಜ್ವರವೇ ಹೊಂಚು ಹಾಕಿತು ಹಿಂಡಿತು ಮಾನವನ ಇಷ್ಟಾರ್‍ಥ ಶಕ್ತಿಗು ಯುಕ್ತಿಗೂ ಕೈಮೀರಿತು. ನಡುವರಯದಲ್ಲಿಂತು ಝಂಝಾವಾತವೇತಕೆ ಬೀಸಿತೊ ಬಾಳಗಿಡ […]

ಮೊದಲ ಪುಟಗಳು

ಒ೦ದು ಪುಸ್ತಕವನ್ನು ಎತ್ತಿಕೊಂಡಾಗ, ಬೆನ್ನುಡಿಯ ನಂತರ ಓದುವುದು ಪುಸ್ತಕದ ಮೊದಲ ಪುಟಗಳನ್ನು, ಅದರಲ್ಲೂ ಲೇಖಕರ ಮಾತುಗಳನ್ನು, ಇವುಗಳನ್ನು ಎರಡು ಮಾತು, ಮೊದಲ ಮಾತು, ಅರಿಕೆ, ಓದುವ ಮುಂಚೆ ಹೀಗೆಲ್ಲ ನಾನಾ ರೀತಿಯಿಂದ ಕರೆದಿದ್ದಾರೆ. ಇವೆಲ್ಲವೂ […]