ಬೀದಿಯಲ್ಲಿ ನೀವು
ಹೋಗುತ್ತಿರುವಾಗ
ಯಾರಾದರೂ ನಮಸ್ಕರಿಸಿದರೆ
ಪಕ್ಕದಲ್ಲಿ ದೇವಸ್ಥಾನ
ಇದೆಯೇ ನೋಡಿ.
*****
Related Posts
ಮಾರ್ಪಾಟು
- ನಿಸಾರ್ ಅಹಮದ್ ಕೆ ಎಸ್
- ಆಗಷ್ಟ್ 7, 2023
- 0
ಹವಾ ನಿಯಂತ್ರಿತ ಷಹರೆಂದು ಹೆಸರಾದ ಬೆಂಗಳೂರಿನಲ್ಲಿ ಸದ್ಯ ಡಿಸೆಂಬರಿನಲ್ಲೂ ಹವಾ ನಿಯಂತ್ರಿತ ಸೌಲಭ್ಯ ಇರದೆ ಬದುಕುವುದು ದುಸ್ಸಾಧ್ಯ. *****
ಗುಣದ ಗರಿಮೆ
- ನಿಸಾರ್ ಅಹಮದ್ ಕೆ ಎಸ್
- ಜನವರಿ 1, 2007
- 0
ಹಂಡೆ ಹಾಲಿಗೆ ತೊಟ್ಟು ಹುಳಿ; ಬಂಡೆಗೆ ಉಳಿ; ಭಾರೀ ಬಂಗಲೆಗೆ ಹಿಡಿಯಷ್ಟು ಬೀಗ, ಅಂಕುಶದೆದುರು ಜೀತದಾಳು ಸಲಗ. ಪಟ್ಟಣಗಳನ್ನು ಹುಟ್ಟಳಿಸುವ ತಾಕತ್ತಿದೆ ಪರಮಾಣು ಕಣದಲ್ಲಿ; ಹೆಚ್ಚಳವಿರುವುದು ಆಕಾರ, ಗಾತ್ರದಲ್ಲಿ ಅಲ್ಲ, ಆಂತರಿಕ ಗುಣದಲ್ಲಿ. *****
ಘೋಷಣೆ
- ನಿಸಾರ್ ಅಹಮದ್ ಕೆ ಎಸ್
- ಏಪ್ರಿಲ್ 17, 2023
- 0
“ಅಲ್ಪಸಂಖ್ಯರ ಹಿತ ರಕ್ಷಣೆಯೆ ನಮ್ಮಯ ಪಕ್ಷದ ಧ್ಯೇಯ, ಆಗಲು ಬಿಡೆವು ನಾವೆಂದೆಂದಿಗು ಅವರಿಗೆ ಅನ್ಯಾಯ” -ಗೋಡೆಯ ಬರಹವ ಓದಿದ ಒಡನೆ ಮೂಡದೆ ಇರುವುದೆ ಪುಲಕ! ನೆನಪಿಸಿ ಆ ಸಾ-ಮಿಲ್ಲಿನ ಮೇಲಿನ ‘ಮರ ಬೆಳಸಿ ಫಲಕ’. […]
