ಸಾಮ್ಯ Posted on ಜುಲೈ 10, 2023ನವೆಂಬರ್ 10, 2022 by ನಿಸಾರ್ ಅಹಮದ್ ಕೆ ಎಸ್ ಹೊತ್ತಾರೆಯ ಮಂಜಿನಲ್ಲಿ ಹೂ ತಳೆದ ಪಿಚಕಾರಿಯ ಮರ ಗಾಂಧಿ ಬಜಾರಿನ ಬಸ್ಸಿನ ಅಡಿ ಸಿಕ್ಕ ಬಿಳಿ ನಾಯಿ ಮರಿಯ ಥರ. *****
ಹನಿಗವನ ಅಚ್ಚರಿಯ ಪರಿ ನಿಸಾರ್ ಅಹಮದ್ ಕೆ ಎಸ್ ಜನವರಿ 1, 2007 0 ಬಾಂಬಿನ ಗೋತ್ರ ದ ಆನೆ ವಿಶೇಷಣದ ಚೋಟುದ್ದದ ಸೊರಗು ದೇಹ- ನಾನೂ ಕಿರಿ ಮಗನ ಕಣ್ಣುಗಳ ಬೆರಗೂ ಏಕಾಗ್ರ ವೀಕ್ಷಿಸಿ ಕಾದಿರಲು ಊದು ಬತ್ತಿಯ ತುದಿ ತಾಕಿದ್ದೇ ತಡ ಫರ್ಲಾಂಗು ಗಾತ್ರ ಶಬ್ದ ಹೊಮ್ಮಿ, […]
ಹನಿಗವನ ಹೂವು ಜಯಂತ ಕಾಯ್ಕಿಣಿ ಜುಲೈ 7, 2023 0 ಈ ಚೆಪ್ಪೆ ನೆಲದಾಳದಿಂದ ಬಳಕ್ಕನೆ ಪುಟಿದ ದಳ ದಳ ಬಣ್ಣ ಹೊರತಾಗದ ಸುಖದಚ್ಚರಿ *****
ಹನಿಗವನ ………. – ೪ ಮಮತ ಜಿ ಸಾಗರ ಆಗಷ್ಟ್ 25, 2023 0 ಚರ್ಮದಡಿಗೆ ಮೂಳೆ, ಮಾಂಸ, ಹರಿವ ಕತ್ತಲು. ಮುಖದಲ್ಲಿ; ಕತ್ತಲ ಚಹರೆ ತೊಟ್ಟ ಭಾವವೆ ಬೇರೆ. *****