ರಾತ್ರೆ Posted on ಆಗಷ್ಟ್ 18, 2023ಮೇ 10, 2023 by ಜಯಂತ ಕಾಯ್ಕಿಣಿ ನಾ ರಾತ್ರೆ ತಲೆ ತಿರುಗಿ ಬಿದ್ದ ನಕ್ಷತ್ರ ಹೆಕ್ಕುವೆ ತಿಳಿ ಬೆಳಕು ಗುಡಿಸುವೆ ಹಸನು ಹಸನು ಮಾಡುವೆ ಒಳ ಕತ್ತಲೆ *****
ಹನಿಗವನ ಹಿತೋಪದೇಶ ನಿಸಾರ್ ಅಹಮದ್ ಕೆ ಎಸ್ ಫೆಬ್ರವರಿ 6, 2023 0 ರಸ್ತೆಯಲ್ಲಿ ನಡೆಯುವಾಗ “ಮುಂದೆ ನೋಡಿಕೊಂಡು ಹೋಗು” ಎನ್ನುತ್ತಾರೆ ತಿಳಿದವರು. ಕೆಳಗೂ ಕಣ್ಣು ಹಾಯಿಸಬೇಡವೆ? ಅಲ್ಲಿ ಬಿದ್ದಿರಬಹುದಲ್ಲ ಲೈವ್ ವೈರು. *****
ಹನಿಗವನ ತಪ್ಪೇನು? ನಿಸಾರ್ ಅಹಮದ್ ಕೆ ಎಸ್ ಆಗಷ್ಟ್ 2, 2024 0 ಅಸೂಯೆ ಬಂದರೆ ಆಕಳಿಗೆ `ಹಸೂಯೆ’ ಅಂದರೆ ಏನು ತೊಂದರೆ? *****