ಅವಳಿದ್ದಲ್ಲಿಗೆ

ನಿಂತಿದ್ದಾಳೆ ರಸ್ತೆ ಪಕ್ಕದ
ಮರಕ್ಕೆ ಒರಗಿ
ಸಡಿಲ ಕೂದಲ ಎತ್ತರದ ಹುಡುಗಿ
ಅವಳಿಂದ ದೂರ
ಸರಿಯಲಾರೆವು ಎಂಬಂತೆ
ಸುತ್ತಲಿನ ಜನ
ಒಂದು ಚಣ, ಎಂದರೆ
ಒಂದೇ ಚಣ ನಿಂತು
ಮುಂದೆ ಚಲಿಸಿದರು
*****
ಭಾವನಾ ಏಪ್ರಿಲ್ ೨೦೦೦

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.