ಕಛೇರಿಯಲ್ಲಿ ಏನಿವನ ದರ್ಪ!
ಸದಾ ಬುಸ್ಸೆನ್ನುವ ಕಾಳಿಂಗ ಸರ್ಪ;
ಬಾಯಿ ತೆರೆದನೋ ಬೈಗುಳ, ಉಗಿತ;
ಗಂಟು ಮುಸುಡಿಯ ರಕ್ತಾಕ್ಷಿ;
ಮನೆಯಲಿ ಉಡುಗಿ ಜಂಘಾಬಲವೇ
ಮಡದಿಯ ಕೈಯಲಿ ಊದುಗೊಳವೆ,
ಅವಳೆದುರಾದರೆ ಗಂಡತಿಯಾಗುತ
ಹಲ್ಕಿರಿಯುವ ಸೀಡ್‌ಲೆಸ್ ದ್ರಾಕ್ಷಿ.
*****
ಕಛೇರಿಯಲ್ಲಿ ಏನಿವನ ದರ್ಪ!
ಸದಾ ಬುಸ್ಸೆನ್ನುವ ಕಾಳಿಂಗ ಸರ್ಪ;
ಬಾಯಿ ತೆರೆದನೋ ಬೈಗುಳ, ಉಗಿತ;
ಗಂಟು ಮುಸುಡಿಯ ರಕ್ತಾಕ್ಷಿ;
ಮನೆಯಲಿ ಉಡುಗಿ ಜಂಘಾಬಲವೇ
ಮಡದಿಯ ಕೈಯಲಿ ಊದುಗೊಳವೆ,
ಅವಳೆದುರಾದರೆ ಗಂಡತಿಯಾಗುತ
ಹಲ್ಕಿರಿಯುವ ಸೀಡ್‌ಲೆಸ್ ದ್ರಾಕ್ಷಿ.
*****