ಕಾಡು ಕಾಡೆಂದರೆ
ಕಾಡಿನ ಮರವಲ್ಲ
ಕಾಡಿನ ಒಳಗೆರೆ ತಿಳಿಲಾರೆ || ಶಿವನೆ ||
ಹೊರಗಿನ ಪರಿ ನಂಬಲಾರೆ ||
ನೋಡೋ ಕಂಗಳ ಸೀಳೊ
ಏಳು ಬಣ್ಣಗಳುಂಟು
ಹರಿಯೂವ ಹಾವನ್ನ
ಕೊರೆಯೂವ ಹಸಿರುಂಟು
ಹೂವುಂಟು ಮುಳ್ಳಿನ ಮ್ಯಾಲೆ || ಶಿವನೆ ||
ಓಡೂವ ಗಿಡಗಂಟಿ
ಹಾಡೂವ ನೋವುಂಟು
ಮಾತಾಡೊ ಗವಿಗಳು ಹಲವಾರು || ಶಿವನೆ ||
ನಡೆದಾಡೊ ಬ್ಯಟ್ಟಗಳು ಹಲವಾರು || ಕಾಡು ||
ಗುಟ್ಟು ಹೇಳೇನಂತ
ಗುಟ್ಟಾಗಿ ಕರೆಯುವುದು
ತೋರೂವ ದಾರೀಯ ಕಣ್ಣೆದುರೇ ಮುಚ್ಚುವುದು
ಏನಂತ ಹೇಳಲಯ್ಯ ಕಾಡಿನ ಪರಿಯ || ಶಿವನೆ||
ಬಲ್ಲ ಬಲ್ಲವರನ್ನೆಲ್ಲ ಹುಲ್ಲಿಗೂ ಸಮಮಾಡಿ
ಕಲ್ಲಿಗೂ ಕಡೆಮಾಡಿ ನಗತಾದಯ್ಯ || ಶಿವನೆ ||
ಕಲ್ಲಿಗೂ ಕಡೆ ಮಾಡಿ ನಗತಾದಯ್ಯ || ಕಾಡು ||
*****