ಕಾಡು ಕುದುರಿ ಓಡಿ ಬಂದಿತ್ತ ||
ಊರಿನಾಚೆ ದೂರ ದಾರಿ
ಸುರುವಾಗೊ ಜಾಗದಲ್ಲಿ |
ಮೂಡ ಬೆಟ್ಟ ಸೂರ್ಯ ಹುಟ್ಟಿ
ಹಸಿರಿನ ಗುಟ್ಟ ಒಡೆವಲ್ಲಿ
ಮುಗಿವೇ ಇಲ್ಲದ |
ಮುಗಿಲಿನಿಂದ |
ಜಾರಿ ಬಿದ್ದ ಉಲ್ಕಿ ಹಾಂಗ |
ಕಾಡಿನಿಂದ ಚಂಗನೆ ನೆಗೆದಿತ್ತ || ೧೦ ||
ಮೈಯ ಬೆಂಕಿ ಮಿರಗತ್ತಿತ್ತು
ಬ್ಯಾಸ್ಗಿ ಬಿಸಿಲ ಉಸಿರಾಡಿತ್ತ |
ಹೊತ್ತಿ ಉರಿಯೋ ಕೇಶ ರಾಶಿ
ಕತ್ತಿನಾಗ ಕುಣೀತಿತ್ತ |
ಧೂಮಕೇತು |
ಹಿಂಬಾಲಿತ್ತ |
ಹೌಹಾರಿತ್ತ ಹರಿದಾಡಿತ್ತ|
ಹೈ ಹೈ ಅಂತ ಹಾರಿ ಬಂದಿತ್ತ ||
ಕಣ್ಣಿನಾಗ ಸಣ್ಣ ಖಡ್ಗ
ಆಸುಪಾಸು ಝಳಪಿಸಿತ್ತ |
ಬೆನ್ನ ಹುರಿ ಬಿಗಿತ್ತಣ್ಣ ೨೦
ಸೊಂಟದ ಬುಗುರಿ ತಿರಗತಿತ್ತ |
ಬಿಗಿದ ಕಾಡ |
ಬಿಲ್ಲಿನಿಂದ |
ಬಿಟ್ಟ ಬಾಣಧಾಂಗ ಚಿಮ್ಮಿ |
ಹದ್ದ ಮೀರಿ ಹಾರಿ ಬಂದಿತ್ತ ||
ನೆಲ ಒದ್ದು ಗುದ್ದ ತೋಡಿ
ಗುದ್ದಿನ ಬದ್ದು ಒದ್ದಿಯಾಗಿ |
ಒರತಿ ನೀರು ಭರ್ತಿಯಾಗಿ
ಹರಿಯೋ ಹಾಂಗ ಹೆಜ್ಜೀ ಹಾಕಿ |
ಹತ್ತಿದವರ | ೩೦
ಎತ್ತಿಕೊಂಡು |
ಏಳಕೊಳ್ಳ ತಿಳ್ಳೀ ಆಡಿ |
ಕಳ್ಳೇ ಮಳ್ಳೇ ಆಡಿಸಿ ಕೆಡವಿತ್ತ ||
*****