ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ನುಡಿಯಲ್ಲಿ ನಿನ್ನ ಚೆಲುವು ಮೂಡಲಿಲ್ಲವೆ?
ನನ್ನ ಎದೆ ಗೂಡಲ್ಲಿ ಪ್ರೀತಿ ಅಡಗಿ ಕೂತು ಬಿಟ್ಟಿದೆ
ನಿನ್ನ ಪ್ರೀತಿಯಿರದೆ ನಾನು ಗುಲಾಬಿ ಮೂಸಿದನೆ?
ಮುಳ್ಳಿನಂತೆ ನನ್ನನ್ನು ಉರಿಸಿಬಿಡು
ಮಾತಿಲ್ಲದ ಮೀನಂತೆ ನಾನು ಮೌನಿಯೆ?
ಸಮುದ್ರದ ಅಲೆಗಳ ಮೇಲೆ ತೊಯ್ದಾಡುತ್ತಿದ್ದೇನೆ
ತುಟಿಗಳ ಮೇಲೆ ಮುದ್ರೆಯೊತ್ತಿ ಮುಚ್ಚಿರುವ ಮುಖವೆ
ಮೂಗುದಾರ ಹಾಕಿ ಮುತ್ತು ನನ್ನನ್ನು
ಒಂಟೆಯ ಹಾಗೆ ದುಃಖದ ಮೇವನ್ನು ಮೆಲಕು ಹಾಕುತ್ತಿದ್ದೇನೆ
ಬೆದೆಯೊತ್ತಿ ಬರುವ ಒಂಟೆಯ ಹಾಗೆ ಬಾಯೆಲ್ಲ ನೊರೆ ನೊರೆ
ನಾನು ಬಚ್ಚಿಟ್ಟುಕೊಂಡಿದ್ದೇನೆ, ಮಾತಿಲ್ಲದೆ ಮುದುಡಿದ್ದೇನೆ
ನಲ್ಲನ ಎದುರು ಮಾತ್ರ ಬಿಚ್ಚಿ ಹಬ್ಬಿದ್ದೇನೆ
ನೆಲದಾಳದಲ್ಲಿ ಕೂತಿರುವ ಬೀಜ ನಾನು
ವಸಂತದ ಕರೆಗೆ ಕಾಯುತ್ತಿದ್ದೇನೆ
ನನ್ನ ಉಸಿರಿಲ್ಲದೆಯೂ ಸಿಹಿಯಾಗಿ ಉಸಿರಾಡಬಲ್ಲೆ
ಸ್ವತಃ ತಲೆಯಿರದೆ ತಲೆ ಕರೆದುಕೊಳ್ಳಬಲ್ಲೆ
*****
