ಸಂಧ್ಯಾ ರಾಗ – ೧೪

ಅದೇ ವರ್ಷ ಗೋಪಾಲಿ ಮೆಟ್ರಿಕ್ಯುಲೇಶ ಪರೀಕ್ಷೆಗೆ ಕಟ್ಟಿದ್ದ. ಅವನ ದುರ್ದೆವದಿಂದ ನಾಪಾಸಾಗಿ ಹೋಗಿತ್ತು. ಗೋಪಾಲಿ ಪರೀಕ್ಷೆಗಳನ್ನು ಪಾಸು ಮಾಡುವುದರಲ್ಲಿ ರಾಮಣ್ಣನನ್ನು ಅನುಸರಿಸದೆ ಲಕ್ಷ್ಮಣನನ್ನು ಅನುಸರಿಸಿದ್ದನು. ಲೋವg ಸೆಕೆಂಡರಿಯಲ್ಲಿಯೂ ಅವನು ಮೊದಲನೆಯ ವರ್ಷವೇ ತೇರ್ಗಡೆ ಹೊಂದಿರಲಿಲ್ಲ. ಅದೇ ಸಂಪ್ರದಾಯವನ್ನೇ ಮುಂದೆಯೂ ಅನುಸರಿಸಿಕೊಂಡು ಹೋಗುವಂತೆ ಮೆಟ್ರಿಕ್ಯುಲೇಷನ್ನಿನಲ್ಲಿಯೂ ನಾಪಾಸಾಗಿದ್ದನು.
ಗೋಪಾಲ ನಪಾಸಾಗುವುದಕ್ಕೆ‌ಒಂದು ಕಾರಣವಿತ್ತು. ಶಾಲೆಯ ಶಿಕ್ಷಣ ಅವನಿಗೆ ತೃಪ್ತಿಯನ್ನು ಕೊಟ್ಟಿರಲಿಲ್ಲ. ಅವನಿಗೆ ಸಾಹಿತ್ಯದ ಮೇಲೆ ವಿಶೇಷ ಪ್ರೇಮವಿತ್ತು. ಇತಿಹಾಸವನ್ನು ಕಂಡರೆ ತಾತ್ಸಾರವಿರಲಿಲ್ಲ. ಅವನು ಸಾಹಿತ್ಯ, ಇತಿಹಾಸಗಳ ಇಷಯಗಳನ್ನೂ ಕಲಿಯಬೇಕಾಗಿತ್ತು. ಭಾಷೆಗಳಲ್ಲಿ ಅವನು ಎಷ್ಟು ಮುಂದಾಗಿದ್ದನೋ ಗಣಿತದಲ್ಲಿ ಅಷ್ಟು ಹಿಂದಾಗಿದ್ದನು. ಪರೀಕ್ಷೆಯಲ್ಲಿಯೂ ಅವನಿಗೆ ಕೆಕೊಟ್ಟಿದ್ದುದು ಗಣಿತವೇ.
ಶಾಲೆಯ ಶಿಕ್ಷಣದ ಪದ್ಧತಿ ಗೋಪಾಲಿಗೆ ತುಂಬ ಬೇಸರವನ್ನುಂಟುಮಾಡಿತ್ತು. ಅಚ್ಚಿನ ಇಟ್ಟಿಗೆಗಳನ್ನು ತಯಾರಿಸಿದಂತೆ ಎಲ್ಲಾ ವಿದ್ಯಾರ್ಥಿಗಳಿಗೂ ಒಂದೇ ಬಗೆಯ ಶಿಕ್ಷಣವನ್ನಿತ್ತು, ಒಂದೇ ಎರಕದಲ್ಲಿ ಅವರನ್ನು ಹುಯ್ಯುತ್ತಿದ್ದುದು ಕಾರ್ಖಾನೆಯ ಪದ್ಧತಿಯೆಂದು ಅವನು ಮನಗಂಡಿದ್ದನು. ಈ ಶಿಕ್ಷಣದಿಂದ ವಿದ್ಯಾರ್ಥಿಗಳು ಬೆನ್ನೆಲುಬು ನೀಗಿಕೊಂಡು ಪರಾವಲಂಬಿಗಳಾಗುತ್ತಿದ್ದುದನ್ನು ಕಣ್ಣಾರೆ ಕಂಡಿದ್ದನು.
ಅವನ ಮನಸ್ಸು ವಿಶೇಷವಾಗಿ ಸಾಹಿತ್ಯದ ಕಡೆಗೆ ಓಡುತ್ತಿತ್ತು. ಪಾಠಕ್ಕೆ ಷೆಲ್ಲಿ ಕವಿಯ ಒಂದು ಪದ್ಯ ಸಾಕಾಗಿದ್ದರೆ ಅಷ್ಟನ್ನೇ ಓದಿಮುಗಿಸುವುದು ಗೋಪಾಲಿಗೆ ತೃಪ್ತಿಯನ್ನುಂಟುಮಾಡುತ್ತಿರಲಿಲ್ಲ. ಷೆಲ್ಲಿ ಕವಿಯ ಎಲ್ಲಾ ಕಾವ್ಯಗಳು, ಅವನ ಜೀವನ ಚರಿತ್ರೆ, ಅವನ ಮೇಲೆ ಮತ್ತು ಅವನ ಕಾವ್ಯಗಳ ಮೇಲೆ ಪ್ರಕಟವಾಗಿದ್ದ ವಿಮರ್ಶೆಗಳು-ಇಷ್ಟನ್ನೂ ಓದಿ ಷೆಲ್ಲಿಯ ಮೇಲೆ ತನ್ನ ಅಭಿಪ್ರಾಯವನ್ನು ಜೋಡಿಸಿಕೊಳ್ಳುತ್ತಿದ್ದನು. ಒಂದೊಂದು ಸಲ ಗೋಪಾಲಿಯ ಉಪಾಧ್ಯಾಯರು ತಮಗಿಂತಲೂ ತಮ್ಮ ಶಿಷ್ಯನಿಗೆ ಒಂದು ವಿಷಯವು ಹೆಚ್ಚು ಗೊತ್ತಿದೆಯೆಂಬುದನ್ನರಿತು ಆ ಮಹಾಪರಾಧಕ್ಕಾಗಿ ಅವನನ್ನು ದಂಡಿಸುತ್ತಿದ್ದರು.
ಹೊಸ ವಿಚಾರ, ತತ್ವಗಳನ್ನರಿಯಲು ಗೋಪಾಲಿಯ ಮನಸ್ಸು ಬಹಳ ತವಕಪಡುತ್ತಿತ್ತು. ಇದಕ್ಕಾಗಿ ಎಷ್ಟು ಶ್ರಮವಾದರೂ ಅವನು ಗಮನಿಸುತ್ತಿರಲಿಲ್ಲ. ಅವನ ವಯಸ್ಸಿನ ಹುಡುಗರು, ಅಪ್ಪ ಕೊಡುತ್ತಿದ್ದ ಚಿಲ್ಲರೆ ಹಣವನ್ನು ಕಾಲg ಟೆಗಳಿಗೆ ವಿನಿಯೋಗಿಸುತ್ತಿದ್ದರೆ ಗೋಪಾಲಿ ಪುಸ್ತಕಗಳನ್ನು ಕೊಳ್ಳಲಿಕ್ಕೆ ವಿನಿಯೋಗಿಸುತ್ತಿದ್ದನು.
ಗೋಪಾಲಿಗೆ ತನ್ನ ಶಾಲೆಯ ಇಂಗ್ಲಿ ಮತ್ತು ಇತಿಹಾಸದ ಶಿಕ್ಷಕರನ್ನು ಕಂಡರೆ ತುಂಬ ಗೌರವ. ಆ ಶಿಕ್ಷಕರ ಹಿಂಡಿನಲ್ಲಿ ಅವರೇ ಇಬ್ಬರು ವಿದ್ವಾಂಸರು. ತಮ್ಮ ವಿಷಯಗಳಲ್ಲಿ ಪೂರ್ಣಪಾಂಡಿತ್ಯವು ಇಬ್ಬರಿಗೂ ಇತ್ತು. ಜತೆಗೆ ಶಿಷ್ಯರು ನಿಜವಾದ ವಿದ್ಯೆಯನ್ನು ಕಲಿತು, ಮುಂದಕ್ಕೆ ಬರಲಿ ಎಂಬ ಸದಾಶಯವೂ ಅವರ ಮನಸ್ಸಿನಲ್ಲಿತ್ತು.
ಒಂದು ದಿವಸ ಇತಿಹಾಸದ ತರಗತಿಯಲ್ಲಿ ಒಂದು ಪ್ರಕರಣ ನಡೆಯಿತು. ಅಧ್ಯಾಪಕರು ಇಂಗ್ಲೆಂಡಿನ ಇತಿಹಾಸವನ್ನು ಬೋಧಿಸುತ್ತಾ ಮೇರಿಯ ವಿಚಾರ ಪಾಠ ಹೇಳುತ್ತಿದ್ದರು. ಅವಳ ವಿಚಾರ ಹೆಚ್ಚಾಗಿ ಬರೆದಿರುವ ಗ್ರಂಥಕಾರರ ಸಂಗತಿಯನ್ನೂ ತಿಳಿಸುತ್ತಿದ್ದರು. ಆಗ ಗೋಪಾಲಿ
“ರಾನಾ ಬರೆದಿರುವ ಮೇರಿ ಕ್ವೀ ಆs ಸ್ಕಾm ಎನ್ನುವ ಕಾದಂಬರಿ ಹೇಗಿದೆ ಸಾg?” ಎಂದು ಕೇಳಿದ. ಅಧ್ಯಾಪಕರ ಕಣ್ಣು, ಕಿವಿ, ಮೂಗು ಕೆಂಪೇರಿದವು. ತಡೆಯಲಾರದಷ್ಟು ಕೋಪವು ಉಕ್ಕೇರಿ ಬಂದಿತು. “ಗೋಪಾ!” “ಸg”
“ನೀನು ಒಳ್ಳೆಯ ಹುಡುಗ- ಓದುವುದರಲ್ಲಿ ಒಳ್ಳೆಯ ಅಭಿರುಚಿ ಇಟ್ಟುಕೊಂಡಿರುತಕ್ಕವನು ಎಂದಿದ್ದೆ. ರೆನಾ ಮೊದಲಾದ ಕೀಳು ಬರಹಗಾರರನ್ನೆಲ್ಲಾ ನೀನು ಅಸಕ್ತಿಯಿಂದ ಓದುವುದು ನನಗೆ ಗೊತ್ತಿರಲಿಲ್ಲ. ಈಗ ಗೊತ್ತಾದ ಹಾಗಾಯಿತು.”
“ಕ್ಷಮಿಸಿ ಸg. ತಾವು ತಪ್ಪು ತಿಳಿದುಕೊಂಡಿರುವಿರಿ. ನಾನು ಇದುವರೆವಿಗೂ ರೆನಾನ ಒಂದು ಗ್ರಂಥವನ್ನು ಓದಿಲ್ಲ. ತಾವು ಮೇರಿ ವಿಚಾರ ಹೇಳುತ್ತಿದ್ದೀರಿ- ಅವನ ಮೇರಿ ಕ್ವೀ ಆs ಸ್ಕಾm ಹೇಗಿದೆ ಎಂದು ಹೇಳಿದೆ ಅಷ್ಟೇ.”
ಅಧ್ಯಾಪಕರಿಗೆ ಕೋಪವಿಮ್ಮಡಿಸಿತು.
“ತಪ್ಪು ಮಾಡಿ- ಸುಳ್ಳೂ ಹೇಳುವೆಯಾ. ಅವಿಧೇಯ, ನಡೆ ಕ್ಲಾಸಿನಿಂದ.”
ಎಂದು ಗದರಿಸಿದರು. ಗೋಪಾಲನ ಮನಸ್ಸಿಗೆ ಬಹಳ ವ್ಯಥೆಯಾಯಿತು. ಉಪಾಧ್ಯಾಯರು ತಪ್ಪು ಮಾಡುತ್ತಿರುವವರಲ್ಲಾ ಎಂದು ಖಿನ್ನನಾದನು. ಅವರ ಮಾತಿಗೆ ಮಾತು ಬೆಳೆಸಲಿಚ್ಚಿಸದೆ ತನ್ನ ಪುಸ್ತಕಗಳನ್ನು ಕಂಕುಳಲ್ಲಿಟ್ಟುಕೊಂಡು ನೇರವಾಗಿ ‘ಪಬ್ಲಿP ಲೆಬ್ರರಿಯ’ ಕಡೆ ನಡೆದನು.
ಅಂದಿನಿಂದ ಮೂರು ದಿವಸ ಶಾಲೆಯ ಮುಖ ನೋಡಲಿಲ್ಲ. ಹೊತ್ತಿಗೆ ಸರಿಯಾಗಿ ಮನೆಯಲ್ಲಿ ಊಟ ಮಾಡುವುದು, ಶಾಲೆಯ ಬದಲು ‘ಪಬ್ಲಿP ಲೆಬ್ರರಿಗೆ’ ಹೋಗಿ ಅಲ್ಲಿ ರೆನಾ ಕಾದಂಬರಿಗಳನ್ನು ಓದುವುದು.
ನಾಲ್ಕನೆಯ ದಿವಸ ಎರಡನೆಯ ಘಂಟೆಯೇ (ಠಿeಡಿioಜ) ಇತಿಹಾಸ ಕ್ಲಾಸು. ಅಧ್ಯಾಪಕರು ಹಾಜರಿಯನ್ನು ತೆಗೆದುಕೊಳ್ಳುತ್ತಾ
“ಗೋಪಾಲರಾ”ಎಂದು ಕೂಗಿದರು. ” ಪ್ರೆಸೆಂm ಸg”. (ಠಿಡಿeseಟಿಣ siಡಿ)
ಅಧ್ಯಾಪಕರು ಕತ್ತೆತ್ತಿ ನೋಡಿದರು. ಗೋಪಾಲನೇ ಹಾಜರಿಯನ್ನು ಹೇಳಿದ್ದ.
“ಮೂರು ದಿವಸದಿಂದ ಶಾಲೆಗೆ ಏಕಯ್ಯಾ ಬರಲಿಲ್ಲ?”
“ಸ್ವಲ್ಪ ಕೆಲಸವಿತ್ತು ಸg.”
“ಏನು ಕೆಲಸ. ರಜೆಗೆ ಬರೆದುಕೊಳ್ಳುವುದಕ್ಕೇನಾಗಿತ್ತು?”
“ರಜೆ ಕೇಳುವ ಹಾಗಿರಲಿಲ್ಲ .”
ಅಂತಹದೇನಪ್ಪಾ ರಾಜಕಾರ್ಯ?”
“ಹೇಳೂಂದರೆ ಹೇಳುತ್ತೇನೆ ಸg.”
“ಹೇಳಯ್ಯಾ.”
ಅಂದು ನಾನು ರೆಲಾ ಕಾದಂಬರಿ ಓದಿಲ್ಲ ಎಂದು ಹೇಳಿದೆ. ತಾವು ನಂಬಲಿಲ್ಲ. ನಾನು ಸುಳ್ಳು ಹೇಳುತ್ತಿದ್ದೇನೆಂದು ಭಾವಿಸಿಕೊಂಡು ನನ್ನನ್ನು ಕ್ಲಾಸಿನಿಂದ ಹೊರಗೆ ಕಳುಹಿಸಿದಿರಿ. ತಮ್ಮ ಮಾತು ಸುಳ್ಳಾಗಬಾರದೆಂದು ಈಮೂರು ದಿವಸ ರೆನಾನ ಕಾದಂಬರಿಗಳನ್ನೆಲ್ಲಾ ಓದಿ ಬಂದಿದ್ದೇನೆ.”
ಅಧ್ಯಾಪಕರು ಅವಾಕ್ಕಾದರು. ಗೋಪಾಲನೇ ಮಾತನ್ನು ಮುಂದುವರಿಸಿದ.
“ರೆನಾ ನನ್ನ ಮನಸ್ಸಿಗೆ ಬರಲಿಲ್ಲ. ಬಹಳ ಕೀಳು ದರ್ಜೆಯ ಲೇಖಕ. ಕೊಳೆತ ಈರುಳ್ಳಿಯನ್ನು ಮೆಸೂರು ಗಂಧ ಎಂದುಕೊಳ್ಳುವ ಸ್ವಭಾವ ಅವನದು.”
ಎಂದನು. ಅಧ್ಯಾಪಕರು ಗೋಪಾಲನನ್ನು ಮೇಜಿನ ಬಳಿ ಕರೆದರು. ಅವನ ಕೆಹಿಡಿದು, ‘ಏ ಛಿಡಿ xಣತಿತಿ, ಡಿ eಣ, ಏ ಟಛಿದಿe eeeu ಛಿ mತಿeಛಿಥಿ ಞಣಣq’ ಎಂದರು. ಅಂದಿನಿಂದ ಗೋಪಾಲನಿಗೂ ಇತಿಹಾಸದ ಅಧ್ಯಾಪಕರಿಗೂ ಹೃತ್ಪೂರ್ವಕವಾದ ಗೆಳೆತನವೇ ಬೆಳೆಯಲಾರಂಭವಾಯಿತು.
ನುಗ್ಗಾಟ, ಹೋರಾಟಗಳು ಗೋಪಾಲನಲ್ಲಿ ಬಹಳ ಕಡಿಮೆ. ಶಾಲೆಯ ಸ್ಪರ್ಧೆಗಳಲ್ಲಿ ಬಹುಮಾನ ತೆಗೆದುಕೊಂಡು, ವಿಧ್ಯಾರ್ಥಿಗಣದ ‘ವೀರ’ ನೆನಿಸಿಕೊಳ್ಳುವುದು ಅವನ ‘ಜಾಯಮಾನ’ಕ್ಕೆ ಬಂದಿರಲಿಲ್ಲ. ಪುಸ್ತಕ ಭಂಡಾರ ಹತ್ತಿರ ಸಾಕಷ್ಟು ಕಾಗದ ಮಸಿ ಇದ್ದರೆ ಆಯಿತು.
ಶಾಲೆಯಲ್ಲಿ ಗೋಪಾಲ ಬರೆಯುತ್ತಿದ್ದ ನ್ಯಾಸಗಳನ್ನು ಇಂಗ್ಲಿ, ಕನ್ನಡ ಪಂಡಿತರು ಕೆಲವು ಸಲ ಶಾಲೆಗೆ ಓದಿ ತೋರಿಸುತ್ತಿದ್ದರು. ಅವುಗಳಲ್ಲಿ ಒಂದೆರಡನ್ನು ಶಾಲೆಯ ಪತ್ರಿಕೆಯಲ್ಲಿಯೂ ಪ್ರಕಟಿಸುತ್ತಿದ್ದರು. ಗೋಪಾಲನ ಬರವಣಿಗೆಯ ಶೆಲಿ ಕಾಲೇಜು ವಿಧ್ಯಾರ್ಥಿಗೆ ಕೀರ್ತಿತರುವಂತಹದೆಂದು ಅವನ ಅಧ್ಯಾಪಕರೇ ಪ್ರಶಂಸಿಸಿದ್ದರು.
ಗ್ರಂಥಗಳನ್ನು ಓದುವ ಕುತೂಹಲವಿದ್ದಂತೆ ಬರೆಯುವ ಕುತೂಹಲವೂ ಇದ್ದಿತು. ತನ್ನ ಆನಂದಕ್ಕಾಗಿ ಕೆಲವು ಕಥೆ, ಪ್ರಬಂಧಗಳನ್ನು ಬರೆದಿಟ್ಟುಕೊಳ್ಳುತ್ತಿದ್ದನು. ಅದನ್ನು ಪ್ರಕಟನೆಗೆ ಕಳುಹಿಸುವಷ್ಟು ಧೆರ್ಯವಿಲ್ಲ. ಮನೆಯಲ್ಲಿ ಯಾರಿಗೂ ಗೊತ್ತಾಗಬಾರದೆಂದು ಆಸೆ.
ಗೋಪಾಲ ಅನುವು ದೊರೆತಾಗಲೆಲ್ಲಾ ಏನಾದರೂ ಬರೆಯುತ್ತಿದ್ದುದು ಲಕ್ಷ್ಮಣನಿಗೆ ಗೊತ್ತಿತ್ತು. ಅದೇನೆಂದು ಕೇಳಲು ಸರಿಯಾದ ಅವಕಾಶ ದೊರೆತಿರಲಿಲ್ಲ. ಒಂದು ದಿನ ಗೋಪಾಲ ಕಥೆಯೊಂದನ್ನು ಮುಗಿಸುವುದಕ್ಕೂ ಲಕ್ಷ್ಮಣ ಅವನ ಕೋಣೆಗೆ ಹೋಗುವುದಕ್ಕೂ ಸರಿಹೋಯಿತು. ಲಕ್ಷ್ಮಣ ಬಂದದ್ದು ನೋಡಿ ಹಸ್ತಪ್ರತಿಯನ್ನು ಮುಚ್ಚಿಟ್ಟನು.
“ಅದೇನು ಗೋಪೀ- ಅವಸರದಿಂದ ಮುಚ್ಚಿಡುತ್ತಿರುವೆ?”
“ಏನೂ ಇಲ್ಲ ಲಚ್ಚಣ್ಣ.”
“ತೆಗೆ-ತೆಗೆ ನೋಡೋಣ.”
ನಿನ್ನ ತನಕ ಬರುವದಲ್ಲ ಲಚ್ಚಣ್ಣ.”
“ತೆಗೆಯಪ್ಪ ಪರವಾಯಿಲ್ಲ. ನಾನು ಯಾರಿಗೂ ಹೇಳುವುದಿಲ್ಲ.”
“ಖಂಡಿತವಾಗಿ…?”
“ಖಂಡಿತವಾಗಿಯೂ ಹೇಳುವುದಿಲ್ಲ.”
“ಒಂದು ಕಥೆ ಬರೆಯುತ್ತಾ ಇದ್ದೆ. ಅಲ್ಪ ವಿಷಯವೆಂದು ನಿನ್ನ ಹತ್ತಿರ ಹೇಳಲಿಲ್ಲ.”
“ಓದುವೆಯಾ?”
“ನೀನು ಕೇಳುವುದಾದರೆ.”
“ನೀನು ಕೇಳುವುದಾದರೆ.”
“ಸಂತೋಷವಾಗಿ ಕೇಳುತ್ತೇನೆ.”
ಕಥೆ ಒಬ್ಬ ಶಿಲ್ಪಿಯ ಜೀವನಕ್ಕೆ ಸಂಬಂಧಿಸಿದ್ದು: ಶಿಲ್ಪಿ ಸಮಾಜದ ಪ್ರತಿಷ್ಠಿತ ಮೂರ್ತಿಗಳ ಶಿಲ್ಪಗಳನ್ನು ಮಾಡಿ ಪ್ರಸಿದ್ಧ ಕಲಾವಿದನೆನಿಸಿ ಕೊಂಡಿರುತ್ತಾನೆ. ಕಲೆಯಿಂದ ಸಾಕಷ್ಟು ಹಣವನ್ನು ಗಳಿಸಿ ಶ್ರೀಮಂತಿಕೆಯ ಜೀವನವನ್ನೇ ನಡೆಸುತ್ತಾ ಸಖವಾಗಿರುತ್ತಾನೆ. ಆದರೆ ಅವನಿಗೊಂದು ಹಂಬಲ. ಬಡತನವನ್ನು ಚಿತ್ರಿಸಿ ಒಂದು ಶಿಲ್ಪವನ್ನು ಕಡೆಯಬೇಕೆಂದು. ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗುತ್ತಿರುತ್ತವೆ. ಯಾವ ಮೂರ್ತಿಯನ್ನು ಕಡೆಯಲಿ ಅದರ ಮುಖದ ಮೇಲೆ ಸುಖ ಸಂಪತ್ತಿನ ಕಳೆಯೇ ಕೂಡುತ್ತಿರುತ್ತದೆ. ಕಲಾವಿದನು ಬೇಸತ್ತು ಸುಮ್ಮನಾಗಿಬಿಡುತ್ತಾನೆ. ಕೆಲವು ವರ್ಷ ಕಳೆಯುತ್ತದೆ- ಕಲಾವಿದನ ಒಬ್ಬಳೇ ಮಗಳು ಮೋಟಾರಿನ ಅಪಘಾತಕ್ಕೆ ಸಿಕ್ಕಿ ಸಾಯತ್ತಾಳೆ- ಹೆಂಡತಿ ಆ ದುಃಖದುರಿಗೆ ಸಿಕ್ಕಿ ತಾನೂ ಮೃತಿಹೊಂದುತ್ತಾಳೆ- ಕಲಾವಿದನಿಗೆ ಜಗತ್ತೇ ಬೇಡವಾಗುತ್ತದೆ. ಆಸ್ತಿಪಾಸ್ತಿಯನ್ನೆಲ್ಲಾ ಧರ್ಮಕ್ಕೆ ಬರೆದು ಹುಚ್ಚನಂತೆ ಅಲೆಯತೊಡಗುತ್ತಾನೆ. ಅನ್ನನೀರಿಲ್ಲದೆ ಕೊರಗುತ್ತಾನೆ. ಚಳಿಯೆನ್ನದೆ ಮಳೆಯೆನ್ನದೆ ಧರ್ಮಛತ್ರಗಳ ಜಗುಲಿಗಳ ಮೇಲೆಮಲಗಿ ಅಲ್ಲಿನ ಭಿಕಾರಿಗಳ ಸ್ನೇಹ ಬೆಳೆಸುತ್ತಾನೆ. ಇದ್ದಕಿದ್ದಹಾಗೆ ಕೆಯಲ್ಲಿ ಹೊಸ ರಕ್ತಸಂಚಾರ ಆರಂಭವಾಗುತ್ತದೆ. ಕೆಗೆ ಒಂದು ಚೂರು ಇದ್ದಿಲು ಸಿಕ್ಕಿದರೆ ಸಾಕು ಬೀದಿಯ ಗೋಡೆಗಳ ಮೇಲೆ ಬರೆಯತೊಡಗುತ್ತಾನೆ. ಗೀಚಿದರೆ ಚಿತ್ರ- ಕೆರೆಯಂಗಳದಿಂದ ಜೇಡಿಮಣ್ಣನ್ನು ತಂದು ಮೂರ್ತಿಗಳನ್ನು ಮಾಡಿ ಬೀದಿಯಲ್ಲಿ ಕಂಡಕಂಡವರಿಗೆ ಉದಾರವಾಗಿ ದಾನ ಕೊಡಲು ಆರಂಭಿಸುತ್ತಾನೆ. ಸುಂದರ ಮೂರ್ತಿಗಳು ಸುಂದರ ಚಿತ್ರಗಳು. ಮೂರ್ತಿ ಚಿತ್ರಗಳ ಸೌಂದರ್ಯ ಸ್ತೀಪುರುಷರ ಹೊರಮೆಯನ್ನು ಆಶ್ರಯಿಸಿರಲಿಲ್ಲ. ಅವರ ಅಂತರಂಗವನ್ನು ಹೊರಸೂಸುತ್ತಿತ್ತು. ಕಾಂಚಾಣಕ್ಕೆ ಕೆಯ್ಯೊಡ್ಡಿರುವ ಚಿತ್ರ-ಭಿಕ್ಷುಕಿ ತನ್ನ ಮಗುವಿಗೆ ಮೊಲೆಯೂಡಿಸುವ ಚಿತ್ರ: ತಾಯಿಯ ಹೊಟ್ಟೆಗೇ ಕೂಳಿಲ್ಲ, ಇನ್ನು ಮೊಲೆಯಲ್ಲಿ ಹಾಲು ಎಲ್ಲಿಂದ ಬರಬೇಕು. ಮಗುವಿಗೆ ತೃಪ್ತಿಯಾಗುವುದುಲ್ಲ, ಅಳುತ್ತದೆ. ತಾನೆ ಒಣಗಿ ಕಾಷ್ಠವಾಗಿರುವ ಒಬ್ಬ ಹಳ್ಳಿಯವನು ಒಂದು ಹೊರೆ ಕಟ್ಟಿಗೆಯನ್ನು ಹೊತ್ತು ನಿಂತಿರುವ ಚಿತ್ರ- ಹೀಗೇ. ಚಿತ್ರಗಳನ್ನು ಬರೆದುಕೊಟ್ಟು ಬರೆದುಕೊಟ್ಟು ಊರ ಮಕ್ಕಳ ಸ್ನೇಹವನ್ನು ಸಂಪಾದಿಸುತ್ತಾನೆ. ಅವನು ಹೋದ ಕಡೆ ಒಂದು ಹಿಂಡು ಬಳಗ. ಒಂದು ದಿವಸ ಹುಚ್ಚ ಓಡಿಹೋಗಿ ಬಿಡುತ್ತಾನೆ. ಮಕ್ಕಳ ಮುಖವೆಲ್ಲಾ ಪೆಚ್ಚಾಗುತ್ತವೆ. ಮಕ್ಕಳು ಅವನನ್ನು ಮತ್ತೆ ಕಾಣುವುದಿಲ್ಲ- ಯಾರೂ ಕಾಣುವುದಿಲ್ಲ. ಕೊನೆಯ ದರ್ಶನ ಮುನಿಸಿಪಾಲಿಟಿಯ ಆರೋಗ್ಯ ಖಾತೆಯವರಿಗೆ ದೊರಕಿರುತ್ತದೆ.
ಸ್ವಲ್ಪ ಕಾಲ ಲಕ್ಷ್ಮಣ ಮಾತನಾಡದೆ ಸುಮ್ಮನಿದ್ದ. ಅವನ ಬಾಯಿಂದ ಏನು ಬರುವುದೋ ಎಂದು ಗೋಪಾಲಿ ಕುತೂಹಲದಿಂದ ಕಾಯುತ್ತಿದ್ದ.
“ಇದನ್ನು ಓದುವುದಕ್ಕೆ ಸಂಕೋಚಪಡಬೇಕೇ?”
“ನಿನಗೆ ಸೇರಿತೇ ಲಚ್ಚಣ್ಣ?”
“ನನಗೇಕಪ್ಪಾ- ಓದಿದವರಿಗೆಲ್ಲರಿಗೂ ಸೇರಲೇಬೇಕು. ಎಷ್ಟು ಡೊಡ್ಡ ವಿಚಾರಗಳನ್ನು ಯೋಚಿಸುತ್ತೀಯಪ್ಪಾ ಗೋಪೀ. ನಾನು ಇದನ್ನೇ ಯೋಚಿಸುತ್ತೇನೆ ನೋಡು, ನಿನಗೆ ಕಾಗದ ಮಸಿ ಸಾಧನ. ನನಗೆ ಸರಿಗಮಪಧನಿಸ ಸಾಧನ.”
“ಅಯ್ಯೋ-ನೀನೆಲ್ಲಿ ನಾನೆಲ್ಲಿ ಲಚ್ಚಣ್ಣ. ನೀನು ಬಹಳ ಮುಂದೆಹೋಗಿದ್ದೀ-ನಾನು ಈಗೀಗ ಅಕ್ಷರಾಭ್ಯಾಸವನ್ನು ಅರಂಭಿಸುತ್ತಾ ಇದ್ದೇನೆ.”
“ಜೀವನವೆಲ್ಲಾ ಅಷ್ಟೇ ನೋಡು. ಒಂದು ‘ಅ’ಕಾರದಲ್ಲಿ ಮುಗಿದು ಹೋಗುತ್ತೆ. ತಾತ್ತ್ವಿಕರು ಅದನ್ನು ಓಂಕಾರವೆನ್ನುತ್ತಾರೆ. ಸಾಮಾನ್ಯರು ಅಕ್ಷರಮಾಲೆಯ ಮೊದಲನೆಯ ಅಕ್ಷರವೆನ್ನುತ್ತಾರೆ. ಅದಷ್ಟು ನಮಗೆಲ್ಲಾ ಅರ್ಥವಾದರೆ ಸಾಲದೆ? ಬರಿ, ಗೋಪಿ ನಿಲ್ಲಿಸಬೇಡ. ಅವರಿವರು ಅಲ್ಲಗಳೆಯುತ್ತಾರೆ ಎಂದು ಎದೆಗುಂದಬೇಡ. ಬರೆದದ್ದನ್ನು ನನಗೆ ಓದಿ ಹೇಳು. ಕೇಳಿ ಸಂತೋಷಪಡುತ್ತೇನೆ. ನಾನು ಪಂಡಿತನಲ್ಲ, ಜ್ಞಾನಿಯಲ್ಲ, ಹೆಚ್ಚು ಕಲಿತವನೂ ಅಲ್ಲ. ನಿನಗೆ ನನ್ನಿಂದ ಯಾವ ಪ್ರಯೋಜನವೂ ಇಲ್ಲ- ನನಗುಂಟು. ನಿನ್ನ ಬರೆವಣಿಗೆ ಕೇಳಿದರೆ ಹೃದಯ ಹಗುರವಾಗುತ್ತೆ. ಎಲ್ಲರೂ ಸಣ್ಣಪುಟ್ಟ ವಿಚಾರಗಳನ್ನೇ ಸದಾ ಚಿಂತಿಸುತ್ತಿರುವಾಗ ಯಾರಾದರೂ ಡೊಡ್ಡ ವಿಚಾರಗಳನ್ನು ಎತ್ತಿದರೆ ಕತ್ತಲೆಯಲ್ಲಿ ಮಿಂಚುಹುಳ ಸುಳಿದಂತಾಗುತ್ತದೆ.”
“ಇನ್ನು ಇದಕ್ಕಿಂತ ಭಾಗ್ಯಬೇಕೆ ಲಚ್ಚಣ್ಣ?”
ಎಂದು ತನ್ನ ಕೃತಜ್ಞತೆಯನ್ನು ಹೃದಯಪೂರ್ವಕವಾಗಿ ಸೂಚಿಸಿದ್ದನು.
ಅಂದಿನಿಂದ ಗೋಪಾಲಿ ಲೇಖಕನಿಗೆ ಹೊಸ ಹುರುಪು ಬಂದಿತು. ಅವನ ಮನಸ್ಸು ಫಲವತ್ತಾದ ಭೂಮಿಯಂತಿತ್ತು. ಈಗ ಅದರ ಮೇಲೆ ಚೆನ್ನಾಗಿ ಮಳೆ ಹುಯಿದಂತಾಯಿತು.
*****
ಮುಂದುವರೆಯುವುದು