ಶ್ರೀರಾಮನವಮಿಯ ದಿವಸ

ಶ್ರೀರಾಮನವಮಿಯ ದಿವಸ ರಾಮಾನಾಮೃತವೆ ಪಾನಕ, ಪನಿವಾರ,ಕೋಸಂಬರಿ; ಕರಬೂಜ ಸಿದ್ದೋಟುಗಳ ಹೋಳು, ಸೀಕರಣೆ; ವೃಕ್ಷಮಧ್ಯಕ್ಕೆ ಬಂದುರಿವ ಶಬರಿ. ಕಾಮ ಗಾರಾದ ಮಣ್ಣೊಡಲಿನೊಳಗಡೆಗೆ ಕಿಡಿ- ಕುಳಿತ ಮೂಲಾಧಾರ ಜೀವಧಾತು ಮೋಡದ ಸಹಸ್ರಾರದೆಡೆಗೆ ತುಡಿಯುವ ತುರುಸು; ಮಣ್ಣೊಡೆದು ಹಸರು […]

ಪ್ರಾರ್ಥನೆ

ಪ್ರಭೂ, ಪರಾಕು ಪಂಪನ್ನೊತ್ತಿಯೊತ್ತಿ ನಡ ಬಗ್ಗಿರುವ ಬೊಗಳು ಸನ್ನಿಯ ಹೊಗಳುಭಟ್ಟ ಖಂಡಿತ ಅಲ್ಲ; ಬಾಲವಾಡಿಸಿ ಹೊಸೆದು ಹೊಟ್ಟೆ ಡೊಗ್ಗುಸಲಾಮು ಬಗ್ಗಿ ಮಿಡುಕುವ ಸಂಧಿವಾತ ಪೀಡಿತನಲ್ಲ; ತನ್ನ ಮೋಂಬತ್ತಿ ನಂದಿಸಿ ಸಂದಿಬೆಳಕಲ್ಲಿ ಜುಮ್ಮನರಸುವ ಷಂಡ ಜಿಗಣೆಯಲ್ಲ; […]

ನನ್ನ ನುಡಿ

ಹಲವು ಹೂಗಳ ಸುಗಂಧವ ತರುವ ಹರಿಕಾರ, ಎಲೆಲೆ ಮಂದಾನಿಲನೆ, ನಿನಗೆ ಸೌರಭಸಾರ ದೊರೆಕೊಳ್ಳಲಿಲ್ಲ; ಹಲವಾರು ನಕ್ಷತ್ರಗಳ ಸೆರೆಹಿಡಿದು ತಂದು ಕೋಡುವ ದೀಪ್ತಕಾಸಾರ, ನಿನಗಿಲ್ಲ, ನಿನಗಿಲ್ಲ, ಬಾಳ ಬೆಳಗುವ ದೀಪ; ಹಲವು ಬಣ್ಣವ ತಳೆದು ಮೆರೆವ […]

ಮೋಹನ ಮುರಲಿ

ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು? ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು? ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ; ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ; […]

ಕೂಪ ಮಂಡೂಕ

– ೧ – ನೀನೆಲ್ಲಿ ಈಗ ಹೆಗಲಿಗೆ ಹೆಗಲ ಕೊಟ್ಟವನು ಹಾಯಿಯನ್ನುರುಟುರುಟು ಊದಿದವನು, ದಾರಿಯುದ್ದಕ್ಕು ರಹದಾರಿ ಗಿಟ್ಟಿಸಿ ದಿಳ್ಳಿ ದ್ವೀಪಾಂತರಕ್ಕೆ ಕೈ ಕೊಟ್ಟ ಸಖನು? ನಟ್ಟ ನಡುದಾರಿ ತೇಗುವ ತೋಟದೊಳಗಡೆಗೆ ಮೂಗುಮಟ ಕುಡಿದ ತಂಗೊಳದ […]

ಕಲ್ಕತ್ತೆಯಲಿ ಕಾಳಿ

ಕಲ್ಕತ್ತೆಯಲ್ಲಿ ಕಾಳಿ ಬಲಿಗೆ ಬಂದಳು ಮೊನ್ನೆ; ನರಪಶುವು ನರಪಶುವ ಕೊಂದು ಕುಣಿಯಿತು ಕೇಕೆ ಆಕಿ; ನಲಿಯಿತು ತಿವಿದು ಹೊಡೆದಪ್ಪಳಿಸಿ ಸುಟ್ಟು ಉಲಿದು ಸಾಯಿಸಿ ಕೂಸುಕುನ್ನಿಗಳ, ಹೆಣ್ಣುಗಳ, ಅಂಡುಗಳ, ದುರ್ಬಲರ, ದೀನರ, ಅನಾಥರನು. ಪಶುವ ಹೆಣ […]

ಹಳೆಮನೆಯ ಮಂದಿ

ರಾಜಮಾರ್ಗದ ಮೇಲೆಯೇ ಸುಪ್ರಸಿದ್ಧ ಮನೆ. ಕಾಡ ಕುಡುಬಿಯು ಕೂಡ ಬಲ್ಲ ಇದರ ವಿಳಾಸ, ೧೯೨೦ ರದ್ದು ಮಾದರಿ ಭದ್ರ ಬುನಾದಿ – ಕಾಂಕ್ರೀಟು. ಗೋಡೆ, ಮಹಡಿ ಮಾತ್ರ ಕಾಲಾವಧಿಯ ಕಂತ್ರಾಟು. ದೊಡ್ಡ ಲಾಂದ್ರದ ಕಂಭದೆದುರಿಗೇ […]

ಭೂತ

-೧- ಕಾಡುತ್ತಿವೆ ಭೂತಕಾಲದ ಭ್ರೂಣಗೂಢಗಳು:ಹುಗಿದ ಹಳಬಾವಿಯೊಳ ಕತ್ತಲ ಹಳಸು ಗಾಳಿ ಅಂಬೆಗಾಲಿಟ್ಟು ತಲೆಕೆಳಗು ತೆವಳುತ್ತೇರಿ‌ಆಳ್ಳಳ್ಳಾಯಿ ಜಪಿಸುವ ಬಿಸಿಲಕೋಲಿಗೆರಗಿ ತೆಕ್ಕಾಮುಕ್ಕಿ ಹಾಯುತ್ತಿದೆ ತುಳಸಿವೃಂದಾವನದ ಹೊದರಿಗೂ. ತೊಟ್ಟು ಕಳಚಿದ ಹೊಕ್ಕುಳಿನ ಬಳ್ಳಿ ದಡದಲ್ಲಿಕತ್ತರಿಸಿದಿಲಿಬಾಲ ಮಿಡುಕುತ್ತದೆ. ಕತ್ತಲಲ್ಲೇ ಕಣ್ಣು […]

ಭೂಮಿಗೀತ

೧ ಹುಟ್ಟು: ಮಲೆಘಟ್ಟ ಸೋಪಾನ ಕೆಳಪಟ್ಟಿಯಲಿ; ಉರುಳು,-ಮೂರೇ ಉರುಳು,-ಕಡಲ ಕುದಿತದ ಎಣ್ಣೆಕೊಪ್ಪರಿಗೆಗೆ. ತೆಂಗುಗರಿಗಳ ಬೀಸಿ ಕೈಚಾಚಿ ಕರೆದಳು; ಅಡಿಕೆಗೊನೆಗಿಲಕಿ ಹಿಡಿದಾಡಿಸಿದಳು. ಕಬ್ಬಿನಾಲೆಯ ತಿರುಪಿನಲ್ಲಿ ಕುಳಿತೆರೆದಳು ಅಜಸ್ರಧಾರೆಯ ಕರುಳು ತುಡಿತವನ್ನು; ಭತ್ತ ಗೋಧುವೆ ರಾಗಿ ಜೋಳ […]

ಬತ್ತಲಾರದ ಗಂಗೆ

ಬತ್ತಲಾರದ ಗಂಗೆಗೆಂಥ ಕುತ್ತಿದು, ನೋಡು; ಅದೇ ಪಾತ್ರ, ಧಾಟಿ, ವಸ್ತುಗಳ ಪಾಳಿ; ಹೊಸ ನೀರು ಬಂದರೂ ಅದೇ ಪುರಾತನದಮಲು, ರಂಗಮಂದಿರ ಅದೇ, ನಾಟಕವೂ ಅದೇ. ಹಿಮಾಲಯವೆ ಕರಗಿ ಕೆಳಗಿಳಿವ ವರ್ಷದ ತೊಡಕು, ಅಮೃತಜಲ ಮೃತ್ತಿಕೆಗಳಸಮ […]