ಬೆಂಗಳೂರಿನಂತಹ ಮಹಾಪಟ್ಟಣದಲ್ಲಿ ಜೀವನವನ್ನು ಸಾಗಿಸುವುದೇ ವೆಂಕಟೇಶನಿಗೆ ದೊಡ್ಡ ಸಮಸ್ಯೆಯಾಗಿತ್ತು. ಅವನು ಅವಲಂಬಿಸಿದ್ದ ಜೀವವಿಮಾ ಕೆಲಸವಂತೂ ಬಹಳ ಕಷ್ಟಸಾಧ್ಯವಾಗಿತ್ತು. ಯಾರನ್ನು ಕೇಳಿ ಹೋದರೂ ಅವರೇ ಒಂದಲ್ಲ ಒಂದು ಕಂಪನಿಯ ಏಜಂಟರಾಗಿರುತ್ತಿದ್ದರು. ಜೀವವಿಮೆ ಮಾಡುವುದಕ್ಕೆ ಪೇಟೆಯ ಜನಕ್ಕೆ ನಂಬಿಕೆಯಿಲ್ಲ – ಧೆರ್ಯವೂ ಇಲ್ಲ. ತಿಂಗಳು ತಿಂಗಳಿಗೂ ಪ್ರೀಮಿಯಂ ಹಣವನ್ನು ಹೇಗೆ ಕಟ್ಟುವುದು ಎಂಬುದು ಅವರ ಸಮಸ್ಯೆ. ಜೀವವಿಮೆ ಮಾಡಿದ ಕೂಡಲೆ ಮನುಷ್ಯ ಸಾಯುತ್ತಾನೆಂದು ಹಳ್ಳಿಯ ಜನರ ನಂಬಿಕೆ. ಈ ಮಧ್ಯೆ ಮೂಢ ಜನರನ್ನು ಸುಲಿದು ತಿನ್ನುವ ವಿಮಾ ಏಜಂಟರ ಕಾಟ – ‘ವಿಮಾ ವೃತ್ತಿಯನ್ನು ಬಿಟ್ಟುಬಿಡುವುದು ಒಳ್ಳೆಯದೇನೋ’ ಎಂದು ಕೆಲವು ಸಾರಿ ಯೋಚಿಸಿದನು. ‘ಯಾವ ವೃತ್ತಿಯಾದರೇನು? ಎಲ್ಲದರಲ್ಲಿಯೂ ಒಂದೊಂದು ಬಗೆಯ ಸಂಕಷ್ಟಗಳು ಇದ್ದೇ ಇರುತ್ತವೆ’ ಎಂದು ಸಮಾಧಾನಪಟ್ಟುಕೊಳ್ಳುವನು.
ಎರಡು ವರ್ಷ ದುಡಿಯುವುದರಲ್ಲಿ ವೃತ್ತಿಯ ಕಷ್ಟ ಸುಖಗಳು ಸಂಪೂರ್ಣವಾಗಿ ಮನವರಿಕೆಯಾದವು. ವಿಮೆ ನಿಜವಾಗಿಯೂ ಆಪತ್ಕಾಲದಲ್ಲಿ ಮನುಷ್ಯನ ತಲೆ ಕಾಯುತ್ತದೆ ಎಂಬುದನ್ನು ಕಂಡುಕೊಂಡನು. ಅನುಭವದಿಂದ ವ್ಯಾಪಾರವೂ ಕುದುರಿತ್ತು. ವ್ಯಾಪಾರದ ಮರ್ಮವೂ ಗೊತ್ತಾಗಿತ್ತು. ಕಂಪೆನಿಯವರು
“ಈ ವರ್ಷ ಮೂರು ಲಕ್ಷದಷ್ಟು ವಿಮೆ ಮಾಡಿಸಬೇಕು”
ಎಂದು ಸೂಚಿಸಿದಾಗ ವೆಂಕಟೇಶ ದೇವರ ಮೇಲೆ ಭಾರ ಹಾಕಿ ಆಗಲೆಂದು ಒಪ್ಪಿಬಿಟ್ಟ. ತಿಂಗಳು ತಿಂಗಳಿಗೆ ಸಂಬಳವೂ, ಪ್ರವಾಸದ ಖರ್ಚೂ, ವಿಮಾಹಣದ ಮೇಲೆ ದಳ್ಳಾಳಿಯೂ ದೊರೆಯಲಾರಂಭವಾದವು.
ಕಂಪೆನಿಯು ವೆಂಕಟೇಶನ ಯೋಗ್ಯತೆಯನ್ನೂ ಪ್ರಾಮಾಣಿಕತೆಯನ್ನೂ ಕಂಡುಕೊಂಡಿತು. ಅವನು ಕೇಳಿದ ಅನುಕೂಲತೆಗಳನ್ನೆಲ್ಲಾ ಸಂತೋಷವಾಗಿ ಒದಗಿಸಲಾರಂಭಿಸಿತು. ಹಳ್ಳಿದಿಳ್ಳಿಗಳನ್ನೆಲ್ಲಾ ವೆಂಕಟೇಶ ಸುತ್ತಬೇಕಾಗಿತ್ತು. ಪ್ರವಾಸಕ್ಕೋಸುಗ ’ಷೆವರ್ಲೇಕಾರನ್ನು ಕೊಂಡುಕೊಂಡನು. ಕಂಪೆನಿಯೇ ಅದರ ಖರ್ಚನ್ನೂ ಕೊಟ್ಟು ಸುಲಭವಾದ ಕಂತುಗಳಲ್ಲಿ ಅದನ್ನು ವೆಂಕಟೇಶನ ಸಂಪಾದನೆಯಲ್ಲಿ ಮುರಿದುಕೊಳ್ಳಲಾರಂಭಿಸಿತು.
ವೆಂಕಟೇಶ ಕಾರು ಕೊಂಡುಕೊಂಡ ಮೇಲೆ ಅವನು ರಾಮಚಂದ್ರನ ಕಣ್ಣಿಗೆ ಒಬ್ಬ ಮನುಷ್ಯನಾಗಿ ಕಾಣಲಾರಂಭಿಸಿದ. ಪದ್ಮ ಶಾಂತನನ್ನು ಹುಡುಕಿಕೊಂಡು ಅವರ ಮನೆಗೂ ಒಂದೆರಡು ಸಲ ಹೋಗಿ ಬಂದಳು. ತನ್ನ ಟೀಪಾರ್ಟಿಗಳಿಗೆ ಯಾವಾಗಲೂ ವೆಂಕಟೇಶನಿಗೆ ಆಹ್ವಾನ ಕಳುಹಿಸದಿದ್ದವನು ಆಸಲ ಕಳುಹಿಸಿದ. ವೆಂಕಟೇಶನಾಗಲೀ ಶಾಂತನಾಗಲೀ ರಾಮಚಂದ್ರನ ಆಹ್ವಾನವನ್ನು ಸ್ವೀಕರಿಸಲಿಲ್ಲ. ವೆಂಕಟೇಶನ ’ದುರಹಂಕಾರ’ವನ್ನು ಕಂಡು ರಾಮಚಂದ್ರ ಕೆರಳಿದ. ಆದರೆ ಅದನ್ನು ಪ್ರದರ್ಶಿಸುವುದಕ್ಕೆ ಮಾರ್ಗವಿರಲಿಲ್ಲ.
ಗೋಪಾಲ ಡಿಗ್ರಿ ಪರೀಕ್ಷೆಯನ್ನು ಮುಗಿಸಿಕೊಂಡು ಊರಿಗೆ ಬಂದ. ತನ್ನ ಮನೆಯಲ್ಲಿ ಆಗಿದ್ದ ಮಾರ್ಪಾಟುಗಳನ್ನು ಕಂಡು ಆಶ್ಚರ್ಯಪಟ್ಟ. ತನ್ನ ಅತ್ತಿಗೆಯ ’ಅವತಾರ’ವನ್ನು ಕಂಡಮೇಲಂತೂ ನೆಲಕ್ಕೆ ಕುಸಿದೇ ಹೋದ. ತನ್ನ ವೇಳೆಯನ್ನೆಲ್ಲಾ ವೆಂಕಟೇಶನ ಮನೆಯಲ್ಲಿಯೇ ಕಳೆಯಲು ಮೊದಲುಮಾಡಿದ.
ಶಾಂತನೇ ಒಂದು ದಿವಸ
“ನೀನು ಯಾವಾಗಲೂ ಇಲ್ಲೇ ಇದ್ದರೆ ನಿಮ್ಮಣ್ಣ ಅತ್ತಿಗೆ ಏನನ್ನುತ್ತಾರೋ ಗೋಪೀ?”
“ಏನು ಬೇಕಾದರೂ ಅಂದುಕೊಳ್ಳಲಿ ಬಿಡಿ ಶಾಂತಕ್ಕ. ಅವರ ಅವತಾರ, ನಡತೆ ಒಂದೂ ಸರಿಬೀಳಲ್ಲಮ್ಮ ನನಗೆ.”
“ಹಾಗನ್ನಬಾರದಪ್ಪಾ. ಎಷ್ಟಾದರೂ ರಾಮಣ್ಣ ನಿನಗೆ ಅಣ್ಣ ಅಲ್ಲವೇನೋ?”
“ಲಚ್ಚಣ್ಣ ಮನೆ ಬಿಟ್ಟು ಹೋದಮೇಲೆ ಆ ಅಣ್ಣ ತಮ್ಮ ಭಾವನೆಯೆಲ್ಲಾ ಅವನ ಹಿಂದೇನೇ ಹೋಗಿಬಿಟ್ಟಿತು. ಮನುಷ್ಯರ ಸಂಬಂಧ ಇಟ್ಟುಕೊಳ್ಳಬಹುದು. ಅವರ ಹತ್ತಿರ ಹೇಗೆ ಸಾಧ್ಯ? ಯಾರೋ ಮುಖಕ್ಕೆ ಪೌಡg ಬಳಿದುಕೊಂಡರು. ನಮ್ಮ ಅತ್ತಿಗೆಯೂ ಬಳಿದುಕೊಂಡಳು; ಯಾರೋ ಹಿಮ್ಮಡಿಯೆತ್ತರದ ಷೂ ಹಾಕಿಕೊಂಡಳು. ನಮ್ಮ ಅತ್ತಿಗೆಯೂ ಹಾಕಿಕೊಂಡಳು. ಯಾರು ಏನೇ ಮಾಡಲಿ, ತಾವೂ ಮಾಡಿಬಿಡಬೇಕು. ನಾಳೆ ಆ ಚೆನೀ ಆಟಗಾರ ಕಾಲು ಮೇಲಕ್ಕೆ ಮಾಡಿ ಕೆಯಲ್ಲಿ ನಡೆಯುವುದನ್ನು ನಮ್ಮ ಅಣ್ಣ ಅತ್ತಿಗೆ ನೋಡಿದರೆ ಅವರೂ ಅದನ್ನು ಆರಂಭಿಸಿಬಿಡುತ್ತಾರೆಯೋ ಏನೋ?”
“ಅವರ ವಿಚಾರದಲ್ಲಿ ನೀನು ಬಹಳ ಕಠಿಣ …”
“ಕಠಿಣ ಅಲ್ಲ ಶಾಂತಕ್ಕ. ಸ್ವಬುದ್ಧಿ ಸ್ಸಲ್ಪವೂ ಬೇಡವೆ ಅಂತ ಕೇಳಿದೆ ಅಷ್ಟೆ. ಮೊನ್ನೆ ಭಿಕ್ಷಕ್ಕೆ ಒಬ್ಬ- ಓಟಿಥಿಥಿqe Uಟಿxಥಿeತಿ ಣಞ ಥಿಟe Sಣಣತಿ -ಪಾದ್ರಿ ಹೆಂಗಸು ಬಂದಿದ್ದಳು. ಅವಳ ಹತ್ತಿರ ನಮ್ಮ ಅತ್ತಿಗೆ ಇಂಗ್ಲಿಷಿನಲ್ಲಿ ಚರ್ಚೆ ಶುರುಮಾಡಿಬಿಟ್ಟಳು. ನೋಡಬೇಕಾಗಿತ್ತು! ಪಾದ್ರಿಗೆ ಕನ್ನಡ ಬರುತ್ತಿತ್ತು. ಅವಳ ಇಂಗ್ಲಿಷು ಕೇಳಲಾರದೆ ಕನ್ನಡದಲ್ಲಿ ಆರಂಭಿಸಿದಳು. ನಮ್ಮ ಅತ್ತಿಗೆ ಇಂಗ್ಲಿಷೇ ಹೊಡೆದರು. ಕೃತ್ರಿಮ ಜನ ಕೃತ್ರಿಮ ನಡೆವಳಿಕೆ.”
“ಹಾಗಾದರೆ ಕಲಿತ ಇಂಗ್ಲಿಷಿನಲ್ಲಿ ಮಾತನಾಡುವುದೇ ತಪ್ಪೇ?”
“ತಪ್ಪಲ್ಲ ಶಾಂತಕ್ಕ, ಎಲ್ಲದಕ್ಕೂ ಒಂದು ಮಿತಿಯಿದೆ. ಆ ಪಾದ್ರಿ ಹೆಂಗಸು ಬಂದಿದ್ದದ್ದು ಭಿಕ್ಷಕ್ಕೆ. ಅವರ ಮುಂದೇಕೆ ಇವರ ಭಾಷಾಪ್ರದರ್ಶನ. ಏನಾದರೂ ಕೊಡುವಹಾಗಿದ್ದರೆ ಕೊಟ್ಟು ಸಾಗಿಸಬೇಕು. ಪೌಡg, ಷೂ, ಇಂಗ್ಲಿ ಬಂದುಬಿಟ್ಟರೆ ಸಂಸ್ಕಾರವಾದ ಹಾಗಾಯಿತೇ? ಮನೆಯಲ್ಲಿ ನಿನಗೆ, ಭಾವನಿಗೆ, ಜಯನಿಗೆ, ಲಚ್ಚಣ್ಣನಿಗೆ ಮಾಡಿದ್ದನ್ನು ಎಷ್ಟು ಪೌಡg ಹಾಕಿದರೆ ಮುಚ್ಚುತ್ತದೆ?”
“ಹೋಗಲಿ ಬಿಡಪ್ಪಾ ಅವೆಲ್ಲಾ ಜ್ಞಾಪಿಸಬೇಡ. ಲಚ್ಚಣ್ಣನ ಸುದ್ದಿ ಸಮಾಚಾರವೇನಾದರೂ ತಿಳೀತೇನೋ ಗೋಪೀ?”
“ಏನೂ ತಿಳಿದಿಲ್ಲಮ್ಮ. ಜೀವಂತವಾಗಿದ್ದಾನೆ ಎಂದು ತಿಳಿದುಬಿಟ್ಟರೆ ಸಾಕು. ಎಲ್ಲಿದ್ದಾನೋ – ಏನು ಮಾಡುತ್ತಾ ಇದ್ದಾನೋ? ಅವನ ವಿದ್ಯೆ ಅವನನ್ನು ಕಾಪಾಡಬೇಕು.”
“ಅದನ್ನೂ ಬಿಟ್ಟುಬಿಟ್ಟ ಎಂದು ಕಾಣುತ್ತದಪ್ಪಾ. ಇಲ್ಲಿಂದ ಹೊರಟುಹೋಗುವ ಮುಂಚೆ ತಂಬೂರಿ ತರಿಸಿಕೊಂಡು ಅದರ ತಂತಿಯನ್ನೆಲ್ಲಾ ಕಿತ್ತು ಹೊರಟುಹೋದ. ನಾನು ತಂಬೂರಿಯನ್ನು ಹಾಗೇ ತೆಗೆದು ಇಟ್ಟಿದ್ದೀನಿ.”
“ಒಳ್ಳೆಯ ಕೆಲಸ ಮಾಡಿದೆ. ಅದಕ್ಕೆ ತಂತಿ ಹಾಕಿಸಿ ಇಟ್ಟಿರೋಣ. ಮಹಾರಾಯ ಎಂದು ಬರುತ್ತಾನೋ ಬಂದು ತೆಗೆದುಕೊಳ್ಳಲಿ.”
“ಬರುತ್ತಾನೆ ಎನ್ನುವ ನಂಬಿಕೆ ನಿನಗಿದೆಯೇ?”
“ಇದೆಯಮ್ಮಾ. ನನ್ನ ತಪಸ್ಸು ಮುಗಿದಿಲ್ಲಎಂದು ಹೇಳುತ್ತಾಇದ್ದ. ತಪಸ್ಸನ್ನು ಧಾರೆಯೆರೆಯುವ ತನಕ ಅದರ ಸಿದ್ಧಿ ದೊರೆಯುವುದಿಲ್ಲ ಎಂದು ನಾನು ಹೇಳಿದೆ. ಧಾರೆಯೆರೆಯುವ ಮೊದಲು ಬಂಡವಾಳ ಸಂಪಾದಿಸಿಕೊಳ್ಳುತ್ತೇನಪ್ಪಾ . ಬರಿಯ ಕೆಯಲ್ಲೇ ಮೊಳಹಾಕಲೇ ಎಂದು ಹೇಳಿದ್ದ. ಈಗ ಸಂಪಾದನೆಯಲ್ಲಿದ್ದಾನೆ ಎಂದು ಕಾಣುತ್ತದೆ.”
ಸಂತೋಷದಿಂದ ಶಾಂತನ ಕಣ್ಣುಗಳಲ್ಲಿ ಹನಿಗಳು ತುಂಬಿದವು.
“ಯಾವಾಗಲಾದರೂ ಬರಲಪ್ಪಾ ಚೆನ್ನಾಗಿದ್ದರೆ ಸಾಕು.”
ಎಂದು ಹೇಳಿದಳು. ತಕ್ಷಣವೇ ಏನನ್ನೋ ಜ್ಞಾಪಿಸಿಕೊಂಡು.
“ಗೋಪಣ್ಣಾ, ನಿನ್ನ ಕತೆಗಳನ್ನೆಲ್ಲಾ ಸೇರಿಸಿ ಪುಸ್ತಕ ಮಾಡುತ್ತೇನೆ. ಎಂದು ಹೇಳಿದೆಯಲ್ಲಾ ಏನಾಯಿತು?”
ಎಂದು ಕೇಳಿದಳು. ಗೋಪಾಲ ಜೇಬಿನಿಂದ ಒಂದು ಪುಸ್ತಕವನ್ನು ತೆಗೆದು ಅವಳ ಕೆಗೆ ಕೊಟ್ಟನು. ಶಾಂತಾ ಗಟ್ಟಿಯಾಗಿ ಓದಿದಳು.
“ಹಂಬಲ” ( ಹತ್ತು ಸಣ್ಣ ಕಥೆಗಳು )
– ಲೇಖಕರು : ಹೊ.ಶ್ರೀ.ಗೋಪಾಲರಾಯ
“ಎಂತಹ ಸುಳ್ಳುಗಾರನೋ ನೀನು ಗೋಪಣ್ಣ! ನನಗೆ ಹೇಳಲೇಬೇಡವೇ? ಕಥೆ ಬರೆದೂ ಬರೆದೂ ಸುಳ್ಳು ಹೇಳುವ ಪಾಠ ನಿನಗೆ ಚೆನ್ನಾಗಿ ಬಂದಿದೆಯೆಂದು ಕಾಣುತ್ತದೆ.”
“ಇಲ್ಲಮ್ಮಾ, ಪುಸ್ತಕ ಬರುತ್ತದಲ್ಲಾ ಆಗ ಕೆಗೆ ಪ್ರತಿ ಕೊಟ್ಟು ಹೇಳೋಣಾಂತಿದ್ದೆ.”
ವೆಂಕಟೇಶಯ್ಯನ ಕಾರಿನ ದ್ವನಿಯಾಯಿತು. ಅವನೇ ಒಳಗೆ ಬಂದು ಶಾಂತಾ ತನ್ನ ಉತ್ಸಾಹವನ್ನು ತಡೆಯಲಾರದೆ ಪುಸ್ತಕವನ್ನು ಗಂಡನಿಗೆ ತೋರಿಸುತ್ತಾ
“ನೋಡಿದಿರಾಂದ್ರೆ? ಗೋಪಣ್ಣನ ಪುಸ್ತಕ!”
ವೆಂಕಟೇಶಯ್ಯ ಬಟ್ಟೆಯನ್ನು ತೆಗೆಯದೆ ಕುಳಿತು ಪುಸ್ತಕವನ್ನು ತಿರುವಿಹಾಕಿದನು.
“ಬಹಳ ಸಂತೋಷ ಗೋಪಿ. ಹೀಗೆ ನೂರಾರು ಬರಲಪ್ಪ”
“ನಿನ್ನ ಆಶೀರ್ವಾದ ಭಾವಯ್ಯ”
“ನಾನೂ ಹೊತ್ತಿಗೆ ಸರಿಯಾಗಿ ಬಂದ ಹಾಗಾಯಿತು. ನಿನ್ನ ಹತ್ತಿರ ಸ್ವಲ್ಪ ಮಾತನಾಡುವುದಿತ್ತು. ಶಾಂತಾ, ಕಲಸಿ ಸ್ವಲ್ಪ ಅನ್ನ ತಂದುಬಿಡು. ಇಲ್ಲೇ ಕುಳಿತು ಗೋಪಣ್ಣನ ಕೆಲಿ ಮಾತನಾಡುತ್ತ ಇರುತ್ತೇನೆ. ನೀನೂ ಇಲ್ಲೇ ಊಟ ಮಾಡು ಗೋಪೀ.”
“ಬೇಡಪ್ಪಾ. ಮನೆಯಲ್ಲಿ ರಾದ್ಧಾಂತವಾಗಿಬಿಡುತ್ತೆ.”
“ಹಾಗಾದರೆ ಒಂದು ಕ ಟೀ ಮಾಡಿ ತಂದುಕೊಡು.”
ಶಾಂತಾ ಅನ್ನವನ್ನು ಕಲಸಿ ತಂದು ವೆಂಕಟೇಶಯ್ಯನ ಕೆಗಿತ್ತಳು. ಅವನು ಊಟಮಾಡುತ್ತಿರುವಂತೆ ಗೋಪಾಲನಿಗೆ ಟೀಯೂ ಬಂತು.
“ಮುಂದೆ ಏನು ಮಾಡಬೇಕೆಂದಿದ್ದೀ ಗೋಪಣ್ಣ?”
ಎಂದು ವೆಂಕಟೇಶಯ್ಯ ಕೇಳಿದ.
“ಈ ವರ್ಷ ಪಾಸಾಗತ್ತೆ ಎಂದು ಕಾಣತ್ತೆ. ಮುಂದೆ ಎಂ.ಎ.ಗೆ ಹೋಗೋಣ ಎಂತಿದ್ದೇನೆ.”
“ಆಮೇಲೆ”
“ಲಾಟರಿ. ಕೆಲಸ ಹುಡುಕುವುದು”
“ಯಾವ ತರಹ ಕೆಲಸ?”
“ಸಾಹಿತ್ಯ ಸಂಬಂಧವಾದದ್ದಾದರೆ ನನಗೆ ಸಂತೋಷಾಪ್ಪ. ಗ್ರಂಥಕರ್ತನಾಗಿಯೇ ಇರೋಣವೆಂದರೆ ಮೂರು ಕಾಸು ಸಂಪಾದನೆಯಾಗಲ್ಲ.”
“ಏಕೆ ನಿನ್ನ ಹಂಬಲಕ್ಕೆ ಏನೂ ಬರಲಿಲ್ಲವೇ?”
“ಬಂತು ೫೦ ಪ್ರತಿಗಳು. ಪ್ರಕಾಶಕರಿಗೆ ಮುದ್ರಣ ವೆಚ್ಚವಾದರೂ ಹುಟ್ಟಬೇಕೋ ಇಲ್ಲವೋ. ಅವರಾದರೂ ಹಣ ಎಲ್ಲಿಂದ ತರುತ್ತಾರೆ?”
“ಹಾಗಾದರೆ ’ಜರ್ನಲಿಸಂ’ಗೆ (ಎouಡಿಟಿಚಿಟism) ಏತಕ್ಕೆ ಹೋಗಬಾರದು?”
“ಸರಿಯಾದ ಪೇಪರಿದ್ದರೆ ಆಗಬಹುದು. ಆ ತರಹ ಕೆಲಸ ಮಾಡಬೇಕೆಂದು ನನಗೂ ಆಸೆಯಿದೆ.”
ಹಾಗದರೆ ಕೇಳು. ನಿನಗೆ ಒಂದು ಸಮಾಚಾರ ಹೇಳುತ್ತೇನೆ. ಅನಂತರಾಯರ ’ವೀರಕರ್ಣಾಟಕ’ ಗೊತ್ತೋ?”
“ಗೊತ್ತು”
“ರಾಯರಿಗೆ ಹಿಂದೆ ನಾನು ಸ್ವಲ್ಪ ಸ್ವಲ್ಪ ಹಣ ಕೊಟ್ಟಿದ್ದೆ. ಅದೆಲ್ಲಾ ಸೇರಿ ಐದು ಸಾವಿರದ ತನಕಾ ಆಗಿದೆ.”
“ಅವರು ತೀರಿಸೋ ಬಗೆ ಹೇಗೆ?”
“ಅದೇ ಬಂದಿರೋದು. ಇನ್ನು ಎರಡು ಸಾವಿರ ಕೊಟ್ಟರೆ ಪೇಪೆರು, ಪ್ರೆಸ್ಸು ಎಲ್ಲಾ ನನಗೆ ಕ್ರಯಕ್ಕೆ ಬರೆದುಕೊಡೋದಿಕ್ಕೆ ಸಿದ್ದವಾಗಿದ್ದಾರೆ ಅವರು ಹಣ ಕೊಡಲಿಲ್ಲ ನಾನು ತೆಗೆದುಕೊಳ್ಳಲಿಲ್ಲ. ಕೊಟ್ಟ ಹಣ ಹೋಗುವುದಲ್ಲಾಎಂಬ ವ್ಯಥೆಗೆ ಈಗ ಇನ್ನೂ ಎರಡು ಸಾವಿರ ತೆತ್ತು ಪೇಪg ಕಟ್ಟಿಕೊಳ್ಳಬೇಕಾಗಿದೆ.”
“ನೀನು ಏನು ಯೋಚನೆ ಮಾಡಿದ್ದೀ?”
“ನೀನೇನಾದರೂ ಪತ್ರಿಕೆಯನ್ನು ನಡೆಸುವ ಹಾಗಿದ್ದರೆ ಇನ್ನು ಎರಡು ಸಾವಿರ ತೆತ್ತು ಕಟ್ಟಿಕೊಳ್ಳುತ್ತೇನೆ”
“ಎಂ.ಎ.ಗೆ ಹೋಗಬೇಕೂಂತ ಇದ್ದೀನಲ್ಲ?”
“ಹೋಗಿ ಬಾ. ಅಲ್ಲಿಯ ತನಕ ಯಾರನ್ನಾದರೂ ಇಟ್ಟು ನಾನು ನಡೆಸುತ್ತಿರುತ್ತೇನೆ. ನೀನು ಆಗಿಂದಾಗ್ಗೆ ಲೇಖನಗಳನ್ನು ಬರೆಯುತ್ತಿರು. ಪರೀಕ್ಷೆ ಮುಗಿಸಿ ಬಂದು ಸಂಪಾದಕನ ಕೆಲಸ ವಹಿಸಿಕೋ.”
“ಆಗಬಹುದು. ಈ ಅನಂತರಾಯರು ನಿನಗೆ ಹೇಗೆ ಗೊತ್ತಾದರು ಭಾವಾ?”
“ಅವರ ಪೇಪರಿನಲ್ಲಿ ನಮ್ಮ ಕಂಪನಿಯ ಜಾಹೀರಾತುಗಳನ್ನು ಹಾಕಿಸುತ್ತಾ ಇದ್ದೆ. ಹೋಗುತ್ತಾ ಬರುತ್ತಾ ಸ್ನೇಹವಾಯಿತು. ಅವರ ತೊಂದರೆ ತಾಪತ್ರಯವೆಲ್ಲಾ ನೋಡುತ್ತ ಸುಮ್ಮನಿರುವುದಕ್ಕಾಗುತ್ತದೆಯೇ? ಹಣ ಕೊಟ್ಟೆ?”
“ಇವರ ವ್ಯವಹಾರವೆಲ್ಲಾ ಹೀಗೆಪ್ಪ ಗೋಪೀ. ಕೆಯಲ್ಲಿ ಕಾಸಿದ್ದರಾಯಿತು. ಯಾರು ಕೇಳಿದರೆ ಅವರಿಗೇ! ಮಹಾರಾಯರು ಧರ್ಮರಾಯರು!” ಎಂದು ಶಾಂತಾ ಗಂಡನ ಗುಣವಿಮರ್ಶೆ ಮಾಡಿದಳು.
“ಪೇಪರಿನಲ್ಲಿ ಬರುತ್ತಾಯಿದೆಯಲ್ಲ ಮ್ಯಾಜಿಸ್ಟ್ರೇm ಅವನು ಯಾರು ಭಾವ?”
“ಯಾವ ವಿಚಾರ?”
“ಯಾವನೋ ಒಬ್ಬ ಗುಮಾಸ್ತೆಯನ್ನು ಹೀನಾಮಾನಾ ಬೆದನಂತೆ. ಅವನು ಕೊರ್ಟಿನಲ್ಲೇ ವ್ಯಾಜ್ಯಕ್ಕೆ ನಿಂತನಂತೆ. ಮ್ಯಾಜಿಸ್ಟ್ರೇm ಸಾಹೇಬರು ಅವನಿಗೆ ದಮ್ಮಯ್ಯಗುಡ್ಡೆ ಹಾಕಿ ಪಾರಾದರಂತೆ. ವೀರ ಕರ್ನಾಟಕ-ತಾಯಿನಾಡು-ವಿಶ್ವಕರ್ಣಾಟಕ ಎಲ್ಲದರಲ್ಲಿಯೂ ಬಂದಿತ್ತು ಈ ಸುದ್ದಿ.”
“ಯಾರೋಪ್ಪ ನನಗೆ ಗೊತ್ತಿಲ್ಲ. ಈ ಪೇಪರು ನಾನು ತೆಗೆದುಕೊಂಡಿರುವ ವಿಷಯ ಇನ್ನು ಕೆಲವು
ದಿವಸ ಗೋಪ್ಯವಾಗಿರಲಿ ಗೋಪಣ್ಣ.”
“ಹಾಗೇ ಆಗಲಿ.”
ಗೋಪಾಲ ಹೊತ್ತಾಯಿತೆಂದು ಎದ್ದು ಹೋಗಲು ಶಾಂತಾ
“ಯಾರೂಂದ್ರೆ ಆ ಮ್ಯಾಜಿಸ್ಟ್ರೇm?”
“ಯಾರೋ ನನಗೇನು ಗೋತ್ತೆ?”
“ಪೇಪg ನಿಮ್ಮದು ನಿಮಗೆ ಗೊತ್ತಿಲ್ಲವೋ? ಹೇಳೀಂದ್ರೆ ಪರವಾಯಿಲ್ಲ.”
“ಯಾರೂ ಅಲ್ಲ- ಖಾಸಾ ನಿಮ್ಮಣ್ಣ-ರಾಮಚಂದ್ರರಾಯ.”
“ಪೇಪರಿನಲ್ಲಿ ಎಲ್ಲಾ ವಿಷಯವೂ ಬರಬೇಕು. ಮಿಕ್ಕ ಪೇಪರಿನವರು ಹಾಕುವಾಗ ನಾವು ಬಿಡುವದಕ್ಕಾಗುತ್ತದೆಯೆ? ನಮ್ಮ ಸುದ್ದಿಗಾರ ನೋಡಿದ್ದು ಬರೆದಿದ್ದಾನೆ. ರಾಯರು ಕೋರ್ಟನ್ನು ಮನೆ ಎಂದು ತಿಳಿದುಕೊಂಡುಬಿಟ್ಟರು.”
“ನಿಮ್ಮ ದಮ್ಮಯ್ಯ, ಅಂತಹವುಗಳನ್ನು ಪ್ರಕಟಿಸಬೇಡಿಂದ್ರೆ. ಎಲ್ಲಾದರೂ ಕೆಲಸದ ಬಾಯಿಗೆ ಮಣ್ಣು ಬಿದ್ದೀತು.”
“ಬೀಳಲಿ ಬಿಡು. ಬಡವರು ಬದುಕಿಕೊಳ್ಳುತ್ತಾರೆ. ನೋಡು ಶಾಂತಾ, ನಾನು ಸುಳ್ಳು ಸುದ್ದಿ ಹಾಕಿಸಲಿಲ್ಲ. ನಿಜವಾದ ಸುದ್ದಿ ಬಂದರೆ ಖಂಡಿತ ಹಾಕಿಸುತ್ತೆನೆ.”
“ನಿಮ್ಮ ಇಷ್ಟ”
ಎಂದು ಹೇಳಿದಳು. ಮನಸ್ಸಿನಲ್ಲಿ ತುಂಬ ಅಸಮಧಾನ.
ರಾಮಚಂದ್ರನಿಗೂ ಮನಸ್ಸಿನಲ್ಲಿ ಸಮಾಧಾನವಿರಲಿಲ್ಲ. ಕೋರ್ಟಿನಲ್ಲಿ ನಡೆದ ಘಟನೆ ತುಂಬ ಅವಮಾನಕ್ಕೆ ಕಾರಣವಾಗಿತ್ತು ಸಾಲದುದಕ್ಕೆ ಹಾಳು ಪೇಪರುಗಳು ಸುದ್ದಿಯನ್ನು ಊರಿನಲ್ಲೆಲ್ಲಾ ಹರಡಿದ್ದವು. ರಾಮಚಂದ್ರನ ಕ್ಲಬ್ಬಿನಲ್ಲಿಯೂ ಅದೇ ಮಾತುಕತೆ; ಪದ್ಮನ ಕ್ಲಬ್ಬಿನಲ್ಲಂತೂ ಅದು ಬಿಟ್ಟು ಬೇರೆ ಮಾತೇ ಇಲ್ಲ.
“ದಯಮಾಡಿ ನನ್ನನ್ನು ಇಲ್ಲಿಂದ ವರ್ಗಾಯಿಸಬೇಕು” ಎಂದು ರಾಮಚಂದ್ರ ಸರ್ಕಾರದವರನ್ನು ಪ್ರಾರ್ಥಿಸಿದನು. ಮೆಸೂರಿಗೆ ವರ್ಗವೂ ಸಿಕ್ಕಿತು. ರಾಮಚಂದ್ರ ‘ಬದುಕಿದೆ ಬಡಜೀವವೇ’ ಎಂದುಕೊಂಡ. ಜತೆಗೆ ಸ್ವಲ್ಪ ಸಂತೋಷವೂ ಆಯಿತು. ಗೋಪಾಲನಿಗೆ ಕಳುಹಿಸುತ್ತಿದ್ದ ಹಾಸ್ಟೆ ಖರ್ಚುಮಿಕ್ಕಿತಲ್ಲಾ ಎಂದು. ಹಾಸ್ಟೆ ವಾಸಕ್ಕೂ ತನ್ನ ಸ್ವಾತಂತ್ರ್ಯಕ್ಕೂ ಭಂಗ ಬಂದಿತಲ್ಲಾ ಎಂದು ಹೋಪಾಲ ವ್ಯಥೆಪಟ್ಟುಕೊಂಡ. ಆದರೆ ಎಂ.ಎ. ಮಾಡುವ ಗುರಿಯೊಂದು ಕಣ್ಣುಮುದೆ ಇದ್ದುದರಿಂದ ಮನೆಯ ಕಿರುಕುಳವನ್ನು ಮರೆಯುತ್ತಿದ್ದ. ಬೆಂಗಳೂರು ಜೀವನ ಕ್ಲಬ್ಬು, ಗೆಳತಿಯರು ಎಲ್ಲಾ ತಪ್ಪಿಹೋಯಿತಲ್ಲಾ ಎಂದು ಪದ್ಮ ಬಹಳ ದುಃಖಪಟ್ಟಳು. ಮೆಸೂರಿನಲ್ಲಿಯೂ ಕ್ಲುಬ್ಬು ಇರುವುದನ್ನರಿತು ಅಲ್ಲಿಯೂ ಗೆಳತಿಯರು ದೊರೆಯುವರು ಎಂದು ಸ್ವಲ್ಪ ಸಮಾಧಾನಪಟ್ಟುಕೊಂಡಳು.
*****
ಮುಂದುವರೆಯುವುದು
