ಹನಿಗವನ ಲಾಜವಾಬು ನಿಸಾರ್ ಅಹಮದ್ ಕೆ ಎಸ್ ಅಕ್ಟೋಬರ್ 2, 2026 0 ಅಮೇರಿಕದ ಸೀಡರ್ ಫಾಲ್ಸ್‌ನಲ್ಲಿ ತಂಗಿದ್ದಾಗ ವಿಚಾರಿಸಿದೆ ನೆರೆಮನೆಯ ಬಿಳಿ ಹೆಣ್ಣನ್ನ, “ನಿಮಗೆ ಎಷ್ಟು ಜನ ಮಕ್ಕಳು ಸಿಸ್ಟರ್?” ಉತ್ತರಿಸಿದಳು ಹೊರಳಿಸುತ್ತ ಚೆಲು ನೀಲಿಗಣ್ಣನ್ನ: “ನನಗೆರಡು, ನನ್ನ ಗಂಡನಿಗೆರಡು, ಸದ್ಯಕ್ಕೆ ನಮ್ಮಿಬ್ಬರಿಗೆ ಒಂದು ಮಿಸ್ಟರ್!” *****