ಲಕ್ಷ್ಮಣನ ಸ್ಥಿತಿಯೇ ಬೇರೆಯಾಗಿಬಿಟ್ಟಿತು. ನಿಂತಲ್ಲಿ ನಿಲ್ಲ. ಕುಳಿತಲ್ಲಿ ಕೂಡ. ದೇಹದ ಮೇಲಣ ಪರಿವೆಯಂತೂ ಮರೆತು ಹೋಗುತ್ತ ಬಂತು. ಮೆಮೇಲೆ ಬಟ್ಟೆಯಿದೆಯೇ ಇಲ್ಲವೇ ಎಂಬುದೂ ಅವನ ಗಮನಕ್ಕೆ ಬರುತ್ತಿರಲಿಲ್ಲ. ಹುಚ್ಚನಂತಾಗಿಬಿಟ್ಟಿದ್ದನು. ಕ್ಷೌರಕಾಣದೆ ಮುಖವೆಲ್ಲಾ ಕೂದಲು ತುಂಬಿಕೊಂಡಿತ್ತು. […]