ಕಿವಿ ಮಾತು

ನಿನ್ನ ಕಿವಿಯಾಗೊಂದು ತುರ್ತು ಮಾತು ಹೇಳಿರತೀನಿ
ಏನ ಮಾತು ತೆಗೆ ಅಂತ ಅನಬ್ಯಾಡಣ್ಣಾ.
ಅಂದರೂ ಅನವೊಲ್ಲ್ಯಾಕೆ ಕಿವಿಬಾಗಲಾ ಕಾಯತಿರಲಿ
ಬಿಟ್ಟು ಬಿಡು ಅಲ್ಲೇ ಅದನ್ನ ಅರ್ಧ ತಾಸ.

ಜಾಸ್ತಿ ಹೊತ್ತು ಬಿಟ್ಟಿರಬ್ಯಾಡ ತೂಕಡಿಸೀತು ಏನ ಕಿವಿಯಾಗೇನ
ಹೋಗಿ ಸ್ವಲ್ಪ ಮಾತಾಡಿಸಣ್ಣ ಬಂದಿರಂತ.
ಅದು ನಿನಗ ಹೇಳೊದಕ್ಕ ಏನೋ ಸುದ್ದಿ ತಂದೈತಣ್ಣ
ಕೇಳಿ ತಿಳಕೊ ಏನು ಸುದ್ದಿ ಹೇಳ್ರಿ ನಾಮಗಂತ”

ಕಚ್ಚುವಂಥಾ ಅಧಿಕಾರ ನಾಯಿಯಂಥಾ ನಾಯಿಗಿಲ್ಲ
ಮನುಶೇರಿಗಂತೂ ಸಾಧ್ಯವಿಲ್ಲ ತಿಳಕೊಳ್ಳಣ್ಣಾ
ಕಸಿಯೋವಂಥಾ ಅಧಿಕಾರ ದೇವರಂಥಾ ದೇವರಿಗಿಲ್ಲ
ಕಳೆದುಕೊಳ್ಳೋ ಅಧಿಕಾರ ಮಾತ್ರ ನಮಗೇ ಐತಣ್ಣಾ|
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.