ಕನ್ನಡಿಯೆ ಕನ್ನಡಿಯೆ ಕಣ್ಣಿವೆಯೆ ನಿನಗು?
ಇಲ್ಲವೆ|ಕನ್ನಡಿಯಾಗಿವೆಯೆ ನನ್ನ ಕಣ್ಣು?
ನೀ ನೋಡುತಿರುವೆಯ ನನ್ನ?
ಇಲ್ಲವೆ| ನಾ ನೋಡುತಿರುವೆನೆ ನಿನ್ನ?
ನಾ ನಿನ್ನ ಬಿನ್ಬವೋ? ನೆರಳೊ?
ಇಲ್ಲವೆ|ನೀ ನನ್ನ ಬಿಂಬವೊ? ನೆರಳೊ?
ನಾನಿರದೆ ನೀನಿಲ್ಲ ಹೌದೆ?
ಇಲ್ಲವೆ|ನೀನಿರದೆ ನಾನಿಲ್ಲ ಹೌದೆ?
ಇರಬಹುದು ಇಬ್ಬರು ಬೆರೆ
ಆದರೆ| ಒಳಗಿಳಿದ ಮರದ ಬೇರೊಂದೆ.
ಇಬ್ಬರ ನಡುವಿದೆ ಗಾಜು
ಒಡೆದರೆ| ನಾವಿಬ್ಬರೊಂದೆ ಎರಡಿಳಿದು.
ಎರಡಿಳಿದರೊಂದಾಗಬಹುದೆ?
ಇಲ್ಲವೆ|ಒಂಟಿಯಾಗುವೆವಂತೆ ಹೌದೆ?
ಕರಗಿದರೆ ಒಬ್ಬರೊಬ್ಬರಲಿ
ಉಳಿವೆವೆ| ಗಾಜು ಇಲ್ಲವೆ ನೆನಪಿನಲ್ಲಿ?
ಕೇಳಿರುವ ಮಾತು ಈತನಕ
ನೀ ಹೇಳು| ಸಂವಾದವೋ ಅಥವಾ ಸ್ವಗತ?
(ಸಿರಿಸಂಪಿಗೆ-ನಾಟಕ)
*****