ಪ್ರಾಯ

ಚಿಗುರು ಚಿವುಟಿದರೆ ಜಿನುಗುವ ಸೊಕ್ಕು ಪ್ರಕೃತಿಗೆ ಹಸಿರುಕ್ಕುವ ಗೀಳು ಖುಷಿ ಕನಸು ಋತು ಮನಸು ಕೆನೆಗಟ್ಟಿ ಮಧುರ ತುಷಾರದ ಗೊಂಬೆ ಕೇಕೆ ತಮಾಷೆ ಕೊನೆಮನೆಯ ಕಾಮಾಕ್ಷಿ ಕಾಮ ಉಲಿಯುವದಿಲ್ಲ ಕೆಟ್ಟ ಹುಡುಗಿಯ ದಿಟ್ಟ ತೊಗಲಿನ […]

………. – ೬

ಲೆಸನ್ -೧ ಪಾರ್ಟ್ಸ್ ಆಫ್ ದ ಬಾಡಿ ಒಮ್ಮೊಮ್ಮೆ ಎಲ್ಲರೂ ಒಂದೇ ರೀತಿ ಕಾಣುತ್ತಾರೆ, ಕಣ್ಣು, ಮೂಗು, ಮುಖ, ಕೈ, ಕಾಲು….. ಲಯಬದ್ಧವಾಗಿ ಮಿಡಿಯುವ ಹೃದಯ ಅದರಲ್ಲೊಂದಷ್ಟು ಪ್ರೀತಿ. *****

ನನ್ನ ಕವಿತೆ

ಅಪರೂಪಕ್ಕೊಮ್ಮೆ ರೆಕ್ಕೆ ಬಿಚ್ಚುವ ಬದುಕು ಹುಚ್ಚೀ ನನ್ನ ಕವಿತೆ ಅದು ಭರ್ಜರಿ ಬಿರಿಯಾನಿ ಗಮ್ಮತ್ತು ಚಿಕನ್ ತಂದೂರಿಗಳ ಗಿಜಿ ಗಿಜಿ ಘಮದಲ್ಲಿ ನೊರೆಯಾರುವ ಮೊದಲೇ ತೇಜಿ ತೇಗಿದ್ದು ಅಕ್ಷರಗಳ ಬಸಿರಿಗೆ ಕಾವಿಕ್ಕಿ ಅಶ್ಲೀಲ ಚಕ್ಷು […]

………. – ೫

ಶಬ್ದಗಳು ಯಾತಕ್ಕೆ ಹೀಗೆ ಕಪ್ಪು ತುಂತುರು ಹನಿ! ಬಿಳಿಯ ಅವಕಾಶಕ್ಕೆ ಕೊಟ್ಟ ರೂಪ. ಶಬ್ದಗಳು ಯಾತಕ್ಕೆ ಹೀಗೆ ಕೇಳುವುದಿಲ್ಲ ಕಾಣುತ್ತವೆ, ಶಬ್ದಗಳು ಕಾಣದವೂ ಕೇಳುತ್ತವೆ. *****

ದೃಷ್ಟಿ ನಿವಾರಣೆ

ಹಬ್ಬದ ವೇಳೆ ಅಂಗಡಿಯಲ್ಲಿ ಸರ್ವ ವಿಘ್ನಾಪಹಾರಿ ವಿನಾಯಕರು ಗಂಭೀರ ಭಂಗಿಯಲ್ಲಿ ಕೂತಿದ್ದನ್ನು ಕಂಡೆ. ಪೀಡಾ ನಿವಾರಣೆಗಾಗಿ ಅವರೆದುರು ಬೆದರು ಬೊಂಬೆ ಇಟ್ಟಿದ್ದರು! *****

ಮಳೆಗಾಳಿ

ಹಿಂಡಾಗುಲಿವ ಮಳೆ ತಗಡು ತತ್ತರಿಸುವ ಶಾಲೆ ಮಾಡು……. ಮಧ್ಯಾಹ್ನ ರಿಸೆಸ್ಸು ಬಿಟ್ಟಾಗ ಕೆಂಪು ವರಾಂಡದ ತುಂಬ ಜಿಟಿ ಜಿಟೀ ಪರೆ ಗಾಳಿಕೊಡೆ *****

ಸಭ್ಯ/ಪೋಲಿ

ಆಹಾ, ಅದೆಷ್ಟು ಮಾದಕ ಜುಲುಮೆಯ ಗಂಧವತಿ ಪುಷ್ಪ! ಆಸೆಯಾಗಿ ಹತ್ತಿರದಿಂದ ಮೂಸಿದರೆ ಉಸಿರ ಬಿಸಿಗೇ ಬಾಡಿ ಉದುರೀತಲ್ಲವೇ? ದಮ್ಮಿನ ವಸಂತದಲ್ಲಿ ಸೂಕ್ಷ್ಮ ಮೂಗಿಗೂ ಅದರ ಘಾಟು ಹಿತವಲ್ಲವೆನ್ನುವರು, ಬಲ್ಲವರು, ಅಲ್ಲವೆ? ಎಂದು ಅದರ ಅಲ್ಪಾಯುವಾದ […]