………. – ೬

ಲೆಸನ್ -೧ ಪಾರ್ಟ್ಸ್ ಆಫ್ ದ ಬಾಡಿ ಒಮ್ಮೊಮ್ಮೆ ಎಲ್ಲರೂ ಒಂದೇ ರೀತಿ ಕಾಣುತ್ತಾರೆ, ಕಣ್ಣು, ಮೂಗು, ಮುಖ, ಕೈ, ಕಾಲು….. ಲಯಬದ್ಧವಾಗಿ ಮಿಡಿಯುವ ಹೃದಯ ಅದರಲ್ಲೊಂದಷ್ಟು ಪ್ರೀತಿ. *****

………. – ೫

ಶಬ್ದಗಳು ಯಾತಕ್ಕೆ ಹೀಗೆ ಕಪ್ಪು ತುಂತುರು ಹನಿ! ಬಿಳಿಯ ಅವಕಾಶಕ್ಕೆ ಕೊಟ್ಟ ರೂಪ. ಶಬ್ದಗಳು ಯಾತಕ್ಕೆ ಹೀಗೆ ಕೇಳುವುದಿಲ್ಲ ಕಾಣುತ್ತವೆ, ಶಬ್ದಗಳು ಕಾಣದವೂ ಕೇಳುತ್ತವೆ. *****

………. – ೩

ನಾವು ನಮ್ಮ ನಮ್ಮ ದಿನಚರಿಯಲ್ಲಿ ಎಂದಿನಂತೆ……… ಒಬ್ಬರ ಮುಂದೊಬ್ಬರು ಸುಮ್ಮನೆ ಹಾಗೆ ಇರುತ್ತೇವೆ. ಆಗಲೂ ಹಾಗೆ ಈಗಲೂ ಹಾಗೆ ‘ಆ’ ಅನ್ನುವುದು ‘ಈ’ ಆದಮಾತ್ರಕ್ಕೆ ಎಷ್ಟೊಂದು ಬದಲಾವಣೆ ಎಲ್ಲದರಲ್ಲು!! *****

ಪಾರಿಜಾತದ ಪ್ರೀತಿ

ನಿಮ್ಮ ಕನಸನು ಬಿಟ್ಟು ಆಚೆ ಬಾರೆವು ನಾವು ಹೀಗೆ ತಡೆದರೆ ನೀವು ತಬ್ಬಿ ಹಿಡಿದು, ನಿಮ್ಮ ಪ್ರೀತಿಯ ನಮಗೆ ಒಂದಂಗುಲದ ಜಾಗ ಕನಸಿನಂತಃಪುರದ ತೋಟದೊಳಗೆ. ಇಲ್ಲಂತು ತನು-ಮನಕೆ ಏಳು ಮಲ್ಲಿಗೆ ತೂಕ ಹೂವ ಎಸಳೇ […]

ನಾವಿಲ್ಲದೂರು

ಯಾಕೆ ಬಂದಿರಿ ನೀವು ನಾವಿಲ್ಲದೂರಿಗೆ ನಮ್ಮ ನಸರಸುತ್ತಾ ಕೇರಿ ಕೇರಿ. ಕಣ್ಣಾಮುಚ್ಚಾಲೆಯನು ಆಡುವಿರಿ ಯಾತಕ್ಕೆ ಸುಮ್ಮ ಸುಮ್ಮನೆ ನಮ್ಮ ಹೆಸರ ಹಿಡಿದು. ನಾವಿಲ್ಲದೂರಲ್ಲಿ ನೀವೆ ನಿಮ್ಮನು ಕೂಗಿ ತಿರುವಿ ನೋಡುವಿರಲ್ಲ ನಾವು ಕರೆದಂತೆ! ನಿಮ್ಮ […]

ಪಾಠ ಒಂದು.. ಎರಡು.. ಮೂರು..

“ಅಗೋ, ಆಕಾಶ, ಅಲ್ಲಿ ಮೇಲೆ! ಅದರಡಿಗೆ ಭೂಮಿ, ನೀನು ಭೂಮಿ ನಾನು ಆಕಾಶ” ಆ….. ಹಾ…..! ಎಂತ ಮಾತು!! ದೇವರೇ, ಹೊಟ್ಟೆ ತುಂಬ ಊಟ ಕೊಡು ನಿದ್ದೆ ತುಂಬ ಕನಸನಿಡು. ಕೊಡುವವರು ಯಾರು, ಪಡೆವವರು […]

ನದಿಯ ನೀರಿನ ತೇವ – ಮುನ್ನುಡಿ

ಕನ್ನಡ ಓದುಗರಿಗೆ ಈಗಾಗಲೆ ಸಾಕಷ್ಟು ಪರಿಚಿತರಾಗಿರುವ ಕವಿ ಮಮತಾ ಜಿ. ಸಾಗರ ಅವರ ಮೊದಲ ಕವನ ಸಂಕಲನ ‘ಕಾಡ ನವಿಲಿನ ಹೆಜ್ಜೆ’ ೧೯೯೨ರಲ್ಲಿ ಪ್ರಕಟವಾಯಿತು. ಇದೀಗ ಆರು ವರ್ಷಗಳ ನಂತರ ಅವರ ಎರಡನೆ ಸಂಕಲನ […]

ಚುಕ್ಕಿ ಎಂಬ ಚಂದ್ರನಿಗೊಂದು ಕಿವಿಮಾತು

ನನ್ನ ಚಂದ್ರನ ಕಣ್ಣಲ್ಲಿ ಹೊಳೆವ ನಕ್ಷತ್ರಗಳು ತುಟಿಯ ತುಂಬಾ ತೊದಲು, ಆಳಬೇಡ ಕಂದ, ಅತ್ತರೆ ಸುರಿವ ಮುತ್ತಿನ ಜೊತೆ ಜಾರೀತು ತಾರೆಗಳು ಕೇಳು ರಾಜಕುಮಾರ, ಏಳು ಸಮುದ್ರಗಳನೀಸಿ ಏಳು ಪರ್ವತಗಳ ದಾಟಿ ತಂದುಕೊಡಲಾರೆ ಮಲ್ಲಿಗೆ […]