ಬಾಳಕೊಳಗುಳದಲ್ಲಿ ಚೀರಾಡಿ ಬೋರಾಡಿ ಬಡಬಡಿಸಿ ಅಟ್ಟುಂಡುದೇನು ಜೀವ? ದಿನಬೆಳಗು ಅವರಿವರ ಬಾಯಮಾತಿನ ಕಂತೆ ಮೋಡಿಯಲಿ ಕಳೆದರೇನೆದೆಯ ನೋವ? ತಲೆಗೊಂದು ನುಡಿಯುವರು, ಪಂಥವನೆ ಹೂಡುವರು ತಾವೆ ಅತಿರಥರೆಂತದು ಸಾರುತಿಹರು; ಅರೆಗೊಡದ ಬುಡುಬುಡಿಕೆ ಅಲ್ಪತೆಯ ತೋರ್ಪಡಿಕೆ ತಥ್ಯವಿಲ್ಲದ […]
ವರ್ಗ: ಪದ್ಯ
ದೃಷ್ಟಿ ನಿವಾರಣೆ
ಹಬ್ಬದ ವೇಳೆ ಅಂಗಡಿಯಲ್ಲಿ ಸರ್ವ ವಿಘ್ನಾಪಹಾರಿ ವಿನಾಯಕರು ಗಂಭೀರ ಭಂಗಿಯಲ್ಲಿ ಕೂತಿದ್ದನ್ನು ಕಂಡೆ. ಪೀಡಾ ನಿವಾರಣೆಗಾಗಿ ಅವರೆದುರು ಬೆದರು ಬೊಂಬೆ ಇಟ್ಟಿದ್ದರು! *****
ಏಕಿನಿತು ಮರುಗುತಿಹೆ?
ಏಕಿನಿತು ಮರುಗುತಿಹೆ, ಕೊರಗಿ ಸಣ್ಣಾಗುತಿಹೆ ಬಯಕೆ-ನಂದನ ಮುಳ್ಳು ಬೇಲಿಯಾಯ್ತೆ? ಎದೆಯ ತಿಳಿಗೊಳದಮಲ ಕಮಲ ದಲ ಹಾಸಿನಲಿ ಅಣಕು ನುಡಿಗಳ ವಿಕಟ ನಾಟ್ಯವಾಯ್ತೆ? ಜೀವನದಗಾಧಮಯ ಹೋರಾಟದಲ್ಲೊಂದು ಬಾಣ ನಟ್ಟರೆ ಅದಕೆ ನರಳಬಹುದೆ? ಇದಕಿಂತಲೂ ಘೋರ ಎಡರೆದ್ದು […]
ನಂಜುಂಡನಾಗಿ ಬಾಳು
೧ ನಿಮಿನಿಮಿಷಕೂ ಹಿಂಡುಹಿಂಡಾಗಿ ಬರುತಲಿವೆ ನೈರಾಶ್ಯದಭ್ರಂಗಳು; ಬಾಳ ಬಾಂದಳದಲ್ಲಿ ತೊತ್ತಳಂದುಳಿಯುತಿವೆ ಬೆಳಕೆಲ್ಲಿ? ಬರಿಯ ಇರುಳು! ಒಂದಾದರಿನ್ನೊಂದು ಮುಂಬರಿದು ಕಂಗೆಡಿಸಿ ಕಾಳುಗೆಟ್ಟೋಡಿಸುವವು; ಬೆಂದೊಡಲ ಕಡಲಾಳ ಹಿರಿಯಾಸೆ ವೀಚಿಗಳು ದಂಡೆಗಪ್ಪಳಿಸುತಿಹವು. ದನಿಯು ಮರುದನಿಗೊಂಡು ಸೋಲುಗಳು ಸಾಲ್ಗೊಂಡು ತಾಂಡವಂಗೈಯುತಿಹವು, […]
ಬಂಧದಿಂ ಬಿಡುಗಡೆಗೆ
(ಅಗಸ್ಟ ಹದಿನೈದು) ನಾಡಿನೆದೆಯಲ್ಲಿಂದು ಹರುಷ ಉಕ್ಕೇರುತಿದ ಫಲಿಸಲಿದೆ ಬಹು ದಿನದ ಹಿರಿಯ ಬಯಕೆ; ನಿಶೆಯಿಂದ ಉಷೆಯಡೆಗೆ, ಬಂಧದಿಂ ಬಿಡುಗಡೆಗೆ ಜನಕೋಟಿ ಸ್ವಾತಂತ್ರ್ಯ ತೀರದೆಡೆಗೆ ಸಾಗಿಹರು; ನೀಗಿಹರು ಹಾಳು ಕೂಳೆ ನನಹುಗಳ- ಬಳಿಸಾರಿ ಬಂದಿಹುದು ಸೌಖ್ಯ […]