ಆತ್ಮ ಕೊಳೆಯುತ್ತಿದೆ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪ್ರತಿ ಗಳಿಗೆಯೂ ಆತ್ಮ ಕೊಳೆಯುತ್ತಿದೆ ನಿನ್ನೆದುರು ಬೆಳೆಯುತ್ತ ಬಂದಿದೆ ಬರೀ ಒಂದು ಆತ್ಮಕ್ಕಾಗಿ ನಿನ್ನ ಬಳಿ ಮೊರೆಯಿಡಬೇಕೆ? ನೀನು ಕಾಲಿಟ್ಟ ಕಡೆ ನೆಲದಿಂದ ತಲೆಯೊಂದು ಚಿಮ್ಮುತ್ತದೆ? […]

ಮಾತು

ಮುಂಜಾವದಲಿ ಹಸಿರು ಹುಲ್ಲ ಮಕಮಲ್ಲಿನಲಿ ಪಾರಿಜಾತವು ಹೂವ ಸುರಿಸಿದಂತೆ, ಮುಟ್ಟಿದರೆ ಮಾಸುತಿಹ ಮಂಜುಹನಿ ಮುತ್ತಿನಲಿ ಸೃಷ್ಟಿ ಸಂಪೂರ್‍ಣತೆಯ ಬಿಂಬಿಪಂತೆ, ಮಲ್ಲೆದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ ಹೆಣ್ಣ ಕಣ್ಣಂಚಿನಲಿ ತುಳುಕುವಂತೆ, ಸುಳಿಗಾಳಿಯೊಂದಿನಿತು ಸೂಸಿ ಬಂದರು ಸಾಕು […]

ನಡತೆ

ಹಿರಿಯರ ಹಿರಿತನ ಅರಿವಾಗುವುದು ಹಿರಿಯರಾಗಿ ನಡೆದುಕೊಳ್ಳುವುದರಲ್ಲಿ ಮಾತ್ರವಲ್ಲ ಹೆರರನ್ನೂ ಹಿರಿಯರಾಗಿ ನಡೆಸಿಕೊಳ್ಳುವುದರಲ್ಲಿ. *****

ಗೆಳೆತನ

ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು; ಜೀವನದನಂತ ದುರ್‍ಭರ ಬವಣೆ ನೋವುಗಳ ಕಾವುಗಳ ಮೌನದಲಿ ನುಂಗಿರುವೆನು. ಗೆಳೆತನವೆ ಇಹಲೋಕಕಿರುವ ಅಮೃತ ಅದನುಳಿದರೇನಿಹುದು – ಜೀವನ್ಮೃತ! ನಲ್ಲನಲ್ಲೆಯರೊಲವು, ಬಂಧುಬಳಗದ ಬಲವು ತನ್ನಿಚ್ಛೆ ಪೂರೈಸುವವರ […]

ತಿಳಿಯಲಿಲ್ಲ

ನಿನಗೆ ಇದು ತಿಳಿಯುವುದಿಲ್ಲ ಸುಮ್ಮನಿರು ನೀನು ಎಂದನ್ನುತ್ತಲೇ ಅಪ್ಪ ಸತ್ತ ಅಜ್ಜ ಸತ್ತ…… ನೀನಿನ್ನೂ ಮಗು ಅನ್ನುತ್ತಾ ಎಲ್ಲರೂ ಸತ್ತರು ನಾನೊಬ್ಬ ಉಳಿದೆ ನನಗದು ತಿಳಿಯಲಿಲ್ಲ. ಬೇಡವೇ ಬೇಡ ಎಂದು ನಾನೂ ಸಾಯಲಿಲ್ಲ… ತಪ್ಪಿ […]

ಗೋಳಗುಮ್ಮಟ

ಬ್ರಹ್ಮಾಂಡಮಂ ನಿರ್‍ಮಿಸಿದ ಕರ್‍ತಾರನದಟು ಬಿಡಿಸಲಾಗದ ಒಗಟು; ಆ ಗೂಢತಮ ತಮೋ ವಿಸ್ತೀರ್‍ಣದಲಿ ಬೆಳಕಿನರಿಲುಗಳ ಸೋದಿಸಿಹ ಧುರಧರನು ವಿಜ್ಞಾನಿ; ಪೂರ್‍ಣತೆಯನರಿಯನೈ ಸೃಷ್ಟಿಕರ್‍ತಾರನಾಡುಂಬೊಲದ ಕಮ್ಮಟಿಕೆ ಧೀಂಕಿಡುವ ಮನುಜಕೃತಿ ಗೋಳಗುಮ್ಮಟವೈಸೆ? ಮುಗಿಲನಿಲ್ಲಿಯೆ ನೆಲಕೆ ಎಳೆದು ತಂದಿಹ ಶಿಲ್ಪಿ ಭವ್ಯತೆಗೆ […]

ಅಲೆಮಾರಿ ಮತ್ತೆ ಬಂದ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಈ ಅಲೆಮಾರಿ ಗುಲಾಮ ಮತ್ತೆ ವಾಪಸಾಗಿದ್ದಾನೆನಿನ್ನೆದುರು ಮೇಣದಬತ್ತಿಯಂತೆ ಕರಕಾಗುತ್ತ ಕೊರಗಿದ್ದಾನೆ ಓ ಆತ್ಮವೆ, ಮಂದಸ್ಮಿತವಾಗು, ಪನ್ನೀರಿನಂತಾಗುಮುಚ್ಚದಿರು ಬಾಗಿಲು, ಆತ್ಮವೆ, ಆತನೀಗ ಅನಾಥ ನೀನು ಬಾಗಿಲು ಬಡಿದು […]

ಮಾತಂಗ ಬೆಟ್ಟದಿಂದ

೧ ದುಂಡಾದ ಬಂಡೆಗಳ ಮೇಲುರುಳಿ, ನುಣ್ಣನೆಯ ಹಾಸುಗಲ್ಲಲಿ ಜಾರಿ, ಅಲ್ಲಲ್ಲಿ ಮಡುಗಟ್ಟಿ ಚಕ್ರ ತೀರ್ಥವ ರಚಿಸಿ, ಬೆಟ್ಟದಡಿಗಳ ಮುಟ್ಟಿ ಪಂಪಾನಗರಿಗಿಂಬುಗೊಟ್ಟ, ತುಂಗಭದ್ರೆಯ ಜಲತರಂಗದಿ ಮಿಂದು, ಶ್ರೀ ವಿರೂಪಾಕ್ಷಂಗೆ ಕೈಮುಗಿದು, ಭುವನೇಶ್ವರಿಗೆ ನಮಿಸಿ, ಸಂಪೂಜಿತ ವಿಜಯ […]

ತೀರ್‍ಪು

“Judge not that ye be not judged” -Jesus Christ ಒಂದು ಸಂಜೆ ಪಿಂಜರಿತ ಮೇಘ ಪಡುವಣದ ಬಾನಿನಲ್ಲಿ ಶ್ರೀ ಸ್ವಯಂಭು ಸ್ವಚ್ಛಂದ ಮನದಿ ಕುಳಿತಂತೆ ಲೀಲೆಯಲ್ಲಿ ಶೋಭಿಸಿರಲು, ಕಣ್ಣಿಟ್ಟಿ ಹರಿವವರ ಹಬ್ಬಿದಂಥ […]