ಕೋಗಿಲೆ

೧ ಈಗ ತಾನೆ ಬಂದಿತೇನೆ ಮಧುರ ಕಂಠ ಕೋಗಿಲೇ? ಜಗದ ಬಿನದ ನಿನ್ನ ಮುದದ ಗಾನವಾಯ್ತೆ ಒಮ್ಮೆಲೇ! ೨ ಕೆಂಪು ತಳಿರು ಕಂಪಿನಲರು ಸೂಸುತಿಹುದು ಮಾಮರಾ ಅಲ್ಲಿ ಕುಳಿತು ಎಲ್ಲ ಮರೆತು ಉಲಿಯುತಿರುವೆ ಸುಮಧುರಾ […]

ನಾವಿಲ್ಲದೂರು

ಯಾಕೆ ಬಂದಿರಿ ನೀವು ನಾವಿಲ್ಲದೂರಿಗೆ ನಮ್ಮ ನಸರಸುತ್ತಾ ಕೇರಿ ಕೇರಿ. ಕಣ್ಣಾಮುಚ್ಚಾಲೆಯನು ಆಡುವಿರಿ ಯಾತಕ್ಕೆ ಸುಮ್ಮ ಸುಮ್ಮನೆ ನಮ್ಮ ಹೆಸರ ಹಿಡಿದು. ನಾವಿಲ್ಲದೂರಲ್ಲಿ ನೀವೆ ನಿಮ್ಮನು ಕೂಗಿ ತಿರುವಿ ನೋಡುವಿರಲ್ಲ ನಾವು ಕರೆದಂತೆ! ನಿಮ್ಮ […]

ಸ್ಫೂರ್ತಿ

ಅರಿವಿನಾಳದ ಭಾವ ಕಲ್ಪನೆಯುದಾತ್ತತೆಗೆ ಜೀವದುಸಿರಾಡಿಸುವ ಸ್ಫೂರ್ತಿಕನ್ನೆ, ನಿನ್ನ ದರ್ಶನಫಲಕೆ, ಸ್ಪರ್ಶನದ ಚೇತನೆಗೆ ದೇಹ ರೋಮಾಂಚಿತವು ಎದೆಯ ರನ್ನೆ. ಬರಡು ಬಾಳಿನ ಕೊರಡು ಚಿಗುರೊಡೆದು ತೊನೆಯುವುದು ಕುಡಿದು ಜೊನ್ನದ ಸೆಲೆಯ ಅಮೃತವನ್ನೆ; ಬೇರಿಂದ ಕೊನೆವರೆಗು ರಸವೀಂಟಿ […]

ನೆನೆವುದೊಂದಗ್ಗಳಿಕೆ

ಓವೋ, ಹುತಾತ್ಮರಿರ! ಬಂಧಮುಕ್ತಿಯ ದೀಕ್ಷೆ ಬೀರಕಡಗವ ತೊಟ್ಟು, ನಿಮ್ಮದೆಯ ಬಿತ್ತರದಿ ಟೆಂಟಣಿಪ ಎಲುವುಗಳ ತೇದು ಕನ್ನೆತ್ತರದಿ ಭಾರತಿಯ ಭಾಗ್ಯನಿಧಿಗಾತ್ಮಾರ್ಪಣದ ರಕ್ಷೆ- ಗೈದವರೆ, ನುಡಿಯಲೇಂ? ಹೋಲಿಸಲ್ಕೆಣೆಯಿಲ್ಲ. ಬಲಿದಾನದಿತಿಹಾಸ ರಕ್ತಸಂಪುಟಮಾಗಿ ನಿಮ್ಮ ಪೆಸರೊಂದೊಂದು ಪೆರ್ಮೆತಾರಗೆಯಾಗಿ ಹೊಳೆದಿಹಿರಿ; ಕಲ್ಪಂಗಳುರುಳಿದರು […]

ಮಹಾ ನಾಯಕ

-ಬರ್ಟೋಲ್ಟ್ ಬ್ರೆಕ್ಟ್ ಅನಿವಾರ್ಯ ಎಂದು ನಾವು ಭಾವಿಸುವ ಈ ಮಹಾಮಹಿಮ ಕುಪಿತನಾದರೆ ಎರಡು ಸಾಮ್ರಾಜ್ಯಗಳು ತಲ್ಲಣಿಸುತ್ತವೆ ಈ ಅನಿವಾರ್ಯ ಮನುಷ್ಯ ಅಕಸ್ಮಾತ್ ಸತ್ತೇಬಿಟ್ಟ ಎನ್ನಿ ಕೂಸಿಗೆ ಮೊಲೆಯಲ್ಲೆ ಹಾಲಿಲ್ಲದ ತಾಯಿ ದಿಕ್ಕೆಟ್ಟಂತೆ ಪ್ರಪಂಚವೇ ದಿಕ್ಕೆಡುತ್ತದೆ […]

ಪಾಠ ಒಂದು.. ಎರಡು.. ಮೂರು..

“ಅಗೋ, ಆಕಾಶ, ಅಲ್ಲಿ ಮೇಲೆ! ಅದರಡಿಗೆ ಭೂಮಿ, ನೀನು ಭೂಮಿ ನಾನು ಆಕಾಶ” ಆ….. ಹಾ…..! ಎಂತ ಮಾತು!! ದೇವರೇ, ಹೊಟ್ಟೆ ತುಂಬ ಊಟ ಕೊಡು ನಿದ್ದೆ ತುಂಬ ಕನಸನಿಡು. ಕೊಡುವವರು ಯಾರು, ಪಡೆವವರು […]