ಕವಿ-ಲೋಕ

ಲೋಕವೇ, ನಿನಗಂಟಿಕೊಂಡಿರುವನಕ ನನ್ನ ಚಟುವಟಿಕೆ. ಬೇರ್ಪಟ್ಟೆನೆ? ನಿರರ್ಥಕ: ಕೆಟ್ಟು ಹೋದ ಬಲ್ಬಿನ ಥರ. ನಾನಿರಲಿ ಇರದಿರಲಿ ನಿನಗಾವ ಬಾಧಕ? ನಡೆಯುತ್ತಲೇ ಇರುವೆ ನಿನ್ನಷ್ಟಕ್ಕೆ ಸುಮ್ಮನೆ. ಆದರಿಷ್ಟೆ: ನಾನಿದ್ದರೆ ನಿನ್ನೊಂದಿಗೆ, ಮಂದಿಗೆ ನಿನ್ನ ಚಲನವಲನದ ಸೂಚಕ: […]

ವಾಕ್ ಹೋಗಿ

ವಾಕ್ ಹೋಗಿ ಬದುಕು ಕಲೆಯಂತೆ ಸಮಾನಾಂತರ ಸಾಗಿದ ದೀಪದ ತಂತಿಗಳಲ್ಲೊಂದರಿಂದ ಯಾವುದೋ ಅಪ್ರಖ್ಯಾತ ಪಕ್ಷಿಯ ಅರ್ಧ ಮೀಟರಿನ ಶಬ್ದ ಕಿವಿ ಹೊಕ್ಕು ಕುತೂಹಲಕ್ಕೆ ಕತ್ತೆತ್ತಿ ನೋಡಿದರೆ ಬರೀ ಅನಾಥ ಸಂಜೆ. *****

ಭಾನುವಾರ

ಈ ದಿನ ಭಾನುವಾರ- ಹರಿವ ಹೊಳೆ ತಟ್ಟನೆ ನಿಂತು ಮಡುವಾಗಿ ನನ್ನ ದಡದಲ್ಲಿರುವ ಗಿಡಮರ ಬಳ್ಳಿ ಪ್ರತಿಫಲಿಸಿ, ಏನೋ ಸಮಾಧಾನ. ಅಂಥ ಅವಸರವಿಲ್ಲ, ಬೆಳಗಿನ ನಿದ್ದೆಗಿನ್ನೊಂದಿಷ್ಟು ವಿಸ್ತರಣೆ ಕೊಡಬಹುದು. ಬೆಳೆದಿರುವ ಗಡ್ಡ ಇನ್ನೂ ಒಂದೆರಡು […]

ಕಾಡಿನ ಕತ್ತಲಲ್ಲಿ

ದೇವರಾಯನ ದುರ್ಗದ ಕಾಡಿನ ಕತ್ತಲಲ್ಲಿ ಸಂಜೆಯ ಕೆಂಪು ಕರಗುವ ಹೊತ್ತು, ಮರದ ಬೊಡ್ಡೆಗೆ ಆತು ಕೂತಿದ್ದ ಪುಟ್ಟ ಹುಡುಗ. ಸುತ್ತ ಗಿಜಿಗಿಜಿ ಕಾಡು; ಮರಮರದ ನಡುವೆ ಜೇರುಂಡೆಗಳ ಮೊರೆತ; ಕಪ್ಪೆಗಳ ವಟ ವಟ ಸಂಜೆಯಾಕಾಶಕ್ಕೆ […]

ನನ್ನ ಹಣತೆ

ಹಣತೆ ಹಚ್ಚುತ್ತೇನೆ ನಾನೂ. ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ; ಲೆಕ್ಕವೇ ಇರದ ದೀಪಾವಳಿಯ ಹಡಗುಗಳೆ ಇದರಲ್ಲಿ ಮುಳುಗಿ ಕರಗಿರುವಾಗ ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ. ಹಣತೆ ಹಚ್ಚುತ್ತೇನೆ ನಾನೂ; ಈ […]

ಸಂಭ್ರಮಕ್ಕೆ ನೂರಾರು ಕಾರಣಗಳು..

ಕಳೆದ ಎರಡು ತಿಂಗಳಲ್ಲಿ ನಡೆದ ಚಟುವಟಿಕೆಗಳು, ಕನ್ನಡಸಾಹಿತ್ಯ.ಕಾಂ ಆರಂಭಿಸಿದ ದಿನಗಳನ್ನು ಹೊರತು ಪಡಿಸಿದರೆ ಮತ್ತೆ ಇನ್ಯಾವುದೇ ಸಂದರ್ಭದಲ್ಲೂ ನಡೆದಿರಲಿಲ್ಲವೆಂದೆನ್ನಬಹುದು. ಎಷ್ಟೆಲ್ಲ ಸಂತೋಷದ ಸಂಗತಿಗಳು-ಜಿ ಎಸ್ ಶಿವರುದ್ರಪ್ಪನವರಿಗೆ ರಾಷ್ಟ್ರಕವಿ ಎಂದೆನ್ನುವ ಮಾನ್ಯತೆಶಿವಮೊಗ್ಗದಲ್ಲಿ, ೭೩ ನೆಯ ಕನ್ನಡ […]

ಅವಳಂಥ ಸುಂದರಿ ಪಕ್ಕ ಇದ್ದಾಗ ಅಂಥ ಸೋನೇ ಮಳೆಯಲ್ಲೂ ಬೆವೆತಿದ್ದೆ…

ಊರಿನ ಮುಖ್ಯ ರಸ್ತೆ. ತಾಯಿ ಚಾಮುಂಡೇಶ್ವರಿಯ ಸಾಲಂಕೃತ ವಿಗ್ರಹವನ್ನು ಹೊತ್ತು ಬರುತ್ತಿದೆ ಸಿಂಗರಿಸಿದ ಆನೆ. ಹದಿನಾರು ಬ್ರಾಹ್ಮಣರ ಗಟ್ಟಿ ಕಂಠದ ಲಯಬದ್ಧವಾದ.. ಮಂತ್ರಘೋಷಗಳ ಮೊರೆತ ಕಿವಿ ತುಂಬುತ್ತಿವೆ. ಮನೆಯ ತಾರಸಿಗಳ ಮೇಲೆ. ಅಂಗಡಿ ಸಾಲಿನ […]

ನೀಡು ಪಾಥೇಯವನು

ಚಿಮ್ಮಿ ನೆಗೆಯುವ ಸಮುದ್ರದ ತೆರೆಗಳನ್ನು ಲೆಕ್ಕ ಮಾಡಲು ಪ್ರಯತ್ನಿಸಿದಳು. ಲೆಕ್ಕ ತಪ್ಪಿಹೋಯಿತು. ತೆರೆಗಳು ಮಾತ್ರ ಹಾರುತ್ತಲೇ ಇವೆ. ದುಂಡಗಿನ ಸೂರ್ಯ ಕೆಂಪು ಪಿಂಡದ ಹಾಗೆ ಕಾಣಿಸಿದ. ಅದೇ ಸೂರ್ಯ ಮಧ್ಯಾಹ್ನ ನೆತ್ತಿಯ ಮೇಲೆ ಸುಡುತ್ತಿದ್ದಾಗ […]

ಗರ್ಭ

ಬಹಳ ಕಡಿಮೆ ಮಾತುಗಳಲ್ಲಿ ನಾನೀ ಕಥೆಯನ್ನು ನಿಮಗೆ ಹೇಳಬೇಕಾಗಿದೆ. ಕಾರಣ ಬದುಕಿನ ಸೂಕ್ಷ್ಮ ಭಾವನೆಗೆ ಈ ಕಥೆಯ ಘಟನೆ ಸಂಬಂಧಿಸಿದೆ. ಅಂತಃಕರಣದ ಒಳಪದರಿಗೆ ಸಂಬಂಧಿಸಿದೆ. ನೋವಿನ ಆಳಕ್ಕೆ ಸಂಬಂಧಿಸಿದೆ. ಇದರ ಆಂತರ್ಯ ಎಷ್ಟು ಮಾನವೀಯವಾಗಿದೆಯೋ, […]