ಮಳೆ

ನಾನು, ಅವನು, ಮಳೆಯಲ್ಲಿ ನಿಂತಿದ್ದೇವೆ ಮೈಗೆ ಮೈ ಬೆಸೆದ ಅಂತರದಲ್ಲಿ ನೆನೆಯುತ್ತಾ ಅವನ ದೇಶದ ಕಾಡುಗಳನ್ನ. ಆಳೆತ್ತರ ಮರಗಳು ಅಲ್ಲಿ ಟೊಂಗೆ ಟೊಂಗೆಗಳಲ್ಲಿ ಗೂಡು ಕಟ್ಟಿದೆ ಪ್ರೀತಿ. ಮೆಲ್ಲಗೆ ನುಡಿಯುತ್ತಾನೆ, ‘ಅಲ್ಲೂ ಹೀಗೇ ಮಳೆ’. […]

ಕಾಯುವುದು

ಯಾಕೆ ಸುಮ್ಮನೆ ನಾವು ಹಾದಿ ಕಾಯುತ್ತೇವೋ ಬಂದರೂ ಬಾರದ ಹಾಗೇ ಇರುವಂಥವರ! ಒಳಗಿನ ಬೆಂಕಿ ನಾಲಿಗೆಯ ಮೇಲಾಡಿ ಕಣ್ಣ ಕೊನೆಯಿಂದ ಕಿಡಿ ಕಾರಿ ಚಟ ಪಟ ಸಿಡಿದು ಹೊರಟು ಹೋದವರ ಕಾಯುತ್ತೇವೆ ಯಾಕೆ? – […]

ಧರ್ಮಾಧರ್ಮದ ಮಾತು

ಹರ ಹರ ಮಹಾದೇವ! ಒಡಲ ಹರಿದು ಛಿದ್ರಗೊಳಿಸಿದ ವಿಷ ಕಂಠ. ಕಂಠದ ವಿಷ ನರ ನಾಡಿಗಳಲ್ಲಿ- ಕಹಿ ಮನಸ್ಸಿನ ಮೈಯೆಲ್ಲ ನೀಲಿ; ಆಕಾಶದುದ್ದಗಲಕ್ಕೂ ಹರಡಿ ನೀಲಿ ಸಮುದ್ರದಾಳದ ಹವಳ ಮುತ್ತುಗಳೆಲ್ಲ ನೀಲಿ ನೀಲಿ. ಸಾವ […]

ಕ್ಲಾಸ್ಟ್ರೋಫೋಬಿಕ್

ಚೌಕಟ್ಟು ಅಡಿಗೆ ಮನೆ, ಹಾಲು, ಮಲಗುವ ಕೋಣೆ ನೀಟು ಚೌಕಟ್ಟು ಮಂಚ…ಹಾಸಿಗೆ…ಹೊದಿಕೆ. ಚಚ್ಚೌಕ ಓದುವ ಪುಸ್ತಕ ಮೇಜು ಕುರ್ಚಿ ….ಆಲೋಚನೆಯಧಾಟಿ! ಎಲ್ಲಕ್ಕೂ ಒಂದೊಂದು ಚೌಕಟ್ಟು. ಬಾಗಿಲು, ಸೂರು, ಗೋಡೆ…. ನೆಲಕ್ಕೆ ಚಾಚಿಕೊಂಡ ಬಿಳಿ ಟೈಲುಗಳು […]

ಬರಬಾರದು ಹೀಗೆ ನೀವು

ಬರಬಾರದು ಹೀಗೆ ನೀವು ನಮ್ಮೊಳಗೆ, ನವಿಲ ಗರಿಯೊಳಗೆ ಬಂದ ನೀಲಿ ಕಣ್ಣಂತೆ. ಮಾತನಾಡಲಿಲ್ಲ ನಾವು ಎಂದೂ ಹತ್ತಿರ ಕೂತು ಹೊತ್ತು ಕಳೆದಿಲ್ಲ ಆದರೂ ಕೇಳುತ್ತದೆ ಎದೆಬಡಿತ ಮಳೆಗೆ ಮುಂಚೆ ಸಿಡಿಲು ಹೊಡೆದಂತೆ. ಮೋಹಕ್ಕೆ ಸಾವಿರ […]

ಅಂಥವರಲ್ಲ ಇಂಥವರು

ಅವರು ಹೀಗಿರುವುದು ನಮ್ಮ ಅದೃಷ್ಟ, ಹೀಗಿರದೇ ಹಾಗೆ – ’ಎಲ್ಲರ ಹಾಗೆ’ ಇದಿದ್ದರೆ, ಆಗ ತಿಳಿಯುತ್ತಿತ್ತು !! ಬೇಕಾದ್ದು ಮಾಡಬಹುದು ಎಂದೂ ಏನೂ ಅಂದಿಲ್ಲ. ಅದನ್ನೆಲ್ಲ ತಿಳಿಯವ ಆಸಕ್ತಿಯೂ ಅವರಿಗಿಲ್ಲ, ಪುರಸೊತ್ತ೦ತು ಮೊದಲೇ ಇಲ್ಲ. […]

ಅಹಮದಿಗೆ

ತಿಳಿ ಹಳದಿ ಆಕಾಶದ ಮೈಯೆಲ್ಲ ಗಾಯ. ಅಲ್ಲಲ್ಲಿ ಹೆಪ್ಪುಗಟ್ಟಿದ ನೀಲಿ ನಿಟ್ಟುಸಿರು ಬಿಟ್ಟಹಾಗೆ ಮುಸುಮುಸು ಅಳುವ ಗಾಳಿ. ಬಾಗಿಲಿಂದಾಚೆ ಅವನು ಹೋಗುತ್ತಾನೆ. ಮತ್ತದೇರೀತಿ; ಕತ್ತಲಾಗುತ್ತದೆ. ಎಂದಿನಂತೆ ಅಂದೂ, ಕೈತೋಟದ ಹೂಗಳರಳಿ, ಏನೋ ಹೊಸದು ಆಗೇಬಿಡುವುದೋ […]

ತೇರು – ೪

ಸತ್ತೆವ್ವ ಚಹಾ ತಂದ ಕೊಟ್ಟು -‘ಪಾಡದೀ ಯಜ್ಜಾಣಿ…’ ಅಂತ ಕೇಳಿದ್ದಕ್ಕೆ ಸ್ವಾಂವಜ್ಜ ‘ಹೂಂ ಪಾಡದಣಿನ ಯವ್ವಾ…ನೀ ಪಾಡದೀ…’ ಅಂತಂದು ‘ಹೂಂ… ಮತ್ತಣಿ ನಿಂದೇನ ಸುದ್ದಿ…ನಿನ್ನ ಈ ಅಜ್ಜಗ ಮರಿಮಗನ ಮಕಾ ಯಾವಾಗ ತೋರಸಾಕಿ?’ ಅಂತ […]

ತೇರು – ೩

‘ಯಾಕೋ ದ್ಯಾವಪ್ಪಾಣಿ…?’ ದ್ಯಾವಪ್ಪನ ಇನೊಂದು ನಿಟ್ಟುಸಿರೇ ಅದಕ್ಕ ಉತ್ತರವಾಯಿತು… ‘ಬಾ…ಇಲ್ಲಿ ಕೂಡೂಣೂ…’ ಅಂತ ಕರಕೊಂಡು ಹೋಗಿ ವಿಧಾನಸೌಧದ ಮುಂದಿನ ಮೆಟ್ಟಿಲುಗಳ ಮ್ಯಾಲೆ ಕೂಡಿಸಿಕೊಂಡು ಕೂತೆ. ‘ಆ ಬಿಲ್ಡಿಂಗು ಯಾವದರೀ…?’ ಅಂತ ಎದುರಿನ ಕೆಂಪು ಬಿಲ್ಡಿಂಗು […]

ತೇರು – ೨

ಆಹಾ… ಸ್ವಾಮೀಯ ಸೇವಾಕ್ಕ ಮಗನನ್ನ ಕೊಟ್ಟ ಅಪ್ಪ ಅಂಬುವ ಆ ದ್ಯಾವಪ್ಪನಿಗೆ ದೇಸಾಯರು ಏನು ಕೊಟ್ಟಾರೊ ಸ್ವಾಮೀಯ ಸೇವಾಕ್ಕ ಮಗನನ್ನ ನೀಡಿದ್ದಕ್ಕ ಹೇಳಿಧಂಗ ಕೊಟ್ಟಾರೆ – ಆಹಾಣಿ… ಎಂಟೆಕರೆ ಹೊಲವಾ ಕೊಟ್ಟಾರೇ ಧರಮನಟ್ಟೀಯ ತೆಂಕಣದ […]