ಬಾನ ಬೀದಿಗೆ ಜೋಲಿ ಹೊಡೆದು ಉರುಳಿವೆ ಮೋಡಪಡುವಣದ ಪಡಖಾನೆಯಿಂದ ತೂರಿ;ಬೇಕು ಬೇಕಾದತ್ತ ಹೊರಳಿ ಅಸ್ತವ್ಯಸ್ತಸುಸ್ತಾಗಿ ಬಿದ್ದಿಹವು ನೆರಳು ಕಾರಿ! ಹಗಲು ಮೂರ್‍ಛೆಗೆ ಸಂದ ಗಾಳಿ ಇದ್ದೆಡೆಯಿಂದಮೈ ಮುರಿದು ಆಗೀಗ ಆಕಳಿಸಿದೆ-ಆಗ ಬೆಚ್ಚನೆ ಧೂಳಿ ಹುಚ್ಚೆದ್ದು […]
ಲೇಖಕ: ಚನ್ನವೀರ ಕಣವಿ
ಶ್ರೀ ರಾಮಾಯಣ ದರ್ಶನವನೋದಿ
ಮಲೆನಾಡ ನೀರ್ಝರಿಣಿ ತಡಿಯ ತಳಿರ್ದೊಂಗಲಲಿ ನಲಿವ ಮಂಗಲಪಕ್ಷಿ ನಿಚ್ಚ ಹಸುರಿನ ಒಸಗೆಹಾಡೆ ಈ ನೆಲದ ಮಣ್ಣಿಂದೊಗೆದ ಹಾಲ್ದೆನೆಗೆ, ಸೂರ್ಯಚಂದಿರ ತಾರೆ ನೋಡಿ ಮುಳುಗುವ ನೀಲಿತೇಲಿಸಿತು ನಿನ್ನೆಡೆಗೆ ತನ್ನಮೃತ ಲೀಲೆಯಂ! ಭವ್ಯತೆಯ ಕನಸು ಗರಿಗೆದರಿ ಮರದುದಿಯಿಂದಬಾನಮುಡಿಗೇರಿ […]
ಮಧುರಚೆನ್ನರ ನೆನಪಿಗೆ
ಜಾನಪದ ಜೀವನದ ಸಂಗೀತಕೆದೆಯೋತು ಹೂವು ಹೂವಿನ ಜೇನು ತೊಳೆಯ ಬಿಡಿಸಿ ಹೊಸ ಬೆಳೆಯ ಕಸುವಾಗಿ ಸ್ನೇಹರಸದೊಳು ಮಾಗಿ ಸುಗ್ಗಿ ಮಾಡಿದಿರಂದು ನಾಡನಲಿಸಿ! ಅಂದಿನಿಂದೆನ್ನೆದೆಗೆ ಮೂಡಿಹುದು ಮಳೆಬಿಲ್ಲು ಆಡಿಹವು ನಿಮೂರ ನವಿಲಹೆಜ್ಜೆ! ಕಾಳರಾತ್ರಿಯು ಬೆಳಗು ಬೈಗುಗಳು […]
ಬೇಲಿಯ ಮೇಲಿನ ನೀಲಿಯ ಹೂಗಳು
ಸಾಲಾಗಿ ನವಿಲು ಗರಿಗೆದರಿ ನರ್‍ತಿಸಿದಂತೆ ಮುಂಜಾವದಲಿ ಬೇಲಿತುಂಬ ನೀಲಿಯ ಹೂವುಜೀವನೋತ್ಸಾಹದಲಿ ಎದೆದುಂಬಿಸುವ ರೂಹು! ಭೂಮಿಯಾಳದ ಭಾವ ಮೇಳೈಸಿ ಪುಟಿದಂತೆ ಎಲ್ಲೆಂದರಲ್ಲೆ ಮನಸೇಚ್ಛೆ ಬೆಳೆದಿಹ ಬಳ್ಳಿತೆರೆದಿಹುದು ನೂರು ಸವಿರ ನೀಲ ಬಗೆಗಣ್ಣು!(ನೇಸರನಿಗೂ ಜಗಕು ಇನ್ನೂ ನಿದ್ದೆಗಣ್ಣು) […]
ಸ್ವಾತಂತ್ರ್ಯ ೪೦
ಕಾಲೇಜು ಹುಡುಗ ನಾನಂದು ಅನುಭವಿಸಿದ್ದೆ ಮಧ್ಯ ರಾತ್ರಿಗೆ ಮಿಂಚು ಹೊಡೆದದ್ದು -ಮೈ ತುಂಬ, ಬಾನಿಗೇರಿದ ಮೂರು ಬಣ್ಣ -ಬಾವುಟದಿಂದ ಕನಸು- ಹುಮಳೆ ಸುರಿದು. ಒಂದು ಕ್ಷನ ಮಿನುಗಿದ್ದೆ, ಸಂಘರ್ಷ ಶತಮಾನ ಹಿಂಸೆಗೆದೆಗೊಟ್ಟಿರುವ ತ್ಯಾಗದಾವಿರ್ಭಾ, ತೇಲಿ […]
ಲಾಲ ಬಹಾದ್ದೂರ ಶಾಸ್ತ್ರಿ
ನಮ್ಮ ಮಧ್ಯೆ ಇವನಿದ್ದನೆಂದರೆ ನಂಬುವೆಯ ಇಷ್ಟು ಸಾದಾ ಸೀದಾ ಮನುಷ್ಯ? ಬಡತನದ ಪಲ್ಲಕ್ಕಿ ಹೊತ್ತು ಮೆರೆಸಿದ ಪ್ರಾಮಾಣಿಕತೆಯ. ಹೆಂಡತಿ ಮಕ್ಕಳಿಗೆ ಆಸ್ತಿ ಸಂಪಾದಿಸಿದ ಮನೆಯಿರದ ಪ್ರಧಾನಿ: ಇವನೆಂಥ ಭಾರತೀಯ?! ಬಂದದ್ದು ಹಂಜಿಯ ಮಾಡಿ ರಾಟ […]
