ಎಂದಿನಂತೆಯೆ ದಿನದ ದಾರಿಯಲಿ ಸಾಗುತಿರೆ ಅನಿರೀಕ್ಷಿತಂ ಬಳ್ಳಿ ಗೊಂಚಲವು ಕೈಚಾಚಿ ಬಣ್ಣ ಬಣ್ಣದ ಹೂಗಳನುರಾಗದಲಿ ನಾಚಿ ಗಾಳಿ ಸುಳಿಯಲಿ ಬಂದು ಕಿವಿಮಾತನುಸುರುತಿರೆ ನಿಂತು ಬಿಡುವೆನು ನಾನು. ಈ ಪರಿಯ ಸೊಬಗಿನಲಿ ಅರಸದಿದ್ದರು ಕಾಲ ತೊಡಕುವೀ […]
ಲೇಖಕ: ಚನ್ನವೀರ ಕಣವಿ
ಒಂದು ಮುಂಜಾವು
ಒಂದು ಮುಂಜಾವಿನಲಿ ತುಂತುರಿನ ಸೋನೆಮಳೆ ‘ಸೋ’ ಎಂದು ಶ್ರುತಿ ಹಿಡಿದು ಸುರಿಯುತಿತ್ತು; ಅದಕೆ ಹಿಮ್ಮೇಳವನ ಸೋಸಿ ಬಹ ಸುಳಿಗಾಳಿ ತೆಂಗು ಗರಿಗಳ ನಡುವೆ ನುಸುಳುತಿತ್ತು. ಇಳೆವೆಣ್ಣು ಮೈದೊಳೆದು ಮಕರಂದದರಿಶಿನದಿ ಹೂ ಮುಡಿದು ಮದುಮಗಳ ಹೋಲುತಿತ್ತು; […]
ಪ್ರಕೃತಿಯ ಮಡಿಲಲ್ಲಿ
“Earth has not anything to show more fair!” – Wordsworth (ಕರ್ನಾಟಕ ಕಾಲೇಜಿನ ಅಟ್ಟದಿಂದ ಕಾಣುವ ನಾಲ್ಕೂ ಹೊತ್ತಿನ ನೋಟ) ಮೂಡಣದ ಬಾನಿನಲಿ ಮುಗಿಲು ನೆಲ ಮಿಲನದಲ ಕ್ಷಿತಿಜ ಕಂಕಣದಲ್ಲಿ ಉಷೆಯ […]
ವಿಶ್ವಕವಿಯ ದೃಶ್ಯಕಾವ್ಯ
ಬಯಲಿನಲ್ಲಿ ನಿರ್‍ವಯಲನಾಗಿ ದಿಗ್ವಲಯ ಮೀರಿ ನಿಂದೆ ಗಗನ ಮಕುಟ ಭೂಲೋಕ ದೇಹ ಪಾತಾಳ ಪಾದದಿಂದೆ. ಸೂರ್ಯ ಚಂದ್ರ ಕಣ್ಣಾಲಿಯಾಗಿ ಆ ಮೂಡು ಪಡುವಲಿಂದೆ ವಿಶ್ವದಾಟವನು ನೋಡುತಿರುವೆ ನೀ ನಿರ್‍ನಿಮೇಷದಿಂದೆ. ಉದಯ ಪುಣ್ಯವನೆ ಹಗಲು ಜ್ಞಾನ, […]
ಬರುವುದೆಲ್ಲ ಬರಲಿ ಬಿಡು
ಬರುವುದೆಲ್ಲ ಬರಲಿ ಬಿಡು ಏಕೆ ಅದರ ಚಿಂತೆ? ದುಃಖ ಸುಖವು ನಗೆಯು ಹೊಗೆಯು ಎಲ್ಲ ಅಂತೆ ಅಂತೆ. ನಾವು ಗೈದ ಒಳಿತು ಕೆಡಕು ಜೀವ ಪಡೆವ ಭೋಗ; ನಮ್ಮ ನುಡಿಯ ನಡೆಯ ಒಡಲ ಕಡೆದ […]
