ವೃಕ್ಷ

ದೊರಗು ದೊರಗಾದ ತೊಗಟೆಯ ತೋರಿಕೆಯ ದರ್ಪವಿಲ್ಲದೆ ತೋರಿಕೊಳ್ಳದ ಮೃದುವಾದ ಊರ್ಧ್ವಮುಖಿ ತಿರುಳೂ ಇರಲ್ಲ; ಅಧೋಮುಖಿಯಾದ ನೆಲಕಚ್ಚುವ ಸಂಕಲ್ಪದ ಗುಪ್ತ ಬೇರೂ ಇರಲ್ಲ; ಈ ತೊಗಟೆಯನ್ನ ಅಪ್ಪಿ ಒಲಿಯುತ್ತಲೇ ತಿರುಳನ್ನ ಬಗೆಯುವಾತ ನಮ್ಮೆಲ್ಲ ನಿತ್ಯ ರಾಮಾಯಣಗಳ […]

ವ್ಯಾಲಂಟನ್ ದಿನಕ್ಕಾಗಿ ಒಂದು ಪದ್ಯ

ಭಗವತಿ ಇಸ್ತಾರುಸಕಲ ಸೃಷ್ಠಿಯ ಮಾತೃದೇವತೆಸಮರದ ದೇವತೆ, ಕಾಮದ ದೇವತೆ. ಜಗಭಂಡೆ.ಸಮಚಿತ್ತದಲ್ಲಿ ತೊಡೆಗಳನ್ನು ಅಗಲಿಸಿ ಎತ್ತಿಯೋನಿದರ್ಶನ ಮಾಡಿಸುವ ನಮ್ಮ ಲಜ್ಜಾದೇವಿಯೂ ಇವಳೊ? ಹುಲುಮಾನವರಾದ ಇತಿಹಾಸಕಾರರು ಇಡುವ ಲೆಕ್ಕದ ಪ್ರಕಾರಐದು ಸಾವಿರ ವರ್ಷಗಳಿಂದ ನಮ್ಮನ್ನು ಆಳುವ ಈ […]

ಏನೋ ಸಾವೆನ್ನುವ

ಏನೋ ಸಾವೆನ್ನುವ ‘ಅದು’ ನಿರೀಕ್ಷಿಸುತ್ತಾ ಇರೋದು ಎಲ್ಲೋ, ಮುಂದೆಂದೋ ಈಗಂತೂ ಅಲ್ಲ. ಎನ್ನಿಸುವಂತೆ ಆಪ್ತರ ಲೋಕಾಭಿರಾಮದ ಮಾತು, ನೋವಾಗದಂತೆ ಸೂಜಿಯಲ್ಲಿ ರಕ್ತ ಸೆಳೆಯುವ ನರ್ಸಿನ ಮುಗುಳ್ನಗೆ ಹಾಸಿಗೆ ಪಕ್ಕದಲ್ಲೊಂದು ಇನ್ನಷ್ಟು ಅರಳುವ ಭರವಸೆಯ ಗುಲಾಬಿ […]

ಪಕ್ಷಿಗಾಗಿ ಕಾದು

ಮೊದಲೊಂದು ಪಂಜರ ಬರಿ ಅದು ಖಾಲಿಯಾಗಿದ್ದು, ತೆರೆದೂ ಇರಬೇಕು-ಹಾಗೆ. ಆಮೇಲೆ ಏನೋ ಸರಳವಾದ, ಬರುವ ಪಕ್ಷಿಗೆ ಅಗತ್ಯವೆನ್ನಿಸುವ ಏನನ್ನೋ ಪಂಜರದಲ್ಲಿ ಬಿಡಿಸು ಆಮೇಲೆ ಈ ನಿನ್ನ ಚಿತ್ರವನ್ನು ನಿನಗೆ ಇಷ್ಟವಾದ ಮರಕ್ಕೆ ಆನಿಸಿ ಇಡು. […]

ಇಷ್ಟಾರ್ ಎಂಬ ಬ್ಯಾಬಿಲೋನಿಯನ್ ಮಾತೃದೇವತೆಗೆ ಒಂದು ಹಾಡು

ಡೆನಿಸ್ ಲೆವೆರಟಾವ್ ಚಂದ್ರ ಹಂದಿ,ಅವಳು ಗುಟುರುವುದು ನನ್ನ ಗಂಟಲಿನಿಂದನನ್ನ ಒಳಗೆಲ್ಲ ಬೆಳಗುವ ಹಾಗೆ ಅವಳು ಹೊಳೆಯುತ್ತ ಹೋದಂತೆಅಂತರಾಳದ ನನ್ನ ಕೆಸರು ಸಂಭ್ರಮಿಸಿಕಾಂತಿಯುಕ್ತ ಬೆಳ್ಳಿಗುಳ್ಳೆಗಳಾಗಿ ಹೊಮ್ಮಿ ಚಿಮ್ಮುತ್ತವೆ ನಾನು ಗಂಡು ಹಂದಿಮತ್ತು ಕವಿಅವಳು ತನ್ನ ಧವಳ […]

ಈ ನಮ್ಮ ಕಾಲದಲ್ಲಿ ಏನೇನು ಚೆಂದ?

ನಮ್ಮ ಕಮ್ಯುನಿಸ್ಟರ ದೇಶದಲ್ಲಿ ಗುಟ್ಟಾದ ದೇವರ ಗುಡಿ ಚೆಂದ ಬಲರೆಪ್ಪೆ ಅದುರೀತೆಂದು ಭಯ ಬೀಳುವ ಸುಶಿಕ್ಷಿತಳ ಬೆಡಗು ಚೆಂದ ನಿಷ್ಠೆ, ಕರ್ತವ್ಯ, ಹೊಣೆಗಾರಿಕೆ ಇತ್ಯಾದಿಗಳಿಂದ ಬೀಗಿಕೊಂಡ ನೀತಿವಂತ ಸಭ್ಯರ ಘನತೆಗಿಂತ ತಂಗಿಯ ಹೇನು ಹೆಕ್ಕುತ್ತ […]

ಕುದುರೆಗಳು

– ಎಡ್ವಿನ್ ಮುಯಿರ್ ಪ್ರಪಂಚವನ್ನು ಚಿರನಿದ್ದೆಗೆ ತಳ್ಳಿದ ಏಳು ದಿನಗಳ ಯುದ್ಧ ಕೊನೆಯಾಗಿ ಇನ್ನೇನು ಒಂದುವರ್ಷ ಕಳೆಯುವುದರ ಒಳಗೆ ಸಂಧ್ಯಾಕಾಲ ಕತ್ತಲಿಗೆ ಜಾರುತ್ತ ಇರುವ ಹೊತ್ತಲ್ಲದ ಹೊತ್ತಿನಲ್ಲಿ ಬಂದೇಬಿಟ್ಟವು ಅವು ಅಪರೂಪದ ಕುದುರೆಗಳು ಅಷ್ಟರಲ್ಲಿ […]

ನೀ ನಡೆದೆ, ಸಂಜೆ ಬರಬಹುದೇನೋ ಎಂಬ ಹಾಗೆ…!

ಶಿವಮೊಗ್ಗದ ಆಗಿನ ಇಂಟರ್‌ಮೀಡಿಯೆಟ್ ಕಾಲೇಜಿನಲ್ಲಿ ಸುಬ್ಬಣ್ಣ ಮತ್ತು ನಾನು ಒಟ್ಟಿಗೆ ಓದಿದೆವು. ಆಗ ಸುಬ್ಬಣ್ಣ ನನಗೆ ದೂರದ ಗೆಳೆಯ. ನಾನು ‘ಸ್ಟೂಡೆಂಟ್ ಸೋಶಿಯಲಿಸ್ಟ್ ಕ್ಲಬ್’ ಎಂಬ ಸಂಸ್ಥೆಯ ರಾಜಕೀಯ -ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರತನಾಗಿದ್ದೆ. ಸುಬ್ಬಣ್ಣ […]

ಕಾವ್ಯದ ಆತ್ಮಾನುಸಂಧಾನ

ಕಣ್ಣು ತಪ್ಪಿಸಿ ಅಜ್ಜನ ನಿಮಿತ್ಯದ ಕವಡೆ ಆಡಿದ್ದು ಉಂಟು; ಕಣ್ಮರೆಯಾದದ್ದನ್ನು ಹಳೆಮನೆಯ ನಾಗಂದಿಗೆಯಲ್ಲಿ ಕಂಡು ಈಗ ಅನಿಮಿತ್ತ ನನಗೆ ನಾನೇ ಆಡಿಕೊಳ್ಳುವ ವಾರಿಧಿಯ ಅವಶೇಷವಾದ ಈ ವಿಶೇಷ ಮುಷ್ಠಿಯಲ್ಲಿ ಜಾರುವ ನಯದ ತಕರಾರು ಎನ್ನಿಸಿ […]

ಬೇರೊಬ್ಬ

ಸುಲಭ ಲಭ್ಯವಾದ ಯಾವ ‘ಹು ಈಸ್ ಹು’ನಲ್ಲಾದರೂ ಅವನ ಮಾಹಿತಿ ಸಿಗುತ್ತದೆ: ಬಾಲ್ಯದಲ್ಲಿ ಕ್ರೂರಿಯಾದ ಅಪ್ಪನ ಶಿಕ್ಷೆ ಸಹಿಸಲಾರದೆ ಅವನು ಪರಾರಿಯಾದದ್ದು ಭಿಕಾರಿಯಾಗಿ ಅಲೆದದ್ದು, ನರಳಿದ್ದು ಯೌವನವಿಡೀ ಹಗಲಿರುಳು ದುಡಿದು, ದಣಿದು, ಗೆದ್ದು ಖ್ಯಾತನಾಗುತ್ತ […]