ಗೋರ್ಬಿ ಪೂರ್ವ ಏಕಾಧಿಪತ್ಯದ ಕಮ್ಯುನಿಸ್ಟ್ ದೇಶಗಳಲ್ಲಿಮಹಾಪ್ರಭುಗಳ ಪ್ರಚಾರದಿಂದ ಅಬಾಧಿತವೆಂದೂಮಾನವ ನಿರ್ಮಿತ ಚರಿತ್ರೆಗೆ ಅತೀತವೆಂದೂನನಗೆ ಕಂಡವು; ಬಿದ್ದಲ್ಲೆ ಬೆಳೆವೆ ಸ್ಥಾಯಿ ಮರಗಳು, ಮತ್ತುಇದ್ದಲ್ಲೇ ಇರದ ಸಂಚಾರಿ ಜಿಪ್ಸಿಗಳು. ೨೬-೧೨-೯೧
ಲೇಖಕ: ಅನಂತಮೂರ್ತಿ ಯು ಆರ್
ಆಕಾಶ ಮತ್ತು ಬೆಕ್ಕು
ಜಯತೀರ್ಥ ಆಚಾರ್ಯರು ರಾತ್ರೆ ಒಂಬತ್ತು ಗಂಟೆಯ ತನಕ ಗೋವಿಂದನ್ ನಾಯರ್ ಆಡುವ ಮಾತುಗಳನ್ನು ಕೇಳಿಸಿಕೊಂಡು, ಆಮೇಲೆ ನಿದ್ದೆ ಹೋಗಿ, ಬೆಳಿಗ್ಗೆ ಐದು ಗಂಟೆಗೆ ಗರಗಸದಿಂದ ಕುಯ್ದಂಥ ಶಬ್ದ ಮಾಡಿ ಸತ್ತದ್ದು. ಅವರು ಹಾಸಿಗೆ ಹಿಡಿದು […]
ಸೂರ್ಯನ ಕುದುರೆ
ಹದಿನಾಲ್ಕು ವರ್ಷಗಳ ನಂತರ ಪೇಟೆಯಲ್ಲಿ ನನಗೆ ಪ್ರತ್ಯಕ್ಷನಾದ ಹಡೆ ವೆಂಕಟ- ಅವನ ನಿಜವಾದ ಹೆಸರು ವೆಂಕಟಕೃಷ್ಣ ಜೋಯಿಸ-ನನ್ನು ಕುರಿತು ಇದನ್ನು ಬರೆಯುತ್ತಿರುವೆ. ಊರು ಬಿಟ್ಟು ಹೋಗಿದ್ದ ನನ್ನ ಗುರುತು ಅವನಿಗೆ ಹತ್ತದಿದ್ದರೂ ಅವನ್ನನು ನಾನು […]
ಅಮೇರಿಕಾದಲ್ಲಿ ಕಣ್ಮರೆಯಾಗುತ್ತಿರುವ ಕ್ರಾಂತಿಕಾರಕತೆ: ಮಹಮ್ಮದಾಲಿ, ಮಾರ್ಟಿನ್ ಲೂಥರ್ ಮತ್ತು ಗೆಳೆಯ ಶೆಲ್ಡನ್
(೧೯೭೮ ರಲ್ಲಿ ಬಾಸ್ಟನ್ ಪ್ರದೇಶದಲ್ಲಿ ಟಪ್ಟ್ಸ್ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕನಾಗಿದ್ದಾಗ ಮತ್ತು ಏಳುವರ್ಷದ ನಂತರ ಅಯೋವಾ ವಿಶ್ವವಿದ್ಯಾನಿಲಯದಲ್ಲಿ ಈಡಾಬೀಮ್ ಪ್ರೊಫೆಸರ್ ಆಗಿದ್ದಾಗಿನ ದಿನಚರಿಗಳಿಂದ ಆಯ್ದ ಭಾಗಗಳು ಇವು. ಅಮೆರಿಕಾದ ಯುವಜನರ ರಾಜಕೀಯ, ಸಾಂಸ್ಕೃತಿಕ ಚಿಂತನೆಯಲ್ಲಿ […]
ಅಮೇರಿಕಾದಲ್ಲಿ ವಿದ್ಯಾರಣ್ಯ
ಡಾ.ಕೃಷ್ಣರಾಜು ಚಿಕಾಗೋಗೆ ಕರೆದಿದ್ದಾರೆ. ಕನ್ನಡ ಸಂಘದವರಿಂದ ನಾಡಹಬ್ಬದ ಆಚರಣೆ, ಬನ್ನಿ ಎಂದು. ಆಯೋವಾಸಿಟಿಯಿಂದ ಚಿಕಾಗೋಗೆ ಗ್ರೇಹೌಂಡ್ ಬಸ್ಸಿನಲ್ಲಿ ಸುಮಾರು ಐದುಗಂಟೆಗಳ ಪ್ರಯಾಣ. ಕತ್ತಲು; ದಾರಿಯುದ್ದಕ್ಕೂ ಮೋಟೆಲ್‌ಗಳು ಹ್ಯಾಂಬರ್ಗರ್ ಸಿಗುವ ಜಾಗಗಳು; ಗ್ಯಾಸ್ ಸ್ಟೇಶನ್‌ಗಳ ಜಾಗಿರಾತುಗಳು; […]
