ಬಟ್ಟ ಬಯಲು

ಇಲ್ಲಿ ಬಯಲಿದೆ, ಬರೀ ಬಯಲು. ಹುಚ್ಚು ಹೊಯ್ಲೆಂದರೂ ಅಡ್ಡಿಯಿಲ್ಲ ಕೇವಲ ಸಾಕ್ಷಿಯಾಗಿ ನಿಂತ ಇದಕ್ಕೆ ಈಗ ಅನಾವಶ್ಯಕ ಮಹತ್ವ. ಇಲ್ಲಿ ಇದ್ದವರು ಬಂದುಹೋದವರು ಯಾಕೆ? ಇಲ್ಲಿ ಇಲ್ಲವಾದವರೂ ಈ ಬಯಲ ಹೆಸರಲ್ಲಿ ಒಂದಲ್ಲಾ ಒಂದು […]

ಭಾವಗೀತೆ

ಅಕ್ಷರಗಳ ಹೊತ್ತುಕೊಂಡು ಮಧ್ಯಾಹ್ನದ ರಣ ಬಿಸಿಲಿನಲ್ಲಿ ಅಲೆಯುತ್ತಿದ್ದೆ. ಕುದಿಯುವ ತಲೆ ಸೀಳಾಗಿ ಶಬ್ದಗುಚ್ಛಗಳೆಲ್ಲ ತೇಲತೊಡಗಿದವು ವರ್ತಮಾನದ ಒಳಗೆ ಇವುಗಳ ಪದರುಗಳ ಬಿಡಿಸಿ ಚರ್ಮ ಒ೦ದೊ೦ದಾಗಿ ಕಳಚಿ ತಂಪು ಕಾಯಲು ನಿಂತೆ ಮೋಸಂಬಿ ತೊಳೆ ತೊಳೆ […]

ಬಿದಿರು

ತುಳುಕು ಚಿಮ್ಮುವ ಹೊಳಪು ಸಿಗುರು ಚೀರುವ ಅರಚು ಹಿರಿದುದ್ದ ಬಳುಕಾಡಿ ತೊನೆದು ತೂರಿದ ಗುರಿ ಗರಿಮುರೀ ಬಿದಿರು ಚುಚ್ಚು ಮುಳ್ಳು. ಸಾವಿರದ ಅಲಗುಗಳ ಜೀವನದ ಕೆಚ್ಚು ಪರಂಪರೆಯ ಹುಚ್ಚು ತಿದಿಯಾರಿ ಹೊಗೆಯೆದ್ದ ಯಜ್ಞಕುಂಡ-ಪ್ರೇಮಿ ಅರೆಬರೆ […]

ಅಧಿಕಾರ

ನನ್ನ ಹಗುರು ಕಣ್ಣುಗಳಿಂದ ತಟತಟ ಉದುರುವ ಕಂಬನಿಯೇ ಮಂಡಿ ತರಚಿದಾಗೆಲ್ಲ ಬ್ಲೇಡು ಕುಯ್ದಾಗೆಲ್ಲ ಧಳ್ಳೆಂದು ಚಿಮ್ಮುವ ಕಡುರಕ್ತವೇ ತೆಪ್ಪಗೆ ಜಿನುಗುವ ಬೆವರೇ ಹೇಳಿ, ನಿಮ್ಮ ನಡುವೆಯೂ ಎಲ್ಲಿಗೆಲ್ಲಿಯ ಸಂಬಂಧ ನಿಮ್ಮ ಮೇಲಿಲ್ಲವೆ ನನಗೂ ಒಂದಿಷ್ಟು […]

ಎಲೆಗೆ

ಎಲೆ ಎಲೆಯೆ ನಿನ್ನ ಹಸಿ ಹಸಿದ ಹಸಿ ರು ಮೈಗುಂಟ ಸರಾಗ ಕೊರೆಯುತ್ತವೆ ನರಗಳ ದೌರ್‍ಬಲ್ಯ. ಹಾದಿಗಳೆಲ್ಲ ಕಾಲು ಚಾಚಿ ಮಲಗಿವೆ ಅಲ್ಲಲ್ಲಿ ಇತಿಹಾಸ ಹೆಕ್ಕುತ್ತ ಸಂಚರಿಸುವ ಬಾಧೆಗಳು ತೊಲಗಿವೆ ಹಸಿರುಗಚ್ಚುತ್ತಿರುವ ಕೋಶಗಳೆದುರೂ ಮೈ […]

ಪಾರ್ಟ್‌ನರ್

ನಾನಾ ಚೌಕದ ಬಳಿ, ನೀಲಿ ಗುಲಾಬಿ ನೇರಳೆಯಾಗಿ ಕಿರು ಬಿಸಿಲಿಗೆ ಮಿನುಗುತ್ತಿರುವ ಬೃಹತ್ ಮರ್ಫಿ ಬೇಬಿಯ ಪೋಸ್ಟರಿನ ಕೆಳಗೆ ಅದರ ಕಂಬಿಗಳನ್ನು ಹಿಡಿದು ಪುಟ್ಟಗೊಂಬೆಯಂತೆ ನಿಂತಿದ್ದ ರೂಪಕ್ ರಾಥೋಡನಿಗೆ ಸಟಸಟ ಎಲ್ಲ ಹೊಳೆದುಹೋಯಿತು. ಹೌದು, […]