ಸೂರ್ಯ

ಸೂರ್ಯ ಆಗಾಗ ಹಗಲುಗಳ ನುಂಗಿ ಸುಖವಾಗಿ ಸಾಯುತ್ತಿದ್ದ ಅಥವಾ ಬದುಕುತ್ತಿದ್ದ ಆಗೊಮ್ಮೆ ಈಗೊಮ್ಮೆ ಹೆಣ್ಣುಗಳ ತುಟಿಯಲ್ಲಿ ಪಿಸುನುಸುಳುತ್ತಿದ್ದ ಅಯ್ಯೋ ಗದ್ದಲ ಭೂಮಿಯ ತುಂಬ ಮಕ್ಕಳೋ ಮಕ್ಕಳು! *****

ಕಂಬನಿಯೆ ಸಾಕು!

ಎಂದು ಇಲ್ಲದ ವಿರಸವಿಂದು ಕೂರಸಿಯಾಗಿ ಮಾತು ಮಾತಿನ ಮೊನೆಯ ಮಸೆಯಿತೆಂತು? ನಿನ್ನೆದೆಯ ಸಂತಾಪವಿಂತು ಹರಿಯಿತೆ ಪಾಪ! ಮೌನದೇವತೆ ಶಾಪವಿತ್ತಳೆಂತು? ಜಗದ ವ್ಯವಹಾರಿಕತೆಗೇಕೆ ವ್ಯಥೆ ಕಿಂಕರತೆ? ಪ್ರೀತಿ ಅಂತಃಕರಣ ನಿನ್ನದಿದೆಕೊ! ಅದನುಳಿದರೇನುಂಟು? ಬರಿಯ ಗಾಳಿಯ ಗಂಟು! […]

ಫಿಲಂ ಚೇಂಬರ್ಸ್‌ನಲ್ಲಿ ಹುಡುಕಿದರೆಲ್ಲರ ಹೃದಯವನು….

ಇನ್‌ಕಂಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ನವರು ದಿಢೀರ್‍ ಹಾಜರಾದರೆ ಎಲ್ಲರ ಹೃದಯ ‘ಡವ ಡವ’ ಎನ್ನುವುದು ನಿಜ. ಆ ‘ಡವ ಡವ’ ಸದ್ದು ಫಸ್ಟ್‌ಗೇರ್‌ನಲ್ಲಿದೆಯೇ, ಸೆಕೆಂಡ್ ಗೇರ್‌ನಲ್ಲಿದೆಯೇ, ಥರ್ಡ್‌ಗೇರ್‌ನಲ್ಲಿದೆಯೇ ತಿಳಿದ ತಕ್ಷಣ ಆ ಇಲಾಖೆಯವರಿಗೆ-ಬ್ಲಾಕಲ್ಲಿ ಎಷ್ಟು ತಗೊಂಡಿದಾರೆ ವೈಟಲ್ಲಿ […]

ನಿನ್ನ ಹೆಸರೆ ಕಡಲು ನನ್ನ ನಾಲಗೆಯೆ ಹಡಗು

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪ್ರೇಮ ಜಪಮಣಿ ಕದ್ದು ಹಾಡು ಕೊಟ್ಟಿತು ಜತೆಗೆ ಕವಿತೆಯನ್ನು ಕೂಡಾ ‘ಶಕ್ತಿ ಇಲ್ಲ’ ಎಂದು ಚೀರಿದೆ ವ್ಯಾಕುಲನಾಗಿ ಗೋಗರೆದೆ ಹೃದಯಕ್ಕೆ ನನ್ನ ಮೊರೆ ಕೇಳಲೇ ಇಲ್ಲ. […]

ಕಂಬನಿಗೆ

ಕಂಬನಿಯೆ, ನೀನೀಸು ದಿನವಲ್ಲಿ ಹುದುಗಿದ್ದೆ ಯಾವ ಹೃದಯದ ತಳವ ಸೋಸುತಿದ್ದೆ? ನಾನು ನೀನೂ ಅವಳಿ-ಜವಳಿಯೆಂಬುದ ಮರೆತು ಯಾರ ನಿಟ್ಟುಸಿರೊಡನೆ ಬೆರೆಯುತಿದ್ದೆ? ಇಂದು ನಾನಾಗಿಯೇ ಕರೆವೆ ಕನಿಕರಿಸಿ ಬಾ ಇಳಿಸು ನನ್ನೆದೆ ಭಾರ ದುಃಖಪೂರ! ಮರಮಳೆಗೆ […]

ಉರುಳುರುಳು ಕಂಬನಿಯೆ!

ನನ್ನೆಲ್ಲ ಹಂಬಲವನೊಂದು ಬಿಂದುವಿನಲ್ಲಿ ಬಿಂಬಿಸಿಹ ಕಂಬನಿಯೆ! ಹೇಳಕೇಳದೆ ಹೊರಟು ನಿಂತಿರುವ ಅತಿಥಿಯೊಲು ಕಣ್ಣ ಹೊಸತಿಲ ದಾಟು- ತಿರಲು ನಾನಿನ್ನೇವೆ? ಉರುಳುರುಳು ಎದೆಯಲ್ಲಿ ಕುದಿವ ಕಡಲೊಂದಿರಲು, ಶೋಕವಾಹಿನಿ ಹರಿದು ಮನದ ಮಲಿನತೆ ಕಳೆದು, ಅಮೃತವಾಹಿನಿಯಾಗಿ ಚಿಮ್ಮಿ […]

ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ..

ಈತ ನನ್ನನ್ನು ಚಕಿತಗೊಳಿಸುತ್ತಾನೆ. ಮತ್ತೆ ಮತ್ತೆ ನನ್ನ ಮನಸ್ಸಿಗೆ ಬಂದು ಹೊಸ ಹೊಸ ತಿಳಿವಳಿಕೆಗೇ ಕಾರಣವಾಗುವ ಈತನನ್ನು ನಿಮ್ಮೊಂದಿಗೆ ನೆನೆಯಲು ಯತ್ನಿಸುತ್ತೇನೆ. ಈತ ಪ್ರಖ್ಯಾತ ಗುರುವಾಗಿದ್ದ; ಸಾವಿರಾರು ಮೈಲಿಗಳಿಂದ ದೊರೆಗಳು, ಸೇನಾನಿಗಳು ಬಂದು ಈಶನನ್ನು […]

ಕನ್ನಡ ಚಿತ್ರಗಳಿಗೆ ಇಂಗ್ಲೀಷ್‌ನಲ್ಲಿ ಮಂಗಳಾರತಿ

ಏಕೋ ಏನೋ ಈಗ ಕನ್ನಡ ಚಿತ್ರಗಳಿಗೆ ಇಂಗ್ಲೀಷ್ ಹೆಸರಿಡುವುದು ಒಂದು ಫ್ಯಾಶನ್ ಆಗಿದೆ. ಫ್ಯಾಶನ್ ಮಾತ್ರವಲ್ಲ. ಆ ಪದಕ್ಕೆ ಸರಿಸಮಾನವಾದ ಕನ್ನಡ ಪದವನ್ನು ನೀಡಿ ಎಂದು ಸವಾಲು ಎಸೆಯುತ್ತಾರೆ ನಿರ್ಮಾಪಕ ನಿರ್ದೇಶಕರು. ಈಗೀಗ ಮುಹೂರ್ತ […]

ಅನುಭವ ಇಲ್ಲದ ಕವಿತೆ

ಅನುಭವ ಇಲ್ಲದ ಕವಿತೆ ತಿಂಗಳು ತುಂಬದ ಕೂಸು ಅವಸರವಸರದಿಂದ ಉಸಿರಿಗಾಗಿ ವಿಲಿವಿಲಿಸುತ್ತ ಹೊರ ಬರುತ್ತದೆ ಬಿಸಿಲಿಗೆ ರಾತ್ರಿ ಅಂಗಡಿ ಮುಚ್ಚಿ ಬಿಕೋ ಬೀದಿಗಳಲ್ಲಿ ನಡೆದು ಬರುವಂತೆ ಬರೀ ನೆನಪುಗಳ ಊಹೆಗಳ ಹಗುರ ನಿರ್ಣಯಗಳ ತಪ್ಪಿ […]