ಸಂಧ್ಯಾ ರಾಗ – ೨೨

ಲಕ್ಷ್ಮಣನ ಸ್ಥಿತಿಯೇ ಬೇರೆಯಾಗಿಬಿಟ್ಟಿತು. ನಿಂತಲ್ಲಿ ನಿಲ್ಲ. ಕುಳಿತಲ್ಲಿ ಕೂಡ. ದೇಹದ ಮೇಲಣ ಪರಿವೆಯಂತೂ ಮರೆತು ಹೋಗುತ್ತ ಬಂತು. ಮೆಮೇಲೆ ಬಟ್ಟೆಯಿದೆಯೇ ಇಲ್ಲವೇ ಎಂಬುದೂ ಅವನ ಗಮನಕ್ಕೆ ಬರುತ್ತಿರಲಿಲ್ಲ. ಹುಚ್ಚನಂತಾಗಿಬಿಟ್ಟಿದ್ದನು. ಕ್ಷೌರಕಾಣದೆ ಮುಖವೆಲ್ಲಾ ಕೂದಲು ತುಂಬಿಕೊಂಡಿತ್ತು. ತಲೆಯ ಅರ್ಧಕೂದಲು ನೆರೆಯುತ್ತ ಬಂದು ಅವನ ಮೊದಲೇ ಗಂಭೀರವಾದ ಮುಖಕ್ಕೆ ಒಂದು ಗಂಭೀರನೋಟವನ್ನಿತ್ತಿತ್ತು. ತನ್ನಷ್ಟಕ್ಕೇ ಹಾಡಿಕೊಳ್ಳುವನು. ಮತ್ತೆ ಸುಮ್ಮನಾಗುವನು. ದಿವಸಗಳು ಕಳೆದರೆ ಬಾಯೇ ಬಿಡುತ್ತಿರಲಿಲ್ಲ. ತಂಬೂರಿಯನ್ನು ನೋಡಿದರೆ ಕಿಲಕಿಲನೆ ನಗುವನು. ನಗುವುದಕ್ಕೆ ಮೊದಲು ಮಾಡಿದರೆ ನಗುತ್ತಲೇ ಇರುವನು.
ಶಾಂತಾ ತುಂಬ ಹೆದರಿದಳು. ತನ್ನ ತಂದೆಯ ಪಾಡೇ ಅಣ್ಣನಿಗಾಗುವುದೆಂದು ಭಾವಿಸಿದಳು. ಅಣ್ಣನ ಸ್ಥಿತಿಯನ್ನು ನೋಡಿ ಹೊಟ್ಟೆಯ ದುಃಖ ಮರುಕಳಿಸಿಕೊಂಡು ಬರುತ್ತಿತ್ತು. ಮೆಲ್ಲನೆ ಲಕ್ಷ್ಮಣನನ್ನು ಕರೆದುಕೊಂಡು ಹೋಗಿ ತನ್ನ ಮನೆಯಲ್ಲಿಟ್ಟುಕೊಂಡಳು. ಮಗುವಿನಂತೆ ಅವನನ್ನು ಆದರಿಸಿದಳು. ಒಂದು ದಿವಸ ತಂಬೂರಿಯನ್ನು ಬೇಡಿದ – ರಾಯರ ಮನೆಯಿಂದ ಅವನ ತಂಬೂರಿಯನ್ನೇ ತರಿಸಿಕೊಟ್ಟಳು.
ತಂಬೂರಿಯನ್ನು ಶೃತಿಮಾಡಿ ಲಕ್ಷ್ಮಣ ನಾಲ್ಕು ಮೀಟುಹಾಕಿದ; ಕಣ್ಣಿನಲ್ಲಿ ಧಾರೆಯಾಗಿ ನೀರು ಸುರಿಯಲಾರಂಭಿಸಿತು. ತಂಬೂರಿಯ ತಂತಿಗಳನ್ನು ಒಂದೊಂದನ್ನಾಗಿ ಕಿತ್ತು ಅಲ್ಲಿಂದ ಎದ್ದು ಹೊರಟುಹೋದ.
ಸಂಜೆಯಾದರೂ ಮತ್ತೆ ಅಣ್ಣನ ದರ್ಶನ ಸಿಗಲಿಲ್ಲ. ಮನೆಗೆ ಹೋಗಿರಬಹುದೆಂದು ಅಲ್ಲಿಗೆ ಹೋಗಿ ಬಂದಳು. ಅಲ್ಲಿಗೂ ಬಂದಿರಲಿಲ್ಲ. ಗಂಡ ಬರುತ್ತಲೂ ತಿಳಿಸಿದಳು. ವೆಂಕಟೇಶ ಯಾರದೋ ಕಾರು ತೆಗೆದುಕೊಂಡು ಭೀಮರಾಯರ ಮನೆ, ಸುಂದರರಾಯರ ಮನೆ, ಅನಂತಾಚಾರ್ಯರ ಮನೆ, ಎಲ್ಲಾ ಕಡೆಯೂ ಸುತ್ತಿ ಬಂದ. ಲಕ್ಷ್ಮಣನ ಪತ್ತೆ ಸಿಗಲಿಲ್ಲ.
“ಅಯ್ಯೋ ಅಣ್ಣಾ – ನೀನು ಹೊರಟು ಹೋದೆಯಾ?”
ಎಂದು ಒಂದೇ ಸಮನೆ ದುಃಖಿಸಿದಳು.
ಈ ಸಮಾಚಾರವನ್ನು ಕೇಳಿದ ರಾಮಚಂದ್ರ “ಸದ್ಯ ಶನಿ ತೊಲಗಿತು” ಎಂದು ಸಮಾಧಾನಪಟ್ಟುಕೊಂಡನು.
ರಾಮಚಂದ್ರನಿಗೆ ಕೆಲಸವಾದ ಮೇಲೆ ಪದ್ಮನಲ್ಲಿ ಅನೇಕ ಬದಲಾವಣೆಗಳು ತಲೆದೋರಲಾರಂಭಿಸಿದವು. ಒಬ್ಬ ‘ಮೇಡಮ್ಮ’ನವರನ್ನು ಗೊತ್ತುಮಾಡಿ ಹೆಂಡತಿಗೆ ಇಂಗ್ಲಿ ಕಲಿಸಲಾರಂಭಿಸಿದ. ಅವಳ ತಲೆಯ ಬೆತಲೆ ಪಕ್ಕಕ್ಕೆ ಜಾರಿತು. ಕಾಲಿಗೆ ಹಿಮ್ಮಡಿಯೆತ್ತರದ ಮೋಜಗಳು ಬಂದಿದ್ದವು. ಅವುಗಳನ್ನು ಹಾಕಿಕೊಂಡು ನಡೆಯಲಾರದೆ ಒಂದೆರಡು ಸಲ ಕಾಲುಳುಕಿಸಿಕೊಂಡಿದ್ದಳು. ಕಿವಿಯ ಓಲೆಯನ್ನು ತೆಗೆದು ಹಾಕಿಸಿ ‘ತೂಗು ದೀಪ’ (ಓಣದಿe – ಓಣಜಠಿx) ಗಳನ್ನು ಹಾಕಿಸಿದನು. ಕುಪ್ಪಸದ ತೋಳುಗಳು ಬರಬರುತ್ತ ಭುಜದ ಸಮಕ್ಕೆ ಹೋಗುತ್ತ ಬಂದವು. ದಿನಕ್ಕೆ ಹತ್ತು ಸಲವಾದರೂ ಮುಖಕ್ಕೆ ಹೇಸಲಿ ಸ್ನೋ ಹಚ್ಚಿಕೊಳ್ಳದಿದ್ದರೆ ಅವಳಿಗೆ ಸಮಾಧಾನವಿಲ್ಲ.
ಅಲಂಕಾರದ ಸಿಸ್ತು, ನಾಲ್ಕು ಇಂಗ್ಲಿ ಮಾತುಗಳನ್ನಾಡುವ ಸಾಮರ್ಥ್ಯವೂ ಬಂದ ಮೇಲೆ ಹೆಂಡತಿಯನ್ನು ಸ್ತೀಯರ ಕ್ಲ (ಓಛಿಜಿಟಿex ಇqze) ಸದಸ್ಯಳನ್ನಾಗಿ ಮಾಡಿದ ಮಾರನೆಯ ದಿವಸವೇ ಕೆಗೆ ಟೆನಿ ರ್‍ಯಾಕೆm ಬಂದುಬಿಟ್ಟಿತು.
ರಾಮಚಂದ್ರ ‘ಸಾಹೇಬರು’ ಆಗಿದ್ದಂತೆ, ಪದ್ಮ ‘ಅಮ್ಮಾವರು’ ಆಗಿಬಿಟ್ಟಳು. ಅಡಿಗೆ ಕೆಲಸಕ್ಕೆ ಒಬ್ಬ ಅಡಿಗೆಯವನನ್ನು ಗೊತ್ತುಮಾಡಿಕೊಂಡಿದ್ದರು. ಪದ್ಮನಿಗೆ ಇದ್ದ ವೇಳೆಯು ಅವಳ ಅಲಂಕಾರ, ಸ್ನೇಹಿತರನ್ನು ಬರಮಾಡಿಕೊಳ್ಳುವುದು, ಟೆನಿ ಆಟವನ್ನು ಅಭ್ಯಸಿಸುವುದು. ‘ಮೇಡಂ’ ಬಂದಾಗ ಇಂಗ್ಲಿ ಕಲಿಯುವುದು – ಇವಕ್ಕೇ ಸಾಲುತ್ತಿರಲಿಲ್ಲ. ಗೋವರ್ಧನನನ್ನು ನೋಡಿಕೊಳ್ಳುವುದಕ್ಕಂತೂ ಪುರಸತ್ತೇ ಇರಲಿಲ್ಲ. ಗೋವರ್ಧನ ಲಾಲನೆ ಪಾಲನೆಯೆಲ್ಲಾ ಅಡಿಗೆ ನಾರ್‍ಣಾಚಾರಿ, ದಫೇದಾರ ದಾಸಪ್ಪ, ಮೋಟಾರು ಡ್ರೆವg ಜಾ ಇವರುಗಳಿಗೆ ಸೇರಿತ್ತು.
“ಗೋವೀ, ಮಲಗಿಕೊಂಡನೇನೇ ” ಎಂದು ರಾಮಚಂದ್ರ ಕೇಳಿದಾಗಲೇ ಪದ್ಮನಿಗೆ ಮಗನ ನೆನಪು ಬರುತ್ತಿದ್ದುದು.
*****
ಮುಂದುವರೆಯುವುದು