ಸವಾಲು-ಜವಾಬು

“ಹಳೆ ನೆನಹ ಗೀರಿ
ಉರಿಯದಿರು ಪೋರಿ,
ತೋರಿಸುವ ನಗೆಯ ದಾರಿ”
– ಹಿಂದೊಮ್ಮೆ ಕಂಡು
ಒಪ್ಪದ ಬಿ.ಇ. ಗಂಡು
ಬಂದಿದ್ದ ಮದುವೆ ಕೋರಿ.
ಹೇಳಿದಳು ಗೌರಿ:
“ಡಿಯರ್, ಐಯಾಮ್ ಸಾರಿ,
ಎಷ್ಟು ಕೊಡುತೀರಿ ಡೌರಿ?”
*****