………. – ೧೧

ನೀರಿನ ತುಂಬ ಮೋಡ

ಮೋಡದ ಮೇಲೆಲ್ಲ ಅಲೆ ಅಲೆಯಾಗಿ
ಹರಿವ ಮೀನು

ಮೋಡದೊಳಗೆ ಗುಡುಗು, ನೀರಲ್ಲಿ
ಸುಳಿ ಮಿಂಚು

ನದಿಯ ತಳದಲ್ಲೊಂದು ಕಥೆ
ನದಿಯ ಮುಖದಲ್ಲಿ ನಗುವ ತರಂಗಗಳು.
*****