ಕಣ್ಣಂತೆ,
ಅಲ್ಲೊಂದು ಹರಿಯೊ ನದಿಯಂತೆ
ಬಣ್ಣ ಬಣ್ಣದ ಕನಸು ಮೀನಂತೆ
ಕಪ್ಪು ನದಿಯ ಎದೆಯಲ್ಲಿ
ಫಳ ಫಳ ನಕ್ಷತ್ರ ಜಾತ್ರೆ
ತಾರೆ ಸಹಿತ ಧುಮುಕಿ
ನದಿ ಸೇರಿದ್ದಾನೆ ಚಂದ್ರ
ಆಕಾಶಕ್ಕೇ ಹುಟ್ಟು ಕೊಟ್ಟು
ಚಂದ್ರನ ಮೇಲೆ ಹೊರಟ ದೋಣಿ ಸವಾರಿ.
ಅಲ್ಲಲ್ಲಿ ಮೋಡ ಚೆಲ್ಲಾಪಿಲ್ಲಿ
ಬಾನಗಲದ ನೆನಪಲ್ಲಿ ಸುಳಿದು,
ಮರುಕ್ಷಣ ಮುಳುಗಿದ ಚಿತ್ರ.
*****