ಕಲ್ಕತ್ತೆಯಲ್ಲಿ ಕಾಳಿ ಬಲಿಗೆ ಬಂದಳು ಮೊನ್ನೆ;
ನರಪಶುವು ನರಪಶುವ ಕೊಂದು ಕುಣಿಯಿತು ಕೇಕೆ
ಆಕಿ; ನಲಿಯಿತು ತಿವಿದು ಹೊಡೆದಪ್ಪಳಿಸಿ ಸುಟ್ಟು
ಉಲಿದು ಸಾಯಿಸಿ ಕೂಸುಕುನ್ನಿಗಳ, ಹೆಣ್ಣುಗಳ,
ಅಂಡುಗಳ, ದುರ್ಬಲರ, ದೀನರ, ಅನಾಥರನು.
ಪಶುವ ಹೆಣ ಬೀದಿ ಬೀದಿ ಮಂದಯಿಸಿರಲು
ನೋಡಿ ಗಹಗಹಿಸಿ ರಿಂಗಣಗುಣಿದು ರಣಹದ್ದು
ಉತ್ಸವಕೆ ಬಿಜಯಗೆದಿತ್ತು ; ಬೀದಿಯ ನಾಯಿ
ಈ ವೆರದಾರ್ಭಟಕೆ ಜಿತೋಸ್ಮಿ ಎಂದು ಸೆ
ವೆರಗಾಗಿ ನಿಂತಿತ್ತು ; ಕಾಗೆಗಳ ಬಳಗ ಅಹ!
ನರನು ಸೃಷ್ಟಿಯ ಮಕುಟ ಎಂ ವ ತಹುದು ದಿಟ !
ಎಂದು ಕಾ ಕಾ ಎಂದು ಕೊಂಡುಕೊನೆಯಿತು ನರನ.ನಾಯಿಗೂ ಕಾಗೆಗೂ, ಹದ್ದಿಗೂ ಈ ವರೆಗು
ಕೊಲುವ ನರ ಕೊಂದುದನ್ನು ತಿನ್ನಲೊಲ್ಲನಿದೇಕೆ?
ಎಂಬ ಸಂಶಯ ಹರಿಯಲಿಲ್ಲ. ನರ ನಿಃಸ್ವಾರ್ಥಿ;
ಕೊಲ್ಲುವನು ನಮಗಾಗಿ ! ಎಂದು ತಂತಮ್ಮೊಳಗೆ
ನಿರ್ಧರಿಸಿ ಗರಿಹೊಡೆದು ಬಾಲವಾಡಿಸುತ
ಕೊರಲೆತ್ತಿ ಹಾಡಿದವು ನರವಿಜಯಗೀತೆಯನು.
ಕ್ರಿಸ್ತ ಬುದ್ಧರು ತಮ್ಮ ಅವತಾವಿಂದು ಕೃತ
ಕೃತವಯ್ತೆಂದು ಹಿಗ್ಗಿದರು ; ನಮ್ಮೀ ಗಾಂಧಿ
ವರುಷವರುಷದ ತನ್ನ ತಪಕೆ ಬಂದಿದೆ ಸಿದ್ಧಿ
ಎಂದು ತಣಿದನು; ನೆತ್ತರಲ್ಲಿ ಬರೆದಿದೆ ನೋಡಿ ;
ದೇವಮವಗಣದ ಅವತಾರ ಸೂಚನೆಯು ;
ಮನುಕುಲದ ಅಂಮ ವಿಮೋಚನೆಯ ಯೋಚನೆಯು !
*****
