ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ಕೆಂಪ ಕೆನ್ನೆಯ ಕಂಡು, ಕಲ್ಲುಗಿರಣಿ ಕೂಡಾ ಹುಚ್ಚೆದ್ದು ಕುಣಿದೀತು
ಪರದೆಯಾಚೆಗಿನ ಮುಖ ಕಂಡು, ಮೂಕ ಪ್ರೇಮಿಯ ಹೃದಯ ಶಾಂತವಾದೀತು
ಜ್ಞಾನ ದಿಕ್ಕೆಟ್ಟು ದಾರಿ ಮರೆತೀತು, ತಾರ್ಕಿಕನ ವಿಜ್ಞಾನ ಚೂರು ಚೂರಾದೀತು
ನಿನ್ನ ಪ್ರತಿಫಲಿಸಿದ ನೀರು ಹಾಗೇ ಮುತ್ತಾದೀತು, ಭಗ್ಗೆಂದ ಬೆಂಕಿ ಉರಿವುದೇ ಬಿಟ್ಟಿತು
ನಿನ್ನ ಚೆಲುವಿದ್ದಲ್ಲಿ, ಚಂದ್ರಮನೆ ಬೇಡ, ಲೋಲಾಡುವ ಲಾಂಧ್ರಗಳೂ ಬೇಡ
ನಿನ್ನ ಮುಖವಿದ್ದಲ್ಲಿ, ಆ ತುಕ್ಕು ಹಿಡಿದ ಪ್ರಾಚೀನ ಸ್ವರ್ಗವೆಂಬ ಕನ್ನಡಿಯೂ ಬೇಡ
ಮಾಡು, ನಿನ್ನ ಉಸಿರಿನಿಂದ ಈರೇಳು ಲೋಕಗಳ, ನವಸೃಷ್ಟಿ
ಹಾಡು, ನಿನ್ನ ದಿವ್ಯ ದೃಷ್ಟಿಯ ಆಶೆಗಾಗಿ, ನಾದಸೃಷ್ಟಿ
*****
