ರಾಗ

ಸಮುದ್ರ ಸೀಳಿ ಲಾಗ ಹೊಡೆಯುವ
ತಿಮಿಂಗಲ
ಆಕಾಶವನ್ನೇ ಹರಿದು ಸುರಿಯುವ
ಮಳೆ
ಚಂದ್ರ ತಾರೆಗಳನ್ನೆ ನುಂಗಿಬಿಡುವ
ಮೋಡ
ಭೂಮಿಯೊಳಗಿಂದ ಹಟಾತ್ತನೆ ಸಿಡಿದು
ನಡುಗಿಸುವ ಕಂಪನ;

ನುಡಿಸಿದರೆ ರಾಗ,
ಹೀಗಿರಬೇಕು!

ರೋಮ ರೋಮಕ್ಕೂ ಲಗ್ಗೆ ಇಟ್ಟು
ಕೊಲ್ಲುವ ಹಾಗೆ!

ಕೀಲಿಕರಣ: ಕಿಶೋರ್‍ ಚಂದ್ರ


ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.