ತಾಯಿಯಂತೆ

ಮಗನ ರಕ್ತ ಸುರಿವ ಗಾಯಕ್ಕೆ
ಹಚ್ಚಿದ ತೆಂಗಿನೆಣ್ಣೆಯ ಮದ್ದು
ಸೀರೆ ಹರಿದು ಕಟ್ಟಿದ ಬಟ್ಟೆ

ತಾಯಿ ಸತ್ತು ವರ್‍ಷಗಳಾದರೂ
ಮಾಯ್ದ ಗಾಯದ ಕಲೆಯೊಂದಿಗೆ
ನೋವಾಗಿ ಉಳಿದುಕೊಂಡಿದೆ.

ನೆನಪಾದಾಗಲೆಲ್ಲ ಅದ
ಮುಟ್ಟಿ ನೇವರಿಸುವನು
ಆ ಗಾಯ ಈಗ ತಾಯಿಯಂತೆ
*****
ಭಾವನಾ ಏಪ್ರಿಲ್ ೨೦೦೦

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.