ಮಾನಭಂಗ

ಬೆಳಕಿನ ನೂಲುಗಳ
ಥರ ಥರ ಬಣ್ಣದಲದ್ದಿ
ನೇಯುತ್ತಿದ್ದ ಸೂರ್‍ಯ
ನಿನಗೊಂದು ಸೀರೆ
ಭೂಮೀ ನಿನ್ನ ಮೇಲೇ

ಹಠಾತ್ತನೆ ರಾತ್ರಿ ಬಂದು
ಹರಿದೊಗೆಯಿತದನ್ನ
ನಿರತ ಸೂರ್‍ಯನನ್ನೊದ್ದು ಕಡಲಿನೊಳಗೆ

ಅವ ಬಣ್ಣ ತುಂಬಿದ ಕೈಲಿ
ನೀರ ಬಡಿಬಡಿದು
ಈಸು ಬಾರದೆ
ಹೋದ

ಮತ್ತು ನೀ ಬೆತ್ತಲಾದೆ

ಕಣ್ಣುಮುಚ್ಚಿಕೊಂಡ ನಿನ್ನ ನೋಡಲೀಗ
ಬಾನತುಂಬ ಜಿಗಿ ಜಿಗಿ ನೂಕು ನುಗ್ಗಲು
ತಾರೆಗಳ ಸಂತೆ
*****