ಬುದ್ಧಿ ಮಾತು Posted on ಏಪ್ರಿಲ್ 11, 2025ಏಪ್ರಿಲ್ 13, 2025 by ನಿಸಾರ್ ಅಹಮದ್ ಕೆ ಎಸ್ “ನಾನು ನನ್ನದು ಅನ್ನುವುದು ಅಹಂಕಾರ” ಅಂದ ಹಿರಿಯರ ವಾಕ್ಯವ ನನ್ನಿ_ ಎನ್ನುತ ನಂಬಿ ಕರೆಯೋಲೆ ಕಳಿಸಿದ: “ನನ್ನ ಹೆಂಡತಿ ಮದುವೆಗೆ ಬನ್ನಿ” *****
ಹನಿಗವನ ನುಡಿಯ ಏಳಿಗೆ ನಿಸಾರ್ ಅಹಮದ್ ಕೆ ಎಸ್ ಏಪ್ರಿಲ್ 3, 2023 0 ವರ್ಷವಿಡೀ ಚಾಟಿಯ ಏಟಿನ, ದುಡಿತದ ಎತ್ತಿಗೆ ಸಂಕ್ರಾಂತಿಯ ದಿನ ಆಹ! ಎಂತಹ ಸಿಂಗಾರ; ಜ್ಞಾಪಿಸುವುದು ನನಗೀ ದೃಶ್ಯ, ನವೆಂಬರ್ ಒಂದರ ಸರಕಾರದ ಸಿರಿಗನ್ನಡದುದ್ಧಾರ. *****
ಹನಿಗವನ ಅಕಾಲಿಕ ನೆರವು ನಿಸಾರ್ ಅಹಮದ್ ಕೆ ಎಸ್ ಫೆಬ್ರವರಿ 20, 2023 0 ಕಾರ್ಯಸಾಧನೆಯಾದ ಮೇಲೆ ಚಾಚಿದ ಅಭಯ ಹಸ್ತ, ಗಾಢ ನಿದ್ದೆಯೊಳಗಿರುವವನನೆಬ್ಬಿಸಿ ನಿದ್ದೆ ಗುಳಿಗೆ ನೀಡಿದ ಹಾಗೆ ವ್ಯರ್ಥ. *****