ಕನ್ನಡ ಮಾಧ್ಯಮ

ಸ್ವಂತ ಮನೆಯಲಿ ಸ್ಟೇಯಿನ್‌ಲೆಸ್ ಸ್ಟೀಲಿನ
ಪಾತ್ರೆಯ ಬಳಸುತ ಮನಸಾರ,
ಪರರಿಗೆ ಮಡಕೆಯ ಮಹಿಮೆಯ ದಿನವೂ
ಬೋಧಿಸುತಿರುವನು ಕುಂಬಾರ.
*****