ಅವಳು ನನ್ನವಳಾಗಿ

ಆಕಾಶ-ಅಲ್ಲಿರುವ ಎಲ್ಲ ನಕ್ಷತ್ರಗಳು
ಜಗವು-ಮುಗಿಯದ ಅದರ ಎಲ್ಲ ಸಂಪದವು
ನನ್ನ ವಶವಾದರೂ ನಾನು ಇನ್ನಿಷ್ಟು ಬಯಸಬಹುದು;
ಆದರೆ ನಾನು ಸಂತೃಪ್ತ, ನೆಲದ ಮೇಲಿನ ಸಣ್ಣ ಮೂಲೆ ಸಾಕು-
ಅವಳು ನನ್ನವಳಾಗಿ ಮಾತ್ರ ದೊರೆಯಬೇಕು. (Lover’s Gift:5)
*****