ಗಡಗಡ ನಡುಗಿ ಬತ್ತಲೆ ಮೈಯಲ್ಲಿ
ಕೂಲಿ ಹುಡುಗ ಅಂಗಡಿ ಎದುರು ಸತ್ತ;
ಎತ್ತಿರಲಿಲ್ಲ ಗಲ್ಲಾ ಪೆಟ್ಟಿಗೆಯಿಂದ ಕತ್ತ.
ಒಮ್ಮೆ ಊರಾಚೆ ಹೋದಾಗ ಮಳೆ ಬಂದು
ದೂರದ ಬೆಟ್ಟ ಕಂಡು “ನೆಂದ್ಹೊಯ್ತು, ನೆಂದ್ಹೊಯ್ತು”
ಅಂತ ಶೆಟ್ಟಿ ಬಿಕ್ಕಿ ಬಿಕ್ಕಿ ಅತ್ತ;
“ಅಯ್ಯೊ ಪಾಪ” ಅಂದರು, ಇದ್ದೋರು ಸುತ್ತಮುತ್ತ.
*****
ಗಡಗಡ ನಡುಗಿ ಬತ್ತಲೆ ಮೈಯಲ್ಲಿ
ಕೂಲಿ ಹುಡುಗ ಅಂಗಡಿ ಎದುರು ಸತ್ತ;
ಎತ್ತಿರಲಿಲ್ಲ ಗಲ್ಲಾ ಪೆಟ್ಟಿಗೆಯಿಂದ ಕತ್ತ.
ಒಮ್ಮೆ ಊರಾಚೆ ಹೋದಾಗ ಮಳೆ ಬಂದು
ದೂರದ ಬೆಟ್ಟ ಕಂಡು “ನೆಂದ್ಹೊಯ್ತು, ನೆಂದ್ಹೊಯ್ತು”
ಅಂತ ಶೆಟ್ಟಿ ಬಿಕ್ಕಿ ಬಿಕ್ಕಿ ಅತ್ತ;
“ಅಯ್ಯೊ ಪಾಪ” ಅಂದರು, ಇದ್ದೋರು ಸುತ್ತಮುತ್ತ.
*****