ಯಾರಿಗಿತ್ತು ಧೈರ್‍ಯ ಆಗ ಹೇಳಲೆಮ್ಮ ಖಾಜಿಗೆ?
ಎಲ್ಲ ಅರಿತ ಧರ್‍ಮದರ್‍ಶಿ! ಹೋಗಲುಂಟೆ ಗೋಜಿಗೆ?
ಇದ್ದುದೆಲ್ಲವನ್ನು ಚೆಲ್ಲಿ ಹೆಣ್ಣ ಮೈಯ್ಯ ಮೋಜಿಗೆ,
ಹಾಗೇ ಕುದುರೆ ಜೂಜಿಗೆ,
ಕೊನೆಗೆ ಹಳೆಯ ಮನೆಯು ಕೂಡ ಬಂದಿತೋ ಹರಾಜಿಗೆ
ಕಂಡ ಜನರು “ಅಯ್ಯೋ ಪಾಪ!” ಅನ್ನುವರು ಮುಲಾಜಿಗೆ,
ದಮಡಿ ಕೂಡ ಬಿಚ್ಚದಂತೆ ಅವನ ಕ್ಷಯದಿಲಾಜಿಗೆ.
*****
