ಕೊಳ್ಳೆ

ವಾಣಿಜ್ಯೋದ್ಯಮಿ ಜಿಂಡಾಲ
ಹಾಕಿಹ ಭಾರೀ ಪೆಂಡಾಲ:
ತಿಂದ್ ಅನ್ನಾನ ಅರಗಿಸ್ತಾನೆ,
ಕೊಬ್ಬಿರೊ ಬೊಜ್ನ ಸೊರಗಿಸ್ತಾನೆ,
ನೋಡೋರ್‍ನೆಲ್ಲ ಬೆರಗಿಸ್ತಾನೆ,
ಬಡ ಕನ್ನಡಿಗರ ನೆಲ, ಹಣ ದೋಚಿ
ಪುಢಾರಿ ಖಳರ ಈ ಬಾಲಂಗೋಚಿ
ಹಿರಿ ಹಿರಿ ಹಿಗ್ಗಿಹ ಬಲೂನಿನಂತೆ
ಉತ್ತರ ರಾಜ್ಯದ ಚಂಡಾಲ.
*****