ಮೋಡ ಉಸುರಿತು

ಮೋಡ ಉಸುರಿತು ನನಗೆ; “ನಾಶ ಹೊಂದುವೆನು”.
ಇರುಳು ನುಡಿಯಿತು; “ನಾನು ಜಿಗಿವೆನರುಣೋದಯದ
ಅಗ್ನಿ ಕುಂಡದೊಳು”.

“ಅವನ ಹೆಜ್ಜೆಯ ಗುರುತಿನಂತೆ ಮೌನದಲಿರುವೆ”
ಒಡನುಡಿಯಿತಿಂದು ನೋವು.
ನನ್ನ ಬಾಳೆನೆಗೆ ಹೇಳಿತು: “ಮಾನವತೆಯಲ್ಲಿ ಕರಗುವನು”
“ನನ್ನ ಬೆಳಕುಗಳೆಲ್ಲ ನಿನ್ನ ಭಾವನೆಗಳನು
ಚಣ ಚಣಕು ಮುದ್ದಿಸುವವು”
ನುಡಿಗೊಟ್ಟಿತಿಂತು ಇಳೆಯು.
ಪ್ರೇಮವೆಂದಿತು: “ದಿನಗಳುರುಳುವವು, ಆದರೂ,
ನಿನಗಾಗಿ ನಾನಂತು ಕಾದೆ ಕಾಯುವೆನು.”
ಸಾವು ಹೇಳಿತು: “ನಿನ್ನ ಬಾಳದೋಣಿಯ ನಾನು
ಕಡಲಾಚೆ ದಾಟಿಸುವೆನು”.
*****
ರವೀಂದ್ರರ ’`Fruit-Gathering’: LIV