ಕೃಷ್ಣೆ

ಇರುಳು ಇನ್ನೂ ಹೊದ್ದಿಲ್ಲ
ಧರೆಯ
ಇಂದ್ರನ ಸಹಸ್ರ ಸಹಸ್ರ ನಯನ
ತಾರೆ,ತೆರೆದಿಲ್ಲ ಪೂರ್ಣ ಬುದ್ಧಿರಾಗಸದ
ಮೈಯ
ಹೆಡೆಯೆತ್ತದ ರಭಸಕ್ಕಲ್ಲದ ಗಾಳಿ
ತೂಗಿ , ನಿತ್ಯ ಹರಿತ್ತಿನ ಮಳೆಕಾಡು
ಭವ್ಯ
ಸುಳಿದಾಡುವ
ವನ್ಯ
ಅದೋ
ಬೂದಿ ಮುಚ್ಚಿದ ಕೆಂಡ, ಕುಟೀರ
ಒಳಗಾದವಳು ಐವರಿಗೆ.
ಅಡುವ ಅಗ್ನಿಹೋತ್ರದಗ್ನಿ ಮುಂದೆ
ಮಣ್ಣ ಗೋಡೆಗೊರಗಿದ
ದೇವಿ
ಕೆಸರಿಗಂಟಿದ ನಿರೀಕ್ಷೆ
ಕಣ್ಗಳ , ಪದ್ಮ, ಸೂರ್ಯಮುಖಿ.

ಸಂಧಿ ಪ್ರಕಾಶ ರಾಗದ , ಅಲೆ ಅಲೆ
ಹರಡಿ – ಹಬ್ಬಿದ ಸಾಗರ
ಜೀವ ಭಾವದ ಚೆಲುವು
ತನ್ನೊಡಲೊಮ್ಮೆ ತೀರಕ್ಕೆ ಹೊರಳಿಸ
ಬಲ್ಲ ಭೂಮ್ಯಾಂತರಿಕ್ಷದ ತೆರೆ –
ಕೃಷ್ಣ ಬಂದ ಪಾಂಡವರ ಮನೆಗೆ
ಸಹಜ, ಮುರಳೀರವ
ಕೇಳಿದ , ಕುಶಲವೇ?
ಕರೆದಿರಾ ನನ್ನ?

ಹೊಯ್ದಾಟದ ಜ್ವಾಲೆ ಧಿಗ್ಗನೆದ್ದು ಉರಿದು
ಕೃಷ್ಣೆ ಕೂಗಿದಳು
ಕೃಷ್ಣಾ , ಕರೆದ್ದದ್ದು ನಾನು !

ಅವ ನಸುನಗುತ ಕೇಳಿದ – ತಂಗಿ
ನೀನೆಂದೆಯಾ? ಕರೆದದ್ದು?
ಯಾರು ನೀನು?
ದ್ರುಪದ ಕುವರಿ , ದ್ರೌಪದಿಯೇ?
ಪಾಂಚಾಲದ ಬೆಡಗಿ , ಪಾಂಚಾಲಿಯೇ?
ಕೃಷ್ಣೆಯೇ ?
ಯಾರಮ್ಮ ನೀನು?
ಕುರುಕುಲ ವಧು? ಐವರಿಗೊಮ್ಮೆಗೆ ಹೊದ್ದವಳು !

ಎಲ್ಲೋ ಏನೋ ಖತಿಗೊಂಡು
ವಿಲವಿಲನೆ ಒದ್ದಾಡಿ ಸಾವರಿಯದ್ದು
ಕೆಳಗೆ ಬಿದ್ದು ಕೃಷ್ಣೆಯ
ಕಣ್ಣು ತುಂಬೆಲ್ಲಾ ನೀರೇ ನೀರು.

ಬೆಂಕಿಯ ಕಪ್ಪು ಹೊಗೆ
ಕಾಣುವಷ್ಟು ದೂರ
ಅದಕ್ಹುಟ್ಟಿದ್ದು ಕೆಂಪು ತುಂಬೆ !
ಮೈತುಂಬಿ ರಸದುಂಬಿಯಾದ ಹಳ್ಳ
ಪಡೆದದ್ದು
ಕಾರ್ಮುಗಿಲ ಪ್ರಾಣದೊಲವ
ತಣ್ಣನೆಯ ಬೆಳ್ಳನೆಯ ಕೊರೆವ ಹಿಮದಪ್ಪುಗೆ

ಆ ಒಳಗು ಬೆಳಗು, ಕರಗನಾವರಿ
ಸಿದ್ದು ಕಡಲು, ಕಂಡಿದ್ದು ಮುಗಿಲು
ಉಳಿದವರು ನಿನ್ನಂತೆ -ನನ್ನಂತೆ
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.