“ಹೊರಗಡೆ ಎಲ್ಲಿದೆ? ಒಳಗಡೆ ಇದೆ ಸುಖ;
ತೊಳಲುತ ಬಳಲುವೆ ಏತಕೆ ಬಡ ಮಿಕ
ಹುಡುಕು ಮನದಲೆ, ಮನೆಯಲ್ಲೆ;
ಪೇಟೆ ಅಲೆಯದಿರು ಕೊಳ್ಳಲು ಗೋವ
ಅಡುಗೆಮನೆಯೊಳಿದ ಅರಸುವ ಖೋವ
ಪಾತ್ರೆಯ ಹಾಲಿನ ಕೆನೆಯಲ್ಲೆ.”
_ಭಜಿಸುತ ಗುರುಗಳ ಅಮೃತ ವಾಕ್ಯಗಳ,
ತ್ಯಜಿಸುತ ಒಮ್ಮೆಗೆ ಕೆರೆ ನದಿ ಕೊಳಗಳ
ಹಾಕಿರುವನು ಮೂಳ
ಅಕ್ಟೇರಿಯಮ್ಮಿನಲಿ ಗಾಳ.
*****